ಮಂಗಳೂರು: ನಗರದ ಕಾಪಿಕಾಡ್ ನಲ್ಲಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆಗೈದು ಪತಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಮೃತ ದುರ್ದೈವಿಗಳು ಪತ್ನಿ ಶೈಲಜಾ (64) ಪತಿ ದಿನೇಶ್ ರಾವ್ (65). ದಿನೇಶ್ ರಾವ್ ಕೆನರಾ ಬ್ಯಾಂಕ್ ನ ನಿವೃತ್ತ ಉದ್ಯೋಗಯಾಗಿದ್ದರು.
ಶೈಲಜಾ ರಾವ್ ಅವರು ಸುಮಾರು ಐದಾರು ವರ್ಷಗಳಿಂದ ನರರೋಗದ ಕಾರಣ ಮಲಗಿದಲ್ಲೇ ಇದ್ದರು. ಇಂದು ಬೆಳಗ್ಗೆ ಪತ್ನಿಯನ್ನು ಕೊಲೆಗೈದು ದಿನೇಶ ರಾವ್ ಸಾವಿಗೆ ಶರಣಾಗಿದ್ದಾರೆ.