ಮಂಗಳೂರು: ದಿಲ್ಲಿಯಲ್ಲಿ, ರಾಜ್ಯದಲ್ಲಿ, ಮನಪಾದಲ್ಲಿ ಬಿಜೆಪಿ ಆಡಳಿತ ಇದೆ. ಶಾಸಕ ಕಾಮತರು ಅನುದಾನ ತಾರದ್ದರಿಂದ ಚರಂಡಿ ರಿಪೇರಿ ಮಾಡಲು ಕೂಡ ಸಾಲ ಪಡೆಯುವುದು ಈ ಸರಕಾರದ, ಜನಪ್ರತಿನಿಧಿಗಳ ಸಂಪೂರ್ಣ ವಿಫಲತೆ ಎಂದು ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಐವನ್ ಡಿಸೋಜಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಗರಪಾಲಿಕೆಯ ಸಾಮಾನ್ಯ ನಿಧಿಯು ಆಯಾ ವಾರ್ಡ್ಗಳ ಅಭಿವೃದ್ಧಿಗೆ ಇದೆ. ಆದರೆ ಬಿಜೆಪಿ ಆಡಳಿತವು ಅದನ್ನು ಎಲ್ಲೆಲ್ಲೋ ಬಳಸಿ ಸಾಲ ಪಾಲಿಕೆ ಮಾಡುತ್ತಿದೆ. ಶಾಸಕ ವೇದವ್ಯಾಸ ಕಾಮತರು ಯಾಕೆ ಅನುದಾನ ತಂದಿಲ್ಲ. ತಂದ ಯೋಜನೆ ಯಾವುದು? ಎಷ್ಟು ಉದ್ಯೋಗ ಸೃಷ್ಟಿಸಿದ್ದೀರಿ. ಬಿಳಿ ಕಾಗದ (ಶ್ವೇತ ಪತ್ರ) ಹೊರಡಿಸಿ. ಕದ್ರಿ ಪಾರ್ಕ್ ರಸ್ತೆಗೆ 15 ಕೋಟಿ ವೆಚ್ಚ ಮಾಡಿ, ವಾಹನ ಸವಾರಿ ನಿಲುಗಡೆ ಎಲ್ಲ ಕಷ್ಟ ಮಾಡಿದ್ದಿರಿ. ಉದ್ಯಾನದ ಹೊರಗೆ ಲಕಲಕ, ಒಳಗೆ ಏನೂ ಮಾಡಿಲ್ಲ. ಕಾಂಗ್ರೆಸ್ ಕಾಲದ ಕಾರಂಜಿ ಮೊದಲಾದವನ್ನು ಹಾಳು ಮಾಡಲಾಗಿದೆ ಎಂದು ಡಿಸೋಜಾ ಹೇಳಿದರು.
ಸ್ಮಾರ್ಟ್ ಸಿಟಿ ಲಾಭದ್ದು ಮಾಡಿದ್ದೀರಿ, ಜನರಿಗೆ ಬೇಕಾದ್ದು ಮಾಡಿದ್ದೀರಿ. ಬಂದರಿನಲ್ಲಿ ಮೀನು ದಕ್ಕೆ ಅಪಾಯಕಾರಿಯಾಗಿ ಕುಸಿದಿದೆ. ಬಂದರು ಅಭಿವೃದ್ಧಿಗೆ ನಮ್ಮ ಶಾಸಕರಾಗಿದ್ದ ಮೊಯ್ದಿನ್ ಬಾವಾ 11 ಕೋಟಿ ಅನುದಾನ ತಂದರು. ಆ ಕೆಲಸ ನಿಲ್ಲಿಸಿ ಹಾಳುಮಾಡಿದ್ದೀರಿ. ಜೆ. ಆರ್. ಲೋಬೋ ಶಾಸಕರಿದ್ದಾಗ ಬಡವರಿಗೆ ಹಕ್ಕು ಪತ್ರ ನೀಡಿ, ಸಾಲದ ವ್ಯವಸ್ಥೆ ಮಾಡಿದೆವು. ನೀವು ಆಶ್ರಯ ಮನೆ ಆಗದಂತೆ ಮಾಡಿದ್ದೀರಿ. ನಮಗೆ ಶಾಸಕರ, ಮನಪಾ ಕಮಿಶನರ್ರ ಉತ್ತರ ಬೇಕು. ಜನರಿಗಾಗಿ ಈ ನಿಟ್ಟಿನಲ್ಲಿ ಹೋರಾಟ ಅಗತ್ಯ ಬೀಳುವಂತೆ ಮಾಡಬೇಡಿ ಎಂದು ಐವಾನ್ ಡಿಸೋಜಾ ಹೇಳಿದರು.
ಮನಪಾ ಪ್ರತಿಪಕ್ಷ ನಾಯಕ ನವೀನ್ ಡಿಸೋಜಾ ಮಾತನಾಡಿ ಕೆವೈಡಿಸಿ ಕೆಲಸ ಸರಿಯಾಗಿ ಆಗುತ್ತಿಲ್ಲ. ನೀರು ಸಂಪರ್ಕಕ್ಕೆ ಹಳೆಯದಕ್ಕೆ ಜೋಡಿಸುತ್ತಿದ್ದಾರೆ. ಪಚ್ಚನಾಡಿ ಅವ್ಯವಸ್ಥೆ ನಾವು ಗಮನಿಸಬೇಕು ಎಂದು ಹೇಳಿದರು.
ಮಾಜೀ ಮೇಯರ್ ಶಶಿಧರ ಹೆಗ್ಡೆ ಮಾತನಾಡಿ ನಾನಾ ಮೂಲದ ಆದಾಯ ಪಾಲಿಕೆಗೆ ಇದೆ. ನಗರದಲ್ಲಿ ಅನಧಿಕೃತ ಕಟ್ಟಡಗಳು ಹಲವು ಇವು. ಅವುಗಳ ತೆರಿಗೆ ಸರಿಯಾಗಿ ವಸೂಲಿ ಮಾಡಿದರೆ ಪಾಲಿಕೆಯು ಅಭಿವೃದ್ಧಿ ಗೆ ಸಾಲ ಪಡೆಯುವ ಅಗತ್ಯವಿಲ್ಲ. ನಾವು ದೊಡ್ಡ ಲಾಭದ ಕೆಲಸಕ್ಕೆ ಸಾಲ ಪಡೆದದ್ದಿದೆ. ಚರಂಡಿ ಸಾಲ ಅಲ್ಲ. ಅದನ್ನು ವಿರೋಧಿಸುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಲೀಂ, ಭಾಸ್ಕರ ರಾವ್, ಲೀನಾ ಟೆನಿಸ್, ಆಳ್ವ ಮೊದಲಾದವರು ಉಪಸ್ಥಿತರಿದ್ದರು.