News Kannada
Tuesday, January 31 2023

ಮಂಗಳೂರು

ಪುತ್ತೂರು ತಾಲ್ಲೂಕು ಮುಂಡೂರು ಎಂಬಲ್ಲಿ ಚೂರಿ ಇರಿತ – ಯುವತಿ ಮೃತ್ಯು

Woman stabbed to death at Mundur in Puttur taluk
Photo Credit : News Kannada

ಪುತ್ತೂರು: ಪುತ್ತೂರು ತಾಲ್ಲೂಕು ಮುಂಡೂರು ಗ್ರಾಮದ ಕಂಪ ಸಮೀಪ ಯುವತಿಗೆ ವ್ಯಕ್ತಿಯೊಬ್ಬರು ಹೊಟ್ಟೆಗೆ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಜ.17ರಂದು ಬೆಳಿಗ್ಗೆ ಮನೆಯಂಗಳದಲ್ಲೇ ನಡೆದಿದ್ದು ಗಿರಿಜಾ ಎಂಬವರ ಪುತ್ರಿ ಜಯಶ್ರೀ(23ವರ್ಷ) ಮೃತಪಟ್ಟವರು ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಇವಳು ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಳ್ಳುತ್ತಿದ್ದಳು.ತಾಯಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದು ಇವಳು ಬೊಬ್ಬೆ ಹೊಡೆಯುತ್ತಿದ್ದಗ ತಾಯಿ ಓಡಿ ಬಂದು ನೋಡಿದಾಗ ರಕ್ತ ಕೈಯಲ್ಲಿ ಕಾಣಿಸಿದ್ದು ಹೊಟ್ಟೆಯಲ್ಲಿ ಚೂರಿ ಕಂಡು ಬಂದ ಸ್ಥಿತಿಯಲ್ಲಿ ಇದ್ದು ಕೊಡಲೇ ಆಸ್ಪತ್ರೆಗೆ ತರುವಾಗ ಅರ್ಧ ದಾರಿಯಲ್ಲಿ ಮೃತಪಟ್ಟಳು ಎಂದು ತಿಳಿದು ಬಂದಿದೆ.

ಚೂರಿ ಇರಿತವನ್ನು ಯಾರು ಅಪರಿಚಿತ ವ್ಯಕ್ತಿ ಮಾಡಿದ್ದಾರೆ ಎಂದು ಇನ್ನಷ್ಟೇ ತನಿಖೆಯಲ್ಲಿ ಗೊತ್ತಾಗಬೇಕಾಗಿದೆ. ಹಲವು ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಮೃತ ದೇಹವನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

See also  ದೆಹಲಿ: ಪಾಕಿಸ್ತಾನದ ಐಎಸ್‌ಐ ಬೆಂಬಲಿತ ನಾಲ್ವರು ಉಗ್ರರರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು