ಬಂಟ್ವಾಳ: ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕು, ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಅತ್ಯಂತ ಹೆಚ್ಚಿನ ಅಂತರದಲ್ಲಿ ವಿಜಯ ಸಾಧಿಸಬೇಕು ಎಂದು ಬಿಜೆಪಿ ಹಿರಿಯ ನಾಯಕ ಪ್ರಸಿದ್ಧ ವೈದ್ಯ ಪ್ರಸಾದ್ ಭಂಡಾರಿ ಪುತ್ತೂರು ಅವರು ಹೇಳಿದರು.
ಅವರು ಗೋಳಿಕಟ್ಟೆಯಲ್ಲಿ ಸಾಗುತ್ತಿದ್ದ ಪಾದಯಾತ್ರೆಯ ಜೊತೆ ಪಾಲ್ಗೊಂಡು, ಸುದ್ದಿಗಾರರ ಜೊತೆ ಮಾತನಾಡಿದರು. ರಾಜ್ಯದಲ್ಲಿ ಸರಕಾರದ ಅನುದಾನದ ಜೊತೆಯಲ್ಲಿ ಸ್ವಂತ ಹಣದಿಂದ ಕ್ಷೇತ್ರದ ಅಭಿವೃದ್ಧಿ ಮಾಡಿದ ಶಾಸಕನಿದ್ದರೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಒಬ್ಬರು ಮಾತ್ರ ಎಂದು ಅವರು ಹೇಳಿದರು.
ಗ್ರಾಮ ವಿಕಾಸ ಯಾತ್ರೆ ಅತ್ಯಂತ ಜನಪ್ರಿಯ ವಾಗಿದೆ, ಪಾದಯಾತ್ರೆ ಯ ಉದ್ದಕ್ಕೂ ಜನರ ಸ್ಪಂದನೆ ಉತ್ತಮವಾಗಿ ದೊರಕಿದ್ದು, ಗ್ರಾಮದ ಜನರ ಆಶೋತ್ತರಗಳನ್ನು,ಬೇಡಿಕೆಯನ್ನು ಈಡೇರಿಸುವ ಜೊತೆಗೆ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಸ್ಫೂರ್ತಿಯಾಗಲಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಆದರ್ಶ ವ್ಯಕ್ತಿಯಾದ ಶಾಸಕರಾಗಿದ್ದು, ಯಾವುದೇ ಆಸೆಗಳಿಲ್ಲದ ಜನಸೇವಕನಾಗಿದ್ದಾರೆ ಎಂದು ಶಾಸಕರ ಕಾರ್ಯವೈಖರಿಯನ್ನು ಕೊಂಡಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಹಿಂದೂಗಳ ರಕ್ಷಣೆಗಾಗಿ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬರಬೇಕು ಎಂದು ಅವರು ತಿಳಿಸಿದರು. ಶಾಸಕ ರಾಜೇಶ್ ನಾಯ್ಕ್, ಗ್ರಾಮ ವಿಕಾಸ ಯಾತ್ರೆ ಸಂಚಾಲಕ ದೇವದಾಸ್ ಶೆಟ್ಟಿ ಉಪಸ್ಥಿತರಿದ್ದರು.