ಮಂಗಳೂರು, ಜ.12: ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 161ನೇ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಯುವ ದಿನಾಚರಣೆಯನ್ನುಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾರತೀಯ ಸೇನೆಯ ಮಾಜಿ ಸೈನಿಕ ಗೋಪಿನಾಥ್‌ರಾವ್ ವ್ಯವಸ್ಥಾಪನಾ ಸಮಿತಿಸದಸ್ಯರು, ರಾಮಕೃಷ್ಣ ಮಿಷನ್, ಮಂಗಳೂರು ಅವರು ಮಾತನಾಡಿ“ಶಿಕ್ಷಣದ ಮೂಲಕ ಸ್ವಾಭಿಮಾನ, ಆತ್ಮವಿಶ್ವಾಸ ಮತ್ತು ಮೌಲ್ಯಗಳನ್ನು ಬೆಳೆಸಿಕೊಳ್ಳಬಹುದು. ಅದುಜೀವನದ ಹೋರಾಟ, ಚಾರಿತ್ರ್ಯದ ಶಕ್ತಿ, ಮಾನವೀಯತೆಯ ಮನೋಭಾವ ಮತ್ತು ಸಿಂಹದ ಧೈರ್ಯವನ್ನು ಸಜ್ಜುಗೊಳಿಸಲು ಸಹಾಯ ಮಾಡುತ್ತದೆ”ಎಂದು ಹೇಳಿದರು.
ಜ್ಞಾನವು ವೈವಿಧ್ಯತೆಯ ನಡುವೆಏಕತೆಯನ್ನು ಕಂಡುಕೊಳ್ಳುವುದು. ಶಿಕ್ಷಣವು ನೈತಿಕ ಮತ್ತು ಬೌದ್ಧಿಕ ಎರಡನ್ನು ಕೇಂದ್ರೀಕರಿಸಬೇಕು. ಇದರಿಂದಅದು ವ್ಯಕ್ತಿಯನ್ನು ರೂಪಿಸಲು, ಮನಸ್ಸಿನ ಶಕ್ತಿಯನ್ನು ಹೆಚ್ಚಿಸಲು ಮತ್ತು ಬುದ್ಧಿಶಕ್ತಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಅಗತ್ಯವಿರುವಾಗ ತೆರೆದುಕೊಳ್ಳುವ ಮೂರು ವಿಷಯಗಳಿವೆ – ಛತ್ರಿ, ಪ್ಯಾರಾಶೂಟ್ ಮತ್ತು ಮನಸ್ಸು. ಮುಕ್ತ ಮನೋಭಾವವನ್ನು ಹೊಂದಿರಿ ಮತ್ತುಎಲ್ಲವನ್ನೂ ಸ್ವೀಕರಿಸುವವರಾಗಿ ಎಂದುಅವರು ಹೇಳಿದರು.
ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾಕಾಮತ್ ಜಿ ಅಧ್ಯಕ್ಷೀಯ ಭಾಷಣದಲ್ಲಿ ಶಕ್ತಿಯ ವಿದ್ಯಾರ್ಥಿಗಳು ತಿಳಿದೋ ತಿಳಿಯದೆಯೋ ಈ ಸಂಸ್ಥೆಯಲ್ಲಿ ಲಭ್ಯವಿರುವ ಸಂಸ್ಕೃತಿ, ಶಿಸ್ತು ಮತ್ತು ಮೌಲ್ಯಗಳನ್ನು ಮೈಗೂಡಿಸಿಕೊಂಡು ಈ ರಾಷ್ಟ್ರದ ಯೋಗ್ಯ ನಾಗರಿಕರಾಗುವತ್ತ ಸಾಗುತ್ತಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಶಕ್ತಿ ಪದವಿ ಪೂರ್ವಕಾಲೇಜು ಪ್ರಾಂಶುಪಾಲರಾದ ಪ್ರಥ್ವಿರಾಜ್ ಅವರು ಉಪಸ್ಥಿತರಿದ್ದರು ಹಾಗೂ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಸಮಾಜ ವಿಜ್ಞಾನ ಅಧ್ಯಾಪಕಿ ಸ್ಮಿಶಾ ವಿನಿಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಎಲ್ಲಾ ಬೋಧಕ – ಭೋಧಕೇತರ ಸಿಬ್ಬಂದಿಗಳು ಹಾಗೂ ಮಕ್ಕಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.