ಮಂಗಳೂರು, ಜ.13: ಜೆಡಿಎಸ್ ಜಿಲ್ಲಾಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರ ಸುಶೀಲ್ ನೊರೊನ್ಹಾ ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾದರು.
ಅವರು 60 ವರ್ಷ ವಯಸ್ಸಿನವರಾಗಿದ್ದರು ಮತ್ತು ಕುಲಶೇಖರ್ ಮೂಲದವರು. ವೃತ್ತಿಯಲ್ಲಿ ವಿದ್ಯುತ್ ಗುತ್ತಿಗೆದಾರರಾಗಿದ್ದ ಅವರು ಹಲವಾರು ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಅವರು ಮಂಗಳೂರು ಧರ್ಮಪ್ರಾಂತ್ಯದ ಪಾಲನಾ ಪರಿಷತ್ತಿನ ಹಿಂದಿನ ಕಾರ್ಯದರ್ಶಿ ಮತ್ತು ಮಂಗಳೂರಿನ ಸೇಂಟ್ ಕ್ರಿಸ್ಟೋಫರ್ ಅಸೋಸಿಯೇಶನ್‌ನ ಗೌರವಾಧ್ಯಕ್ಷರೂ ಆಗಿದ್ದರು.
ಸುಶೀಲ್ ನೊರೊನ್ಹಾ ಅವರು, ಎಡ್ನಾ ನೊರೊನ್ಹಾ ಅವರ ಪತಿ, ಏಂಜೆಲೊ ನೊರೊನ್ಹಾ ಅವರ ತಂದೆ, ಸ್ಟೆಲ್ಲಾ ಮತ್ತು ಲೇಟ್ ಜೋಸೆಫ್ ನೊರೊನ್ಹಾ ಅವರ ಮಗ, ವಕೀಲ ಎಂ.ಪಿ. ನೊರೊನ್ಹಾ ಅವರ ಸಹೋದರ. ವಿದೇಶದಲ್ಲಿ ಉದ್ಯೋಗದಲ್ಲಿ ಇರುವ ಪುತ್ರನ ಆಗಮನದ ಬಳಿಕ ಪಾರ್ತೀವ ಶರೀರದ ಅಂತಿಮ ಸಂಸ್ಕಾರ ಜರಗಲಿದೆ.
ಸುಶೀಲ್ ನೊರೊನ್ಹಾ ಅವರ ನಿಧನಕ್ಕೆ ಎಮ್.ಬಿ.ಸದಾಶಿವ, ಜೆ.ಡಿ.ಎಸ್ ರಾಜ್ಯ ವಕ್ತಾರ ಸಂತಾಪ ಸೂಚಿಸಿದ್ದಾರೆ.