ಮಂಗಳೂರು: ಮಂಗಳೂರಿನ ಪ್ರತಿಷ್ಟಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಚರಸ್ ಮತ್ತು ಗಾಂಜಾ ಪೂರೈಸುತ್ತಿದ್ದ ಆರೋಪದಲ್ಲಿ ಮಂಗಳೂರಿನ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ.
ಕಾರ್ಕಳ ಬಜಗೋಳಿಯ ಪ್ರವಾಸಿ ಗೈಡ್ ಸುಕೇತ್ ಕಾವಾ, ಕಾರ್ಕಳ ಪುಲ್ಕೇರಿಯ ಸುನೀಲ್ ಮತ್ತು ತಮಿಳುನಾಡು ಕೊಯಮುತ್ತೂರಿನ ಅರವಿಂದ ಕೆ ಬಂಧಿತರಾದವರು.
ಇವರಿಂದ ೫೦೦ ಗ್ರಾಂ ಚರಸ್ ಮತ್ತು ೧ ಕಿಲೋ ಗಾಂಜಾವನ್ನು ಸಾಗಾಟಕ್ಕೆ ಬಳಸಿದ ಕಾರು ಸಹಿತ ವಶಪಡಿಸಿಕೊಳ್ಳಲಾಗಿದೆ. ಒಟ್ಟು ಮೌಲ್ಯ ೮ ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಇವರು ಹಿಮಾಚಲ ಪ್ರದೇಶದಿಂದ ಮಾದಕ ದ್ರವ್ಯಗಳನ್ನು ತಂದು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.