ಮಂಗಳೂರು: ಹಿಂದುಸ್ತಾನ್ ಪೆಟ್ರೊಲಿಯಂ ಕಾರ್ಪೋರೇಶನ್ ಲಿಮಿಟೆಡ್ ಇದರ ಮಂಗಳೂರು ರಿಟೇಲ್ ಪ್ರಾದೇಶಿಕ ಕಚೇರಿಯ ಆಶ್ರಯದಲ್ಲಿ ರಿಟೇಲ್ ವಿತರಕ ಸ್ನೇಹಿ ಕಾರ್ಯಕ್ರಮದ ಅಂಗವಾಗಿ ಕ್ರಿಕೆಟ್ ಚ್ಯಾಂಪಿಯನ್ ಕ್ರೀಡಾ ಕೂಟವು ಕೆಪಿಟಿ ಮೈದಾನದಲ್ಲಿ ಜರಗಿತು.
ಮಂಗಳೂರು-ಉಡುಪಿ ಮಾರಾಟ ಪ್ರದೇಶ, ಶಿವಮೊಗ್ಗ-ಹಾಸನ ಮಾರಾಟ ಪ್ರದೇಶ, ಮೈಸೂರು ಮಾರಾಟ ಪ್ರದೇಶ ಹಾಗೂ ಮಂಗಳೂರು ರಿಟೇಲ್ ಕಚೇರಿಯ ತಂಡಗಳ ಮಧ್ಯೆ ಪಂದ್ಯಾಟ ನಡೆದು ಶಿವಮೊಗ್ಗ-ಹಾಸನ ಮಾರಾಟ ಪ್ರದೇಶ ತಂಡವು ಪ್ರಥಮ ಸ್ಥಾನ ಪಡೆದು ಮಂಗಳೂರು ರಿಟೇಲ್ ಪ್ರಾದೇಶಿಕ ಕಚೇರಿಯ ತಂಡವು ದ್ವೀತೀಯ ಸ್ಥಾನವನ್ನು ಪಡೆದು ಜಯಶಾಲಿಯಾದರು.
ಪ್ರಶಸ್ತಿ ವಿತರಣ ಕಾರ್ಯಕ್ರಮಕ್ಕೆ ಹೆಚ್ ಪಿ ಸಿ ಎಲ್ ಮಂಗಳೂರು ಎಲ್ ಪಿ ಜಿ ಆಮದು ಸ್ಥಾವರದ ಮಹಾಪ್ರಬಂಧಕರಾದ ಆರ್ ವೇಣುಮಾಧವರವರು ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಮಂಗಳೂರು ರಿಟೇಲ್ ಪ್ರಾದೇಶಿಕ ಕಚೇರಿಯ ಉಪ ಮಹಾಪ್ರಬಂಧಕರಾದ ಎಂ ಜಿ ನವೀನ ಕುಮಾರ್ ನೇತೃತ್ವದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯಿತು.