ಮಂಗಳೂರು: 54 ವರ್ಷಗಳ ಇತಿಹಾಸವುಳ್ಳ ರೋಟರಿ ಬಂಟ್ವಾಳ ಕ್ಲಬ್ಬಿಗೆ ಪ್ರಥಮ ಬಾರಿಗೆ ಜಿಲ್ಲೆಯ ನೇತೃತ್ವವನ್ನು ವಹಿಸುವ ಸುವರ್ಣಾವಕಾಶ ಒದಗಿ ಬಂದಿರುವುದು ನಮ್ಮ ಪುಣ್ಯವೇ ಸರಿ.
ಪ್ರತೀ ವರ್ಷದ ಹಾಗೆ ಈ ಸಲ ಜಿಲ್ಲಾ ಅಧಿವೇಶನ “ಪರಿಕಲ್ಪನೆ” ಬಂಟ್ವಾಳ ಕ್ಲಬ್ಬಿನ ಮಾಜಿ ಅಧ್ಯಕ್ಷ ಬಿ.ಸಂಜೀವ ಪೂಜಾರಿ ಅವರ ಅಧ್ಯಕ್ಷೆತೆಯಲ್ಲಿ ಜನವರಿ 27, 28, 29ರಂದು ನೇತ್ರಾವತಿ ನದಿ ದಡದಲ್ಲಿ ಇರುವ ರಮಣೀಯ ಪ್ರಖ್ಯಾತ ಈ ಜಿಲ್ಲಾ ಅಧಿವೇಶನದಲ್ಲಿ ೪ ಕಂದಾಯ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿದೆ.
ಜಿಲ್ಲೆಗಳಾದ ದಕ್ಷಿಣಕನ್ನಡ, ಕೊಡಗು, ಮೈಸೂರು ಮತ್ತು ಚಾಮಾರಾಜನಗರದ ವಿವಿಧ ಕ್ಲಬ್ಬುಗಳಿಂದ ಸುಮಾರು ೨೦೦೦ ರೋಟರಿ ಸದಸ್ಯರು ಮತ್ತು ಕುಟುಂಬಸ್ಥರು ಪಾಲ್ಗೊಳ್ಳಲಿದ್ದಾರೆ.
ರೋಟರಿಯ ಧೈಯ, ಉದ್ದೇಶಗಳಾದ ಗೆಳೆತನ, ಬಾಂದವ್ಯ , ಒಡನಾಟದ ನವೀಕರ ಅಲ್ಲದೆ ನಮ್ಮ ಬೇರೆ ಬೇರೆ ಆಹಾರ ಕ್ರಮಗಳ ಸವಿ ಉಣಬಡಿಸುವುದರೊಂದಿಗೆ ಸಾಂಸ್ಕೃತಿಕ ಅನಾವರಣ ಹಾಗೂ ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ತೋರ್ಪಡಿಕೆ, ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ನಮ್ಮ ಜ್ಞಾನ ಉದ್ದೀಪನಗೊಳಿಸುವುದು. ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕ್ಶ್ ಕಾರಂತ್ ತಿಳಿಸಿದರು .