ಬಂಟ್ವಾಳ: ಭಾರತೀಯ ಜನತಾ ಪಕ್ಷ ಪುತ್ತೂರು ಗ್ರಾಮಾಂತರ ಮಂಡಲ ಮತ್ತು ವಿಟ್ಲ ಮಹಾ ಶಕ್ತಿ ಕೇಂದ್ರದ ಆಶ್ರಯದಲ್ಲಿ ಕಮಲ ಕುಟುಂಬ ಮಿಲನ ಮತ್ತು ಕಮಲ ಕ್ರೀಡೋತ್ಸವ ಕಾರ್ಯಕ್ರಮ ಭಾನುವಾರ ವಿಟ್ಲ ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಕೇಂದ್ರ ಸರ್ಕಾರ ದೂರದರ್ಶಿ ಯೋಜನೆಯ ಫಲವಾಗಿ ವಿಶ್ವ ಮಟ್ಟದಲ್ಲಿ ದೇಶ ಗೌರವಯುತ ಸ್ಥಾನಮಾನ ಪಡೆದಿದೆ. ಮೂಲ ಪರಂಪರೆ, ಸಂಸ್ಕೃತಿ, ಧಾರ್ಮಿಕ ಶ್ರದ್ಧಾ ಕೇಂದ್ರಗಳು ಪುನರುತ್ಥಾನಗೊಳ್ಳುತ್ತಿದೆ. ರಾಜ್ಯದಲ್ಲಿ ಬಿಜೆಪಿ ಮೂಲಕ ಅಭಿವೃದ್ಧಿ ಶಕೆ ಆರಂಭವಾಗಿದೆ. ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ 18 ವಾರ್ಡುಗಳ ಮೂಲ ಸೌಕರ್ಯಗಳಿಗೆ ಅನುದಾನ ಒದಗಿಸಲಾಗಿದೆ. ಬಿಜೆಪಿ ಕುಟುಂಬ ಮಿಲನದ ಮೂಲಕ ಪಕ್ಷದ ಎಲ್ಲಾ ವಯೋಮಾನದ ಕಾರ್ಯಕರ್ತರನ್ನು ಸಂಘಟಿಸಲಾಗಿದೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ನಿರಂತರವಾಗಿ ನಡೆಯಲಿದೆ. ಬೂತ್ ಮಟ್ಟದ ಪ್ರತೀ ಮನೆಗಳ ಭೇಟಿ, ಕಾರ್ಯಕರ್ತರ ಭೇಟಿಯೊಂದಿಗೆ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ವೀಕ್ಷಣೆ ಹಾಗೂ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜಾ ರಾಧಾಕೃಷ್ಣ ಆಳ್ವ ಚಾಲನೆ ನೀಡಿದರು.
ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಜಿಲ್ಲಾ ಹಿಂದುಳಿದ ವರ್ಗಮೋರ್ಚಾ ಅಧ್ಯಕ್ಷರು, ಆರ್ ಸಿ ನಾರಾಯಣ ಳ, ದ. ಕ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರೀ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ನಾರಾಯಣ ಮುಳಿಯ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುನೀತ್ ಮಾಡತ್ತಾರ್, ಪಕ್ಷದ ಹಿರಿಯರಾದ ನಿತ್ಯಾನಂದ ನಾಯಕ್. ನಿವೃತ್ತ ಉಪ ಪ್ರಾಂಶುಪಾಲ ಸುಬ್ರಮಣ್ಯ ಭಟ್, ಹಿರಿಯ ವಕೀಲರಾದ ಜಯರಾಮ್ ರೈ. ನರ್ಸಪ್ಪ ಪೂಜಾರಿ ನಿಡ್ಯ, ಮಹಾಬಲೇಶ್ವರ ಭಟ್ ಅಲಂಗಾರ್, ಕಾರ್ಯದರ್ಶಿ ಕರುಣಾಕರ ಗೌಡ ನಾಯ್ತೋಟು, ಪ್ರಭಾರಿ ಮೋಹನ್ ದಾಸ್ ಉಕ್ಕುಡ, ರಾಮದಾಸ್ ಶೆಣೈ ವಿಟ್ಲ ಜಗದೀಶ್ ಪಾಣೆಮಜಲು ಜೀವನ್ ವಿಟ್ಲ . ಶಕ್ತಿ ಕೇಂದ್ರ ಅಧ್ಯಕ್ಷರುಗಳಾದ ಲೋಕನಾಥ್ ಶೆಟ್ಟಿ ಕೊಲ್ಯ, ವೀರಪ್ಪ ಗೌಡ ರಾಯರ ಬೆಟ್ಟು, ಹರೀಶ್ ಪೂಜಾರಿ, ವಿಟ್ಲ ಸಾಮಾಜಿಕ ಜಾಲತಾಣ ಸಂಚಾಲಕ ಕೃಷ್ಣ ಮುದೂರು, ಮಹಿಳಾ ಮೋರ್ಚಾ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ . ಪ ಪಂ ಸದಸ್ಯರುಗಳಾದ ರವೀಶ್ ವಿಟ್ಲ, ಅಶೋಕ್ ಕುಮಾರ್ ಶೆಟ್ಟಿ, ಜಯಂತ್ ಸಿ .ಯಚ್, ವಸಂತ ಪಿ. ಗೋಪಿಕೃಷ್ಣ , ವಿಜಯ ಲಕ್ಷ್ಮಿ ಸಂಗೀತ ಜೆ ಪಿ., ರಕ್ಷಿತಾ ಸನತ್ ಹಾಗೂ ಬಿಜೆಪಿ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.
ವಿಟ್ಲ ಬಿಜೆಪಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರಾದ ಅರುಣ್ ವಿಟ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.