News Kannada
Monday, January 30 2023

ಮಂಗಳೂರು

ಪೌರ ಸಂಸ್ಥೆಗಳ ಹಂಗಾಮಿ ನೌಕರರ ಹಿತಕಾಯಬೇಕಾಗಿ ಸರ್ಕಾರವನ್ನು ಆಗ್ರಹಿಸಿದ ಮಂಜುನಾಥ ಭಂಡಾರಿ

Demand for amendment of certain rules of Gram Swaraj and Panchayati Raj
Photo Credit : Facebook

ಮಂಗಳೂರು: ರಾಜ್ಯದ 312 ಪೌರಸಂಸ್ಥೆಗಳ 25 ಸಾವಿರಕ್ಕೂ ಹೆಚ್ಚಿನ ಹಂಗಾಮಿ ನೌಕರರನ್ನುಕಾಯಂ ಮಾಡಲು ಹಾಗೂ ಕಾಯಂ ಮಾಡಲು ಸಾಧ್ಯವಾಗದಿರುವ ನೌಕರರಿಗೆ ನೇರ ನಗದು ಪಾವತಿ ವ್ಯವಸ್ಥೆ ವ್ಯಾಪ್ತಿಗೆ ತರಲು, ಸರ್ಕಾರ ಈಗಾಗಲೇ ಕಾರ್ಯೋನ್ಮುಖವಾಗಿರುವ ಕುರಿತು ವರದಿಯಾಗಿದೆ.

ಈ ಬಗ್ಗೆ ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಮಂಜುನಾಥ ಭಂಡಾರಿಯವರು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 986 ಕ್ಕೆ ಉತ್ತರಿಸಿರುವ ಮಾನ್ಯ ಪೌರಾಡಳಿತ ಸಚಿವರು,ರಾಜ್ಯದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಹೊರಗುತ್ತಿಗೆ ಹಾಗೂ ದಿನಗೂಲಿ ಆಧಾರದ ಮೇಲೆ ಕಾಂರ್ಯನಿರ್ವಹಿಸುತ್ತಿರುವ ನೀರು ಸರಬುರಾಜು ಸಹಾಯಕರು/ಹೆಲ್ಪರ್/ವಾಲ್ವಮನ್‌ಗಳನ್ನು ವಿಶೇಷ ನೇಮಕಾತಿಯಡಿ ಪರಿಗಣಿಸುವಕುರಿತು ಹಾಗೂ ಕಾಯಂ ಮಾಡಲು ಸಾಧ್ಯವಾಗದಿರುವ ನೌಕರರಿಗೆ ನೇರ ನಗದು ಪಾವತಿ ವ್ಯವಸ್ಥೆ ವ್ಯಾಪ್ತಿಗೆತರವುದಾಗಿ ಲಿಖಿತ ಉತ್ತರ ನೀಡಿದ್ದರು.

ಶಾಸಕರು ಸರ್ಕಾರದ ಈ ತೀರ್ಮಾನವನ್ನು ಸ್ವಾಗತಿಸಿದ್ದು, ಈ ಬಗ್ಗೆ ಸರ್ಕಾರ ಕೂಡಲೇ ಮುಂದಿನ ಕ್ರಮಕೈಗೊಂಡು ಪೌರ ಸಂಸ್ಥೆಗಳ ಹಂಗಾಮಿ ನೌಕರರ ಹಿತಕಾಯಬೇಕಾಗಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

See also  ಮಡಿಕೇರಿ: ಧರ್ಮಗುರುಗಳ ಮೇಲೆ ಹಲ್ಲೆ- ಸೂಕ್ತ ಕ್ರಮಕ್ಕೆ ಒತ್ತಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು