ಮಂಗಳೂರು: ನಗರದ ಬಂಗ್ರ ಕೂಳೂರಿನಲ್ಲಿ ಗೋಲ್ಡ್ಫಿಂಚ್ ಸಿಟಿಯಲ್ಲಿ ದಿನಾಂಕ 22.01.2023ರ ಭಾನುವಾರದಂದು ನಡೆಯಲಿರುವ 6ನೇ ವರ್ಷದರಾಮ ಲಕ್ಷ್ಮಣ ಜೋಡುಕೆರೆ ಮಂಗಳೂರು ಕಂಬಳದಂದು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಲರ್ಕೂಟವರ್ಣಚಿತ್ರ ಸ್ಪರ್ಧೆ ಹಾಗೂ ಛಾಯಚಿತ್ರ ಸ್ಪರ್ಧೆಯನ್ನು ವಿವಿಧ ವಿಭಾಗಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ರಂಗ್ದಎಲ್ಯ– 10ನೇ ವಯಸ್ಸಿನ ತನಕ (5ನೇ ತರಗತಿ ವರೆಗೆ), ರಂಗ್ದ ಮಲ್ಲ– 10 ರಿಂದ 15 ವಯಸ್ಸಿನ ತನಕ (10ನೇ ತರಗತಿ ವರೆಗೆ), ರಂಗ್ದಕೂಟ– ಮುಕ್ತ, ಹೀಗೆ ಕಲರ್ಕೂಟವರ್ಣಚಿತ್ರ ಸ್ಪರ್ಧೆಯು 3 ವಿಭಾಗಳಲ್ಲಿ ನಡೆಯಲಿದೆ.
ಭಾಗವಹಿಸುವವರು ಶಾಲಾ ಗುರುತಿನಚೀಟಿ (ವಿಭಾಗ 1 ಮತ್ತು 2ಕ್ಕೆ ಸಾಫ್ಟ್ ಕಾಪಿ /ಹಾರ್ಡ್ಕಾಪಿಯನ್ನುಒದಗಿಸಬೇಕು), ಸ್ಪರ್ಧೆಯುಜನವರಿ 22, 2023ರಂದು ಬೆಳಗ್ಗೆ 10.00ರಿಂದ ಮಧ್ಯಾಹ್ನ 1.00ರ ವರೆಗೆ ನಡೆಯಲಿದೆ, ಬೆಳಗ್ಗೆ 9.30ಕ್ಕೆ ಸ್ಪಾಟ್ ನೋಂದಣಿ ಮುಕ್ತಾಯವಾಗುತ್ತದೆ, ಡ್ರಾಯಿಂಗ್ ಶೀಟ್ನ್ನು ಸಮಿತಿವತಿಯಿಂದಒದಗಿಸಲಾಗುವುದು.
ಕಂಬಳದಂದು ಆಯೋಜಿಸಲಾಗಿರುವ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವ ನಿಟ್ಟಿನಲ್ಲಿ ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ವರ್ಣಚಿತ್ರ ಸ್ಪರ್ಧೆ – 8548865054(ಶ್ರೀಕರ ಕಲ್ಲೂರಾಯ)
ಛಾಯಚಿತ್ರ ಸ್ಪರ್ಧೆ–7892003665(ಅತುಲ್ಎಸ್.ಕೆ)
ಕರಾವಳಿ ಕರ್ನಾಟಕದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಕಂಬಳ ಕಾರ್ಯಕ್ರಮದ ಯಶಸ್ಸಿಗೆ ಸಹಕಾರಿಗಳಾಗಬೇಕಾಗಿ ಕಂಬಳ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.