News Kannada
Wednesday, May 31 2023
ಮಂಗಳೂರು

ಕದಳೀ ಯೋಗೇಶ್ವರ ಮಠ ಕಾಲಭೈರವ ದೇವಸ್ಥಾನ: ಫೆ.3ರಿಂದ ಬ್ರಹ್ಮಕಲಶೋತ್ಸವ ಸಂಭ್ರಮ

Kadali Yogeshwara Mutt Kalabhairava Temple: Brahmakalashotsava to be celebrated from Feb 3
Photo Credit : News Kannada

ಮಂಗಳೂರು: ನಗರದ ಕದ್ರಿ ಸುವರ್ಣ ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ಶ್ರೀ ಕಾಲಭೈರವ ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಫೆ.3ರಿಂದ 6ರ ತನಕ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮಕಲಶೋತ್ಸವ ಸಿದ್ಧತೆ, ಯಶಸ್ಸಿಗಾಗಿ ಶ್ರೀ ಯೋಗೇಶ್ವರ ಮಠಾಧಿಪತಿ ಶ್ರೀ 1008 ಶ್ರೀ ರಾಜಯೋಗಿ ನಿರ್ಮಲನಾಥಜೀ ಮಾರ್ಗದರ್ಶನದಲ್ಲಿ ಹಲವಾರು ಸಮಿತಿಗಳನ್ನು ರಚಿಸಿ ಕಾರ್ಯೋನ್ಮುಖವಾಗಿದ್ದು ಸಮರೋಪಾದಿಯಲ್ಲಿ ಸಿದ್ಧತಾ ಕೆಲಸಗಳು ನಡೆಯುತ್ತಿದೆ ಎಂದರು.

ರಾಜಸ್ತಾನ, ಹರಿಯಾಣ, ಗುಜರಾತ್, ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸಲಿದ್ದಾರೆ. ಯೋಗಿ ನಿರ್ಮಲ್‌ನಾಥ್‌ಜೀ ಮಹಾರಾಜ್‌ರವರು 2016ರಲ್ಲಿ ಪಟ್ಟಾಭಿಷಿಕ್ತರಾಗಿದ್ದು, ಅವರ ಅಧಿಕಾರವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಇದರಲ್ಲಿ ಸುಮಾರು ರೂ.10 ಕೋಟಿ ವೆಚ್ಚದಲ್ಲಿ ನಡೆಸಲಾದ ಶ್ರೀ ಕಾಲಭೈರವ ದೇವರ ಮತ್ತು ಪರಿವಾರ ಗುಡಿಗಳು ಹಾಗೂ ಪೌಳಿಯ ಪುನರ್ ನಿರ್ಮಾಣ ಪ್ರಮುಖವಾದುದು. ಗುಜಾರಾತ್‌ನಿಂದ ತರಿಸಲಾದ ಸುಮಾರು 60 ಲಕ್ಷ ಮೌಲ್ಯದ ವಿಶಿಷ್ಟ ಕಪ್ಪು ಶಿಲೆಯಲ್ಲಿ ಕಾಲಭೈರವ ದೇವರ ಪ್ರತಿಷ್ಠಾಪನೆಯಾಗಲಿದೆ ಎಂದರು.

ಶ್ರೀ ಕಾಲಭೈರವ ದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆ. 4, 5 ಮತ್ತು 6ರಂದು ಜರಗಲಿದೆ. ಫೆ.3ರಂದು ಸಂಜೆ 3 ಗಂಟೆಗೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಿಂದ ಕದಳೀ ಶ್ರೀ ಯೋಗೇಶ್ವರ ಮಠಕ್ಕೆ ಹಸಿರು ಹೊರೆಕಾಣಿಕೆ ಹೊರಡಲಿದೆ. ಪುನರ್ ಪ್ರತಿಷ್ಠಾ ಕಾರ್ಯಕ್ರಮವು ಫೆ.4ರಂದು ಬೆಳಗ್ಗೆ 9 ಗಂಟೆಗೆ 1008 ಶ್ರೀ ನಿರ್ಮಲ್‌ನಾಥ್‌ಜೀ ಮಹಾರಾಜ್‌ರವರ ಪೂರ್ಣಕುಂಭ ಶೋಭಾಯಾತ್ರೆಯೊಂದಿಗೆ ಪ್ರಾರಂಭವಾಗಲಿದೆ. ಶ್ರೀ ಯೋಗೇಶ್ವರ ಮಠದಿಂದ ಶೋಭಾಯಾತ್ರೆ ಹೊರಟು ಪದವು, ನಂತೂರು, ಮಲ್ಲಿಕಟ್ಟೆ, ಕದ್ರಿದೇವಸ್ಥಾನ, ಸರ್ಕೂ್ಯಟ್ ಹೌಸ್ ಆಗಿ ಮಠಕ್ಕೆ ಹಿಂತಿರುಗಿ ಸಂಪನ್ನಗೊಳ್ಳಲಿದೆ. ಸಂಜೆ ವೈದಿಕ, ಸಾಂಸ್ಕೃತಿಕ ಹಾಗೂ ಸಭಾಕಾರ್ಯಕ್ರಮ ಜರಗಲಿದೆ.

ಫೆ.5 ಭಾನುವಾರ ಬೆಳಿಗ್ಗೆ ಗಂಟೆ 9ರಿಂದ ಪಂಚ ಕುಂಡೀ ಶ್ರೀ ರುದ್ರಯಾಗ ಹಾಗೂ ಸಂಜೆ ಗಂಟೆ 5ಕ್ಕೆ ತಪೋನಿಧಿ ಶ್ರೀ ರಾಜಾ ನಿರ್ಮಲ್‌ನಾಥ್‌ಜೀ ಮಹಾರಾಜ್‌ರವರಿಂದ ಚಂಡಿಕಾ ಹವನ ಜರಗಲಿರುವುದು. ಬಳಿಕ ಸಂಜೆ ಗಂಟೆ 5ರಿಂದ ಸಾಂಸ್ಕೃತಿಕ ಹಾಗೂ ಸಭಾಕಾರ್ಯಕ್ರಮ ನಡೆಯಲಿದೆ. ಫೆ.6ರಂದು ಬೆಳಿಗ್ಗೆ 7ರಿಂದ ಶಿಖರ ಪ್ರತಿಷ್ಟೆ: ಶ್ರೀ ಕಾಲಭೈರವ ಹಾಗೂ ಪರಿವಾರ ದೇವರುಗಳ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಕಾಲಬೈರವದೇವರಿಗೆ ರೋಟ್‌ಪೂಜೆ ಹಾಗೂ ಪ್ರಸನ್ನ ಪೂಜೆ ನೆರವೇರಲಿದೆ. ಸಂಜೆ ಗಂಟೆ 3ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ಜರಗಲಿದೆ ಎಂದು ಅವರು ವಿವರ ನೀಡಿದರು.

ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಜೋಗಿ, ಕೋಶಾಧಿಕಾರಿ ಶಿವರಾಮ್ ವಿ.ಜೋಗಿ, ಕಾರ್ಯದರ್ಶಿ ಡಾ.ಚಂದ್ರಶೇಖರ್ ಕೆ., ಸಲಹೆಗಾರರಾದ ಹರಿನಾಥ್, ಡಾ.ಕೇಶವನಾಥ್, ಕಿರಣ್ ಕುಮಾರ್ ಜೋಗಿ ಗಂಗಾಧರ ಬಿ., ವಿನಯಾನಂದ ಕಾನಡ್ಕ ಹಾಗೂ ಡಾ. ಚಂದ್ರಶೇಖರ ಜೋಗಿ ಮೊದಲಾದವರಿದ್ದರು.

See also  ನಾದಬ್ರಹ್ಮ ಹಂಸಲೇಖ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು