News Kannada
Sunday, February 05 2023

ಮಂಗಳೂರು

ಮಂಗಳೂರು: ಹಿಂದೂ ಕಾರ್ಯಕರ್ತರ ಬಂಧನ

Photo Credit : News Kannada

ಮಂಗಳೂರು:  ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಹಿಂದು ಬಾಲಕಿಗೆ ಕಿರುಕುಳ ನೀಡಿದ ಕಾರಣ ಮುಸ್ಲಿಂ ಯುವಕನಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹಿಂದೂ ಕಾರ್ಯಕರ್ತನನ್ನು ಸುಬ್ರಹ್ಮಣ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಧಾಕೃಷ್ಣ (45) ಮತ್ತು ವಿಶ್ವಾಸ್‌ (19) ಎಂದು ಗುರುತಿಸಲಾಗಿದೆ.

ಹಿಂದೂ ಬಾಲಕಿಗೆ ಕಿರುಕುಳ ನೀಡಿದ ಆಫೀದ್‌ ವಿರುದ್ಧ ಬಾಲಕಿಯ ತಾಯಿ ದೂರು ನೀಡಿದ್ದು, ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಆದರೆ ಇದರ ವಿರುದ್ಧ ಪ್ರತಿ ದೂರು ನೀಡಿದ ಆಫೀದ್‌ “ಪರಿಚಯವಿಲ್ಲದ ಎರಡು–ಮೂರು ಜನರು ನನ್ನನ್ನು ಬಲವಂತದಿಂದ ಎಳೆದೊಯ್ದು ಜೀಪಿನಲ್ಲಿ ಹಾಕಿದರು. ಮತ್ತೆ ಐದಾರು ಜನ ಸೇರಿ ಸಮೀಪದ ಕುಮಾರಧಾರ ಜಂಕ್ಷನ್‌ ಬಳಿಯ ಹಳೆ ಕಟ್ಟಡದ ಕೊಣೆಯೊಳಗೆ ಕರೆದೊಯ್ದು ಕೂಡಿಹಾಕಿದರು. ಸುಮಾರು 10-12 ಮಂದಿ ಸೇರಿ ದೊಣ್ಣೆ ಮತ್ತು ಬೆತ್ತಗಳಿಂದ ನನಗೆ ಹೊಡೆದ್ದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಿಂದೂ ಬಾಲಕಿಗೆ ಕಿರುಕುಳ ನೀಡಿದ ಹಪೀಜ್ ಗೆ ಹಲ್ಲೆ ಮಾಡಿದ ಇಬ್ಬರು ಹಿಂದೂ ಕಾರ್ಯಕರ್ತರನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ‘ಬಂಧಿತರಿಬ್ಬರೂ ಕಡಬ ಸುಬ್ರಹ್ಮಣ್ಯ ಪರಿಸರದವರು ಎನ್ನಲಾಗಿದೆ.

See also  ನಾರಾವಿ: ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು