ಮಂಗಳೂರು: ಮಂಗಳೂರಿನ ರಾಮಕೃಷ್ಣ ಮಠವು 12ನೇ ಜನವರಿ, 2023ರಂದು ಆಶ್ರಮದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಅಪರಾಹ್ನ 1:15ರ ವರೆಗೆ ರಾಷ್ಟ್ರೀಯ ಯುವ ದಿನೋತ್ಸವವನ್ನುಆಚರಿಸುತ್ತಿದೆ.
ಆಧುನಿಕ ಭಾರತದ ನಿರ್ಮಾತೃ ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12 ಅನ್ನು 1985ರ ನಂತರ ಪ್ರತಿ ವರ್ಷವೂ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಬೇಕೆಂದು ಭಾರತ ಸರ್ಕಾರವು 1984ರಲ್ಲಿ ನಿರ್ಣಯಿಸಿತು. ಭಾರತ ಸರ್ಕಾರವು “ಸ್ವಾಮೀಜಿಯವರ ಸಿದ್ಧಾಂತ ಮತ್ತುಅವರ ಪರಿಶ್ರಮ ಹಾಗೂ ಜೀವಿಸಿದ ಆದರ್ಶಗಳು ಭಾರತೀಯ ಯುವ ಜನತೆಗೆ ಅಪಾರ ಸ್ಫೂರ್ತಿಯನ್ನು ನೀಡಬಲ್ಲವು” ಎಂದು ಯುವ ದಿನಾಚರಣೆಯ ಕಾರಣವನ್ನು ತಿಳಿಸಿತ್ತು.
ಭಾರತವುಜಾಗತಿಕವಾಗಿಅತಿ ಹೆಚ್ಚಿನಯುವಸಂಪತ್ತನ್ನು ಹೊಂದಿರುವದೇಶ. ನಮ್ಮದೇಶದಲ್ಲಿ ಪ್ರತಿಯೊಬ್ಬ ಮೂರನೆಯ ವ್ಯಕ್ತಿಯೂಯುವಕ/ಯುವತಿ. ಆದುದರಿಂದಲೇ ನಮ್ಮದೇಶವು ಅವಕಾಶಗಳ ಭೂಮಿಯಾಗಿದೆಮತ್ತುಅಪಾರ ಸಾಧ್ಯತೆಗಳನ್ನೊಳಗೊಂಡಿದೆ. ನಮ್ಮಯುವಜನಾಂಗವೇ ಭಾರತದ ಭವಿಷ್ಯ. ನಮ್ಮಯುವತೆಯಲ್ಲಿ – ಬಲಿಷ್ಠ ದೇಶವನ್ನುಕಟ್ಟಲು ಹಾಗೂದೇಶದ ಪುನರುತ್ಥಾನಕ್ಕಾಗಿ-ಅವರಹೊಣೆಗಾರಿಕೆಯನ್ನು ನವೀಕರಿಸಲು ಈ ರಾಷ್ಟ್ರೀಯ ಯುವ ದಿನಾಚರಣೆಯು ಒಂದು ಸುಸಂದರ್ಭ.
ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಗೆ ನೋಂದಣಿಯಿಂದ ಪ್ರಾರಂಭವಾಗುತ್ತದೆ; 9:20ಕ್ಕೆ ಸ್ವಾಮಿ ವಿವೇಕಾನಂದರ ಮೂರ್ತಿಗೆ ಪುಷ್ಪಮಾಲಾರ್ಪಣೆ; 9:30ಕ್ಕೆ ಆಶ್ರಮದ ಬ್ರಹ್ಮಚಾರಿಗಳಿಂದ ವೇದಮಂತ್ರ ಪಠಣ; ನಂತರ ಭಾರತೀಯ ಸೇನೆಯ ನಿವೃತ್ತ ಅಧಿಕಾರಿಯಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ರವರು ಅತಿಥಿಗಳ ಸ್ವಾಗತ ಮತ್ತು ಪರಿಚಯವನ್ನು ಮಾಡಿಕೊಡುತ್ತಾರೆ.
ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿಜಿತಕಾಮಾನಂದಜಿಯವರು ಪ್ರಾಸ್ತಾವಿಕ ಭಾಷಣವನ್ನು ಮಾಡುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಜಿಲ್ಲಾಧಿಕಾರಿಗಳಾದ ಎಮ್. ಆರ್. ರವಿಕುಮಾರ್ರವರು ಯುವದಿನೋತ್ಸವವನ್ನು ಉದ್ಘಾಟಿಸಿ, ಉದ್ಘಾಟನಾ ಭಾಷಣವನ್ನು ಮಾಡುತ್ತಾರೆ. ರಥಬೀದಿಯ ಸರ್ಕಾರಿ ಪ್ರಥಮ ದರ್ಜೆಕಾಲೇಜಿನ ಪ್ರಾಂಶುಪಾಲರಾದ ಜಯಕರ್ ಭಂಡಾರಿಯವರು ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸುತ್ತಾರೆ.
ಉದ್ಘಾಟನಾ ಸಮಾರಂಭದ ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳಿರುತ್ತವೆ. ಸ್ವಾಮಿ ಮಂಗಳನಾಥಾನಂದಜಿ (ರಾಮಕೃಷ್ಣ ಮಿಷನ್, ಶಿವನಹಳ್ಳಿ, ಬೆಂಗಳೂರು) ಯವರು“ಶಕ್ತಿಯೇಜೀವನ – ನವ ಯುಗಕ್ಕೆ ನವ ಸಂದೇಶ” ಎಂಬ ವಿಷಯವನ್ನುಕುರಿತು ಮಾತನಾಡಲಿದ್ದಾರೆ. ಅಕ್ಷಯಾ ಗೋಖಲೆ (ಉಪನ್ಯಾಸಕರು, ಕಾರ್ಕಳ) ಯವರು“ಯುವಕರು ಮತ್ತು ರಾಷ್ಟ್ರ ನಿರ್ಮಾಣ– ವಿವೇಕಪಥ” ಎಂಬ ವಿಷಯವಾಗಿ ಮಾತನಾಡಲಿದ್ದಾರೆ. ವೃಶಾಂಕ್ ಭಟ್ (ಸಂಪಾದಕರು, ‘ವಿಕ್ರಮ’ ಕನ್ನಡ ವಾರಪತ್ರಿಕೆ ಹಾಗೂ ಸಂವಾದಚಾನೆಲ್) ರವರ “ವಿವೇಕಾನಂದರ ದೃಷ್ಟಿಯಲ್ಲಿ ಭಾರತ ಮತ್ತು ಭಾರತೀಯ ಯುವ ಜನತೆಯ ಕರ್ತವ್ಯ” ಎಂಬ ವಿಷಯದ ಮೇಲೆ ಮಾತನಾಡುವರು.
ಆಸಕ್ತಿಯುಳ್ಳ ಎಲ್ಲ ಯುವಕ/ಯುವತಿಯರನ್ನುಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸುತ್ತೇವೆ.