ಮಂಗಳೂರು: ಅಖಿಲ ಭಾರತ ಹಿಂದೂ ಮಹಾ ಸಭಾ ಮಂಗಳೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಇದು ಬಿಜೆಪಿ ಪಕ್ಷದ ಆಡಳಿತಕ್ಕೆ ಹಿಡಿದ ಗ್ರಹಣ. ಇವರು ದೇಶವನ್ನು ಯಾವ ದಿಕ್ಕಿನಲ್ಲಿ ಒಯ್ಯಲಿದೇ ಎಂಬುದೇ ಪ್ರಶ್ನೆಯಾಗಿದೆ. ಮೀಸಲಾತಿ ದೇಶದ ಹಾಗೂ ಧರ್ಮದ ಅಭಿವೃದ್ಧಿಗೆ ಮಾರಕ ಎಂದು ತಿಳಿದಿದ್ದರೂ ಅಧಿಕಾರದ ಮೋಹ ಧರ್ಮ ವಿರೋಧಿ ಕಾರ್ಯ ಮಾಡುವ ಮೂಲಕ ಹಿಂದುತ್ವಕ್ಕೆ ದ್ರೋಹ ಮಾಡುತ್ತಿದ್ದರೆ, ಕಾಂಗ್ರೆಸ್ ದೇಶವನ್ನು ಧರ್ಮದ ಆಧಾರದಲ್ಲಿ ಒಡೆದರೆ ಬಿಜೆಪಿ ಜಾತಿಯ ಹೆಸರಿನಲ್ಲಿ ದ್ವಂಸ ಮಾಡುತ್ತಿದೆ ಎಂದು ಧರ್ಮೇಂದ್ರ ಹೇಳಿದರು.
ಮೀಸಲಾತಿ ವಿಚಾರದಲ್ಲಿ ಈ ಎರಡು ಪಕ್ಷಗಳು ಜನರ ಮಧ್ಯ ದ್ವೇಷವನ್ನು ತುಂಬುತ್ತವೆ. ಇದೇ ರೀತಿ ಮುಂದುವರಿದರೆ ಅವಕಾಶ ವಂಚಿತ ಯುವಜನತೆಯಿಂದ ಆಂತರಿಕ ಸಂಘರ್ಷಕ್ಕೆ ಕಾರಣವಾಗಬಹುದು. ಮೇಲು ಜಾತಿ ಎಂಬ ಕಾರಣ ಅವಕಾಶ ವಂಚಿರಾಗುವುದು ಯಾವ ನ್ಯಾಯ? ನಮ್ಮ ಮೂಲ ಸಂವಿಧಾನದಲ್ಲಿ ಮೀಸಲಾತಿಯನ್ನು ಎಪ್ಪತ್ತೈದು ವರ್ಷಗಳ ಕಾಲ ಮುಂದುವರಿಸಲು,ಹಾಗೂ ಧರ್ಮದ ಆಧಾರದಲ್ಲಿ ಮೀಸಲಾತಿ ಅಥವಾ ಹೆಚ್ಚಿನ ಸವಲತ್ತುಗಳನ್ನು ಪಡೆಯಲು ಅವಕಾಶ ಇದೆಯೇ, ಅಧಿಕಾರ ಲಾಭ ಪಡೆಯಲು ದೇಶವನ್ನು ದುರ್ಬಲಗೊಳಿಸುವುದು ಯಾವ ನ್ಯಾಯ? ಮೀಸಲಾತಿಯನ್ನು ಮುಂದುವರಿಸುವ ಉದ್ದೇಶ ನಾವು ಇನ್ನೂ ಅಭಿವೃದ್ಧಿ, ಹಾಗೂ ವಿದ್ಯಾವಂತರಾಗಿಲ್ಲ.
ಹಾಗಾದರೆ ನಮ್ಮ ದೇಶ ಅಭಿವೃದ್ಧಿ ಹಾಗೂ ವಿದ್ಯಾವಂತರನ್ನು ಹೊಂದಿದ ದೇಶ ಎಂದು ವಂಚಿಸುವ ಈ ಎರಡು ಪ್ರಮುಖ ರಾಜಕೀಯ ಪಕ್ಷಗಳನ್ನು ತಿರಸ್ಕರಿಸಿ ಹೊಸಬರಿಗೆ ಅವಕಾಶ ಮಾಡಿಕೊಡಲು ಅಖಿಲ ಭಾರತ ಹಿಂದೂ ಮಹಾಸಭಾ ರಾಜ ಪ್ರಧಾನ ಕಾರ್ಯದರ್ಶಿಯವರಾದ ಧರ್ಮೇಂದ್ರ ರವರು ಪತ್ರಿಕಾಗೋಷ್ಠಿ ನಡೆಸಿ ವಿನಂತಿಸಿದರು.