ಮಂಗಳೂರು: ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಮಂಗಳೂರಿನ ಯುವ ನ್ಯಾಯವಾದಿ ರಾಹುಲ್ ಶೆಟ್ಟಿಗಾರ್ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ನ್ಯೂಸ್ ಕನ್ನಡದ ಜೊತೆ ಮಾತನಾಡಿದ ರಾಹುಲ್ ಶೆಟ್ಟಿಗಾರ್ ನಾನು ಪರೀಕ್ಷೆಯಲ್ಲಿ ಪಾಸ್ ಆಗತ್ತೇನೆ ಅಂತ ಗೊತ್ತಿತ್ತು ಆದರೆ ರ್ಯಾಂಕ್ ಬರುತ್ತೆ ಅಂತ ಅಂದುಕೊಂಡಿರಲಿಲ್ಲ ಖುಷಿ ಜೊತೆ ಆಶ್ಚರ್ಯ ಕೂಡ ಆಗುತ್ತದೆ. ನನ್ನ ತಂದೆ ತಾಯಿ ಹಾಗೂ ಆಫೀಸ್ನಲ್ಲಿ ಎಲ್ಲರೂ ಸಪೋರ್ಟಿವ್ ಆಗಿದ್ರು. ನಾನು ಪರೀಕ್ಷೆ ಮುಗಿಯುವ ತನಕ ದಿನಕ್ಕೆ ಮೂರು ಗಂಟೆಗಳಕಾಲ ಓದುತ್ತಿದ್ದೆ. ಜುಲೈನಲ್ಲಿ ಪ್ರಿಲಿಮ್ಸ್ ಮತ್ತು ಆಕ್ಟೋಬರ್ನಲ್ಲಿ ಮುಖ್ಯ ಪರೀಕ್ಷೆ ಮತ್ತೆ ಡಿಸೆಂಬರ್ ನಲ್ಲಿ ಸಂದರ್ಶನ ಇತ್ತು ಇವೆಲ್ಲವನ್ನು ಎದುರಿಸಿದ್ದೆ ಆದರೆ ರ್ಯಾಂಕ್ ಬಂದದ್ದು ಮಾತ್ರ ಆಶ್ಚರ್ಯ ಎನ್ನುತ್ತಾರೆ.
ಪಿ ಪಿ ಹೆಗ್ಡೆ ಅವರು ತುಂಬಾ ಸಪೋರ್ಟಿವ್ ಆಗಿದ್ದು, ಪ್ರತಿಯೊಂದು ಫೀಲ್ಡ್ ನಲ್ಲೂ ಸಹಾಯ ಮಾಡಿದ್ದಾರೆ. ನನ್ನ ಪ್ರೋಫೇಷನಲ್ ಲೈಫ್ ನ ಯಶಸ್ಸಿನ ಹೆಚ್ಚಿನ ಭಾಗ ನನ್ನ ಸೀನಿಯರ್ಸ್ ಗೆ ಹೋಗುತ್ತದೆ ಎನ್ನುತ್ತಾರೆ ರಾಹುಲ್ ಶೆಟ್ಟಿಗಾರ್
ನ್ಯೂಸ್ ಕನ್ನಡದ ಜೊತೆ ಮಾತನಾಡಿದ ಸಹ ವಕೀಲರಾದ ಗಿರೀಶ್ ಶೆಟ್ಟಿ ‘ರಾಹುಲ್ ಶೆಟ್ಟಿಗಾರ್ ಒಬ್ಬ ಒಳ್ಳೆಯ ಹಾರ್ಡ್ ವರ್ಕಿಂಗ್ ವ್ಯಕ್ತಿ. ಅವರು ಈ ಪರೀಕ್ಷೆಯಲ್ಲಿ ಪಾಸ್ ಆಗುತ್ತಾರೆ ಅಂತ ಗೊತ್ತಿತ್ತು ಆದರೆ ರ್ಯಾಂಕ್ ಬರ್ತಾರೆ ಅಂತ ಗೊತ್ತಿರಲಿಲ್ಲ ರ್ಯಾಂಕ್ ಬಂದದ್ದು ಕೇಳಿ ತುಂಬಾ ಖುಷಿಯಾಗಿದೆ. ಅವರಿಗೂ ಕೂಡ ಐದರಿಂದ ಆರು ವರ್ಷದ ಸರ್ವಿಸ್ ಇದೆ. ಎಲ್ಲ ರೀತಿಯ ವಕಾಲತ್ತನ್ನು ಕೂಡ ತುಂಬ ಶ್ರದ್ಧೆಯಿಂದ ನಿರ್ವಹಿಸುತ್ತಾರೆ ಎಂದರು.