News Kannada
Tuesday, February 07 2023

ಮಂಗಳೂರು

ಕೆಎಂಸಿ ಆಸ್ಪತ್ರೆ, ಮಂಗಳೂರು ಸಂಚಾರಿ ಪೊಲೀಸ್ ಸಹಯೋಗದಲ್ಲಿ ಸಾರ್ವಜನಿಕ ಜಾಗೃತಿ ವಿಡಿಯೋ ಬಿಡುಗಡೆ

KMC Hospital in association with Mangaluru Traffic Police releases public awareness video
Photo Credit : News Kannada

ಮಂಗಳೂರು:  ಕೆಎಂಸಿ ಆಸ್ಪತ್ರೆ ಮತ್ತು ಮಂಗಳೂರು ನಗರ ಸಂಚಾರಿ ಪೊಲೀಸ್ ಸಹಯೋಗದಲ್ಲಿ ಸಾರ್ವಜನಿಕ ಜಾಗೃತಿ ವಿಡಿಯೋವೊಂದನ್ನು ಜಂಟಿಯಾಗಿ ಬಿಡುಗಡೆ ಮಾಡಿದೆ. ಇನ್ನು ಆಂಬ್ಯುಲೆನ್ಸ್‌ಗೆ ದಾರಿ ಬಿಡಿ ಎಂಬ ವಿಡಿಯೋದ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ನಡೆದಿದೆ.

ಮಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್‌ಗೆ ದಾರಿ ಬಿಡಿ ಎಂಬ ವಿಡಿಯೋ ಬಿಡುಗಡೆ ಕಾರ್ಯಕ್ರಮವು ಜರುಗಿತ್ತು. ಇನ್ನು ಮಂಗಳೂರು ನಗರ ಸಂಚಾರ ಪೊಲೀಸ್ ಸಹಾಯಕ ಕಮೀಷನರ್ ಗೀತಕುಲಕರ್ಣಿ ಅವರು ದೀಪ ಬೆಳಗಿಸಿ , ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ, “ಜನವರಿ ೧೧ರಿಂದ ೧೭ರವರೆಗೆ ಪ್ರತಿ ವರ್ಷ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಆಯೋಜಿಸಲಾಗುತ್ತಿದೆ. ರಸ್ತೆ ಸುರಕ್ಷತೆ ಕುರಿತು ಜಾಗೃತಿ ಹರಡುವ ಉದ್ದೇಶವನ್ನು ಈ ಸಪ್ತಾಹ ಹೊಂದಿದೆ. ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆಇದು ಪ್ರಮುಖ ಕಾಳಜಿಯ ವಿಷಯವಾಗಿದೆ. ಸಾರ್ವಜನಿಕಜಾಗೃತಿ ವಿಡಿಯೋವನ್ನು ಬಿಡುಗಡೆ ಮಾಡುವುದರೊಂದಿಗೆ ಈ ಉದಾತ್ತ ಉಪಕ್ರಮವನ್ನು ಕೆಎಂಸಿ ಆಸ್ಪತ್ರೆ ಕೈಗೆತ್ತಿಕೊಂಡಿರುವುದು ನನಗೆ ಬಹಳ ಹರ್ಷದ ವಿಷಯವಾಗಿದೆ ಎಂದು ತಿಳಿಸಿದರು.

ಮಂಗಳೂರಿನ ಕಸ್ತೂರ ಬಾ ಮೆಡಿಕಲ್ ಕಾಲೇಜ್‌ನ ಡೀನ್ ಡಾ. ಬಿ.ಉನ್ನಿಕೃಷ್ಣನ್‌ಅವರು ಮಾತನಾಡಿ, “ತುರ್ತು ವೈದ್ಯಕೀಯ ಸೇವೆಗಳು, ಆರೋಗ್ಯ ಸೇವಾ ವ್ಯವಸ್ಥೆಯಅತ್ಯಗತ್ಯ ವಿಭಾಗವಾಗಿವೆ. ಈ ಸೇವೆಗಳು ಸಮಯಕ್ಕೆ ಸರಿಯಾಗಿ ಮತ್ತು ಸೂಕ್ತ ರೀತಿಯ ವೈದ್ಯಕೀಯ ಚಿಕಿತ್ಸೆಯನ್ನು ಪೂರೈಸಬಲ್ಲವು. ಅದರಲ್ಲೂ ವಿಶೇಷವಾಗಿ ಜೀವಕ್ಕೆ ಬೆದರಿಕೆವೊಡ್ಡುವ ಅಸ್ವಸ್ಥತೆ ಮತ್ತು ಗಾಯದ ಪ್ರಕರಣಗಳಲ್ಲಿ ಇವು ನೆರವಾಗುತ್ತವೆ. ಹಲವಾರು ರೀತಿಯ ತುರ್ತು ವೈದ್ಯಕೀಯ ಸೇವೆಗಳ ಪೈಕಿ ರಸ್ತೆಯ ಆಂಬುಲೆನ್ಸ್ ಅತ್ಯಂತ ಸಾಮಾನ್ಯದ್ದಾಗಿರುತ್ತದೆ. ಅಲ್ಲದೆ ಅತ್ಯಂತ ಹೆಚ್ಚಾಗಿ ಬಳಕೆಯಾಗುತ್ತದೆ ಎಂದು ಅವರು ಹೇಳಿದರು.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ತುರ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಜೀಧು ಆರ್. ಅವರು ಮಾತನಾಡಿ, “ಮಕ್ಕಳ ಮತ್ತು ವಯಸ್ಕರತುರ್ತುಆರೋಗ್ಯ ಸ್ಥಿತಿಗಳನ್ನು ನಿಭಾಯಿಸಲು ಮಂಗಳೂರಿನ ಕೆಎಂಸಿ ಆಸ್ಪತ್ರೆಯತುರ್ತು ವಿಭಾಗದಲ್ಲಿ ಹಗಲಿರುಳೂ ಅಗತ್ಯ ಉಪಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಪ್ರಾದೇಶಿಕ ಕಾರ್ಯಾಚರಣೆ ಅಧಿಕಾರಿ ಸಗೀರ್ ಸಿದ್ಧಿಖಿ ಸ್ವಾಗತ ಭಾಷಣದಲ್ಲಿ ಅವರು “ಕೆಎಂಸಿ ಆಸ್ಪತ್ರೆಕೈಗೆತ್ತಿಕೊಂಡಿರುವ ಈ ಉದಾತ್ತಉಪಕ್ರಮದೊಂದಿಗೆಕೈಜೋಡಿಸಲು ಮಂಗಳೂರು ನಗರ ಸಂಚಾರ ಪೊಲೀಸ್ ಮುಂದಾಗಿರುವುದು ನಮಗೆ ಹರ್ಷತಂದಿದೆ” ಎಂದರಲ್ಲದೆ, ಗ್ರೀನ್‌ಕಾರಿಡಾರ್, ಅಂಗಕಸಿ ಸೇವೆಗಳಂತಹ ತುರ್ತು ಮತ್ತುಗಂಭೀರ ಸೇವಾ ಸಂದರ್ಭಗಳಲ್ಲಿ ಮಂಗಳೂರಿನಂತಹ ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಹಗಲಿರುಳೂ ಜನರ ಸುರಕ್ಷತೆಯಖಾತ್ರಿ ಮಾಡಿಕೊಳ್ಳಲು ಸಂಚಾರ ಪೊಲೀಸ್‌ತೆಗೆದುಕೊಂಡಿರುವ ಕ್ರಮಗಳು ಮತ್ತು ಪ್ರಯತ್ನಗಳನ್ನು ಶ್ಲಾಘಿಸಿದರು.

ತದ ಬಳಿಕ ಮಾತನಾಡಿ ಟ್ರಾಫಿಕ್ಸ್ ಇನ್ಸ್‌ಪೆಕ್ಟರ್ ಗೋಪಾಲ್‌ಕೃಷ್ಣ ಭಟ್ ಅವರು, ತುರ್ತು ಸಂಚಾರ ಕುರಿತು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ಒದಗಿಸುವ ಕೆಲಸ ಆಗಬೇಕು, ಆಂಬ್ಯುಲೆನ್ಸ್‌ಗೆ ದಾರಿ ಬಿಡಿ ಎಂಬ ಕಾರ್ಯಕ್ರಮದ ಬಗ್ಗೆ ಜನ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಅವರು ಹೇಳಿದರು.

See also  ಬೆಳ್ತಂಗಡಿ: ನಂದಗೋಕುಲ ಗೋಶಾಲೆ ಗೋಗ್ರಾಸ ಸಮ್ಮೇಳನ ಪೂರ್ವಭಾವಿ ಸಭೆ

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸಿಬ್ಬಂದಿಗಳು, ಟ್ರಾಫಿಕ್ಸ್ ಪೊಲೀಸ್ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು