ಮಂಗಳೂರು: ಮಂಗಳೂರಿನಲ್ಲಿ ವೈದ್ಯರು ಮತ್ತು ವೈದ್ಯರ ಗಾಂಜಾ ಲೋಕ ಪ್ರಕರಣ ಸಂಬಂಧ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಆಡಳಿತ ಮಂಡಳಿ ಕೊನೆಗೂ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ದ ಶಿಸ್ತು ಕ್ರಮ ಕೈಗೊಂಡಿದೆ. ಈ ಮೂಲಕ ನಮ್ಮ ಸಂಸ್ಥೆ ಡ್ರಗ್ಸ್ ವಿಚಾರದಲ್ಲಿ ಪೊಲೀಸರ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದೆ.
ಅಮಾನತ್ತು ಮಾಡಲಾದ ವಿದ್ಯಾರ್ಥಿಗಳು
- ಡಾ. ನದಿಯಾ ಸಿರಾಜ್(24)- ಕೇರಳ- ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ
- ಡಾ.ವರ್ಷಿಣಿ ಪ್ರತಿ(26)- ಆಂಧ್ರಪ್ರದೇಶ- ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ
- ಡಾ.ಹೀರಾ ಬಸಿನ್(26)- ಮಹಾರಾಷ್ಟ್ರ- ಎಂ.ಬಿ.ಬಿ.ಎಸ್
- ಡಾ.ಕ್ಷಿತಿಜ್ ಗುಪ್ತ(23)-ದೆಹಲಿ- ಎಂ.ಎಸ್. ಆರ್ಥೋ ವಿದ್ಯಾರ್ಥಿ
- ಡಾ.ವರ್ಷ ಕುಮಾರ್(27)-ತುಮಕೂರು- ಪೆಥಾಲಜಿ ಎಂ.ಡಿ ವಿದ್ಯಾರ್ಥಿ
- ಡಾ.ಕಿಶೋರಿಲಾಲ್ ರಾಮ್ ಜೀ(38)-ಎಂ.ಬಿ.ಬಿ.ಎಸ್ ವಿದ್ಯಾರ್ಥಿ
- ಡಾ.ರಿಯಾ ಚಡ್ಡ(22)-ಪಂಜಾಬ್- ಡೆಂಟಲ್ ಬಿಡಿಎಸ್ ವಿದ್ಯಾರ್ಥಿನಿಯನ್ನು ಅಮಾನತು ಮಾಡಲಾಗಿದೆ.
ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಗೆ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನ ಡೀನ್ ಮಾಹಿತಿ ನೀಡಿದ್ದು, ಮಂಗಳೂರು ಕಮಿಷನರ್ ಕಚೇರಿಗೆ ಆಗಮಿಸಿ ಶಿಸ್ತು ಕ್ರಮ ತೆಗೆದುಕೊಂಡ ಬಗ್ಗೆ ಪತ್ರವನ್ನು ಡೀನ್ ಕಮಿಷನರ್ ಗೆ ಹಸ್ತಾಂತರ ಮಾಡಿದ್ದಾರೆ