ಮಂಗಳೂರು: ಕರಾವಳಿ ಕರ್ನಾಟಕ ಭಾಗದಲ್ಲಿ ಬಹಳ ಹೆಸರುವಾಸಿಯಾಗಿರುವ ಸುಧೀರ್ಘ ಇತಿಹಾಸವಿರುವ ಸಾಂಪ್ರದಾಯಿಕ ಜನಪದ ಕ್ರೀಡೆಯೇ ಕಂಬಳ ಇಂತಹ ಜನಪದ ಸೊಗಡನ್ನು ಉಳಿಸಬೇಕು ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂಬ ಉದ್ದೇಶದಿಂದ ಜಯ-ವಿಜಯ ಜೋಡುಕರೆ ಕಂಬಳ ಸಮಿತಿ ಜಪ್ಪಿನಮೊಗರು ಮಂಗಳೂರು ಇವರ ನೇತೃತ್ವದಲ್ಲಿ ಮನ್ಯುತೋಟಿಗುತ್ತು ಮತ್ತು ನಾಡಾಜೆಗುತ್ತು ಕೀರ್ತಿಶೇಷ ಜೆ. ಜಯಗಂಗಾಧರ ಶೆಟ್ಟಿಯವರ ಸ್ಮರಣಾರ್ಥ 13ನೇ ವರ್ಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ಜಪ್ಪಿನಮೊಗರು ನೇತ್ರಾವತಿ ನದಿ ತೀರದಲ್ಲಿ ಇದೇ ಬರುವ ಫೆಬ್ರವರಿ 18ನೇ ಶನಿವಾರದಂದು ಬಹಳ ವಿಜೃಂಭಣೆಯಿಂದ ಜರಗಲಿದೆ.
ಗ್ರಾಮದೈವ ಕಂರ್ಭಿಸ್ಥಾನ ಶ್ರೀ ವೈದ್ಯನಾಥ ದೈವಸ್ಥಾನದ ಆಡಳಿತ ಮೊಕ್ತೇಸರರಾಗಿ ಸುಧೀರ್ಘವಾಗಿ ಸೇವೆ ಸಲ್ಲಿಸಿರುವ, ಊರಿನ ಧಾರ್ಮಿಕ ಮತ್ತು ಸಾಮಾಜಿಕ ನೇತಾರ ಕೀರ್ತಿಶೇಷ ಜಯಗಂಗಾಧರ ಶೆಟ್ಟಿಯವರು, ಕೃಷಿಯೇ ಪ್ರಧಾನವಾಗಿದ್ದ ಇವರು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇವರ ಸ್ಮರಣಾರ್ಥ ಇವರ ಮಕ್ಕಳು ಮತ್ತು ಕುಟುಂಬಿಕರ ಸಹಯೋಗದೊಂದಿಗೆ ಇವರ ಮಗನಾದ. ಜೆ. ಆನಿಲ್ ಶೆಟ್ಟಿಯವ ನಾಯಕತ್ವದಲ್ಲಿ ಮಂಗಳೂರು ಮಹಾ ನಗರಪಾಲಿಕೆಯ ವ್ಯಾಪ್ತಿಗೊಳಪಡುವ ಜಪ್ಪಿನಮೊಗರು ನಗರ ಪ್ರದೇಶವಾಗಿದ್ದರೂ, ಗ್ರಾಮೀಣ ಸೊಗಡನ್ನು ಬಳಸಿಕೊಂಡು ದ.ಕ. ಜಿಲ್ಲಾ ಮಾಜಿ ಉಸ್ತುವಾರಿ ಸಚಿವರಾಗಿರುವ ಜೆ. ಕೃಷ್ಣಪಾಲೇಮಾರ್ ಇವರ ಮಾರ್ಗದರ್ಶನದೊಂದಿಗೆ 12 ವರುಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಜನಪದ ಕ್ರೀಡೆಯು ಪ್ರಸ್ತುತ ಗ್ರಾಮಸ್ತರ ಒಗ್ಗೂಡುವಿಕೆಯಿಂದ ಜನಪರ ಕಂಬಳೋತ್ಸವವಾಗಿ ರೂಪುಗೊಂಡಿದೆ.
13ನೇ ವರ್ಷದ ಕಂಬಳವು ಮಂಗಳೂರು ವಿಧಾನಸಭಾಕ್ಷೇತ್ರದ ಸನ್ಮಾನ್ಯ ಶಾಸಕರಾದ ಪಿ. ವೇದವ್ಯಾಸ ಕಾಮತ್ ಇವರ ಗೌರವಾಧ್ಯಕ್ಷತೆಯಲ್ಲಿ, ಕಂರ್ಭಿಸ್ಥಾನ ಶ್ರೀ ವೈದ್ಯನಾಥ ದೈವಸ್ಥಾನದ ಆಡಳಿತ ಮೊತ್ತೇಸರರಾಗಿರುವ ಜೆ ಅನಿಲ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಹಾಗೂ ದ.ಕ. ಜಿಲ್ಲಾ ಮಾಜಿ ಉಸ್ತುವಾರಿ ಸಚಿವರಾಗಿರುವ ಜೆ. ಕೃಷ್ಣಪಾಲೇಮಾರ್ ಇವರ ಮಾರ್ಗದರ್ಶನದಲ್ಲಿ ನಡೆಯಲಿದೆ.
ತಾರೀಕು 18,01,2023ರಂದು ಬೆಳಿಗ್ಗೆ 8.30ರ ಶುಭಗಳಿಗೆಯಲ್ಲಿ ವೇದಮೂರ್ತಿ ಬ್ರಹ್ಮ ಶ್ರೀ. ವಿಠಲದಾಸ ತಂತ್ರಿವರ್ಯರ ದಿವ್ಯಹಸ್ತಗಳಿಂದ ಕಂಬಳದ ಉದ್ಘಾಟನೆಯು ನಡೆಯಲಿದೆ. ಜಿ. ಆರ್ ಮೆಡಿಕಲ್ ಕಾಲೇಜು ಹಾಗೂ ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳು ಮಂಗಳೂರು ಇದರ ಸ್ಥಾಪಕ ಅಧ್ಯಕ್ಷರಾಗಿರುವ ಶ್ರೀ ಗಣೇಶ್ ರಾವ್ ಇವರ ಅಧ್ಯಕ್ಷತೆಲ್ಲಿ ಉದ್ಘಾಟನಾ ಸಮಾರಂಭವು ನಡೆಯಲಿದ್ದು, ಅನೇಕ ಗಣ್ಯ ಅತಿಥಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಂಬಳ ಕ್ಷೇತ್ರದ ಮತ್ತು ಇತರ ಸಾಧಕರನ್ನು ಗೌರವಿಸಲಾಗುತ್ತದೆ.