ವಿಟ್ಲ: ಜನವರಿ 22ರಂದು ಮಂಗಳೂರಿನಲ್ಲಿ ನಡೆಯುವ ಪ್ರಜಾದ್ವನಿ ಯಾತ್ರೆಯಲ್ಲಿ ಜಿಲ್ಲೆಯ ಎಲ್ಲಾ ಪಂಚಾಯತ್ ಪ್ರತಿನಿಧಿಗಳು, ಮಾಜಿ ಜಿಲ್ಲಾ ಮತ್ತು ತಾಲೂಕ್ ಪಂಚಾಯತ್ ಸದಸ್ಯರು ಹಾಗೂ ನಗರ, ಪಟ್ಟಣ ಪಂಚಾಯತ್ ಸದಸ್ಯರು ಸೇರಿದಂತೆ ಎಲ್ಲಾ ಪ್ರಜ್ಞಾವಂತ ನಾಗರಿಕರು ಕರಾವಳಿ ಮೈದಾನದಲ್ಲಿ ಬಾಗವಹಿಸಿ ನಮ್ಮ ನಾಯಕರೊಂದಿಗೆ ಕೈ ಜೋಡಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಸುಭಾಶ್ ಚಂದ್ರ ಶೆಟ್ಟಿ ಕೊಲ್ನಾಡು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಸ್ಥಳೀಯ ಆಡಳಿತ ಸಂಸ್ಥೆ ಗಳಿಗೆ ಸಂವಿಧಾನದಲ್ಲಿ ಸಮಾನ ಅವಕಾಶ ನೀಡಿದ ಕಾಂಗ್ರೆಸ್ ಸರಕಾರ ಅಧಿಕಾರ, ಹಣಕಾಸು ಹಾಗೂ ಯೋಜನೆಗಳ ಜೊತೆಗೆ ಗೌರವದ ಸ್ವಾಭಿಮಾನದ ಬದುಕು ರೂಪಿಸಿದ ಹಿಂದಿನ ಕಾಂಗ್ರೆಸ್ ಸರಕಾರ ಗಳು ಪ್ರಜಾಪ್ರಭುತ್ವ ಕ್ಕೆ ಭದ್ರ ಬುನಾದಿ ಹಾಕುವ ಮೂಲಕ ಗಾಂಧೀಜಿ ಯವರ ರಾಮ ರಾಜ್ಯದ ಕನಸನ್ನ ಸಾಕಾರಗೊಳಿಸಿತ್ತು ಆದರೆ ಆನಂತರ ಬಂದ ಬಿಜೆಪಿ ಸರಕಾರ ಅವಕಾಶ, ಅಧಿಕಾರ ಹಣಕಾಸು ಎಲ್ಲವನ್ನು ಕಿತ್ತು ಕೊಂಡು ಭ್ರಷ್ಟಾಚಾರ, ಬೆಲೆಯೇರಿಕೆ ಮೂಲಕ ಗ್ರಾಮೀಣ ಜನರ ಬದುಕನ್ನು ದುಷ್ಟರಗೋಳಿಸಿ ರಾಮರಾಜ್ಯದ ಕನಸನ್ನು ಭಗ್ನಗೊಳಿಸಿ ಗ್ರಾಮದ ಅಭಿವೃದ್ಧಿಗೆ ತಿಲಾಂಜಲಿಯಿಟ್ಟಿದೆ.
ಈ ಸರಕಾರ ವನ್ನು ಕಿತ್ತೆಸೆದು ಮರಳಿ ಕಾಂಗ್ರೆಸ್ ಸರಕಾರ ಸ್ಥಾಪಿಸಲು ಜನವರಿ 22ರಂದು ಮಂಗಳೂರಿನಲ್ಲಿ ನಡೆಯುವ ಪ್ರಜಾದ್ವನಿ ಯಾತ್ರೆಯಲ್ಲಿ ಸಂಜೆ 3 ಗಂಟೆಗೆ ಜಿಲ್ಲೆಯ ಎಲ್ಲಾ ಪಂಚಾಯತ್ ಪ್ರತಿನಿಧಿಗಳು, ಮಾಜಿ ಜಿಲ್ಲಾ ಮತ್ತು ತಾಲೂಕ್ ಪಂಚಾಯತ್ ಸದಸ್ಯರು ಹಾಗೂ ನಗರ, ಪಟ್ಟಣ ಪಂಚಾಯತ್ ಸದಸ್ಯರು ಸೇರಿದಂತೆ ಎಲ್ಲಾ ಪ್ರಜ್ಞಾವಂತ ನಾಗರಿಕರು ಕರಾವಳಿ ಮೈದಾನದಲ್ಲಿ ಬಾಗವಹಿಸಿ ನಮ್ಮ ನಾಯಕರೊಂದಿಗೆ ಕೈ ಜೋಡಿಸಬೇಕೆಂದು ತಿಳಿಸಿದ್ದಾರೆ.