News Kannada
Tuesday, June 06 2023
ಮಂಗಳೂರು

ಉಳ್ಳಾಲ: ಹಿಂದೂಗಳ ತಂಟೆಗೆ ಬಂದರೆ ಪ್ರತೀಕಾರ ಒಂದಕ್ಕೆ ಎರಡು – ಶರಣ್ ಪಂಪೈಲ್

If hindus come to the fore, revenge will be two out of one: Sharan Pampail
Photo Credit : News Kannada

ಉಳ್ಳಾಲ: ಉಳ್ಳಾಲವು ಉಗ್ರರ ಸ್ಲಿಪರ್ ಸೆಲ್ ಆಗಿದೆ. ಪ್ರವೀಣ್‌ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್ ನ ಫಾಝಿಲ್ ಕೊಲೆಯಾಗಿದೆ. ಹಿಂದೂಗಳ ತಂಟೆಗೆ ಬಂದರೆ ಒಂದಕ್ಕೆ ಎರಡು, ನಾಲ್ಕಕ್ಕೆ ಎಂಟು ಉರುಳಿಸುತ್ತೇವೆಂದು ವಿಶ್ವ ಹಿಂದೂ ಪರಿಷತ್‌ ರಾಜ್ಯ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪೈಲ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ಉಳ್ಳಾಲ ಬೈಲಿನಲ್ಲಿ ಭಾನುವಾರ ಸಂಜೆ ಮಂಗಳೂರು ವಿಶ್ವ ಹಿಂದು ಪರಿಷತ್, ಬಜರಂಗದಳದ ಆಶ್ರಯದಲ್ಲಿ ನಡೆದ ಶೌರ್ಯ ಯಾತ್ರೆಯನ್ನುದ್ದೇಶಿಸಿ ಅವರು ಮಾತನಾಡಿದರು.

ತುಮಕೂರಲ್ಲಿ ನಡೆದ ಶೌರ್ಯ ಯಾತ್ರೆಯಲ್ಲಿ ಗುಜರಾತಲ್ಲಿ ನಡೆದ ನರಮೇಧ ಹಿಂದೂ ಕರಸೇವಕರ ಹತ್ಯೆಗೆ ನಡೆದ ಪ್ರತೀಕಾರವೆಂದು ಹೇಳಿದ್ದ ಶರಣ್, ಉಳ್ಳಾಲದಲ್ಲಿಯೂ ಅದನ್ನೇ ಮತ್ತೆ ಪುನರುಚ್ಚರಿಸಿದ್ದಾರೆ.

ಪ್ರವೀಣ್ ನೆಟ್ಟಾರು ಮಾತ್ರವಲ್ಲ ಪಿಎಫ್‌ಐ ಲಿಸ್ಟ್ ನಲ್ಲಿ ಇನ್ನೂ ಕೆಲವು ಹಿಂದೂ ಕಾರ್ಯಕರ್ತರ ಹೆಸರಿತ್ತು ಅಂತ ಎನ್‌ಐ ಹೇಳಿದೆ. ಪಿಎಫ್ ಐ
ಬ್ಯಾನ್ ಆಗಿದ್ರೂ ಅವರ ಕಾರ್ಯಕರ್ತರೂ ಇನ್ನೂ ಉಳ್ಳಾಲದಲ್ಲಿ ಇದ್ದಾರೆ, ಇನ್ನಷ್ಟು ನಮ್ಮ ಕಾರ್ಯಕರ್ತರ ಹತ್ಯೆ ಮಾಡಲು ಸಂಚು
ರೂಪಿಸಿದ್ದಾರೆ. ಆದರೆ ನಾನು ಆ ಜಿಹಾದಿಗಳಿಗೆ ಎಚ್ಚರಿಕೆ ಕೊಡುತಿದ್ದೇನೆ. ಇನ್ನು ಮುಂದೆ ನಮ್ಮ ಕಾರ್ಯಕರ್ತರ ಹತ್ಯೆಯಾದರೆ
ಒಂದಕ್ಕೆ ಒಂದಲ್ಲ ಎರಡಾಗುತ್ತೆ ಮೂರಾಗುತ್ತೆ ನಾಲ್ಕಾಗುತ್ತೆ.. ನಮ್ಮ ಕಾರ್ಯಕರ್ತರ ಮೇಲೆ ನೀವು ಹಲ್ಲೆ ಮಾಡಿದ್ರೆ ನಿಮ್ಮ ಹತ್ತು ಜನರನ್ನ
ನಾವು ಆಸ್ಪತ್ರೆಗೆ ಸೇರಿಸ್ತೇವೆ.

ಉಳ್ಳಾಲದಲ್ಲಿ ಚುನಾವಣೆಗೋಸ್ಕರ ನಾವು ಕಾರ್ಯಕ್ರಮ ಮಾಡ್ತಿಲ್ಲ. ಆದರೆ ಉಳ್ಳಾಲದಲ್ಲಿ ಹಿಂದೂ ಶಾಸಕನ ಆಯ್ಕೆಯಾಗಬೇಕು ಎನ್ನುವ
ಸಂಕಲ್ಪ ನಮ್ಮದು. ಅದಕ್ಕಾಗಿ ನಾವು ಉಳ್ಳಾಲದಲ್ಲಿ ಹಿಂದೂ ಶಾಸಕನ ಆಯ್ಕೆಗಾಗಿ ಅಭಿಯಾನ ಮಾಡ್ತಾ ಇದೀವಿ, ಈ ಹಿಂದೂ ಶಾಸಕ ಬಿಜೆಪಿ
ಮಾತ್ರ ಅಲ್ಲ ಕಾಂಗ್ರೆಸ್ ನಲ್ಲಾದ್ರೂ ನಮ್ಮ ಬೆಂಬಲ ಇದೆ. ಉಳ್ಳಾಲದ ಹಿಂದೂ ಕಾಂಗ್ರೆಸ್ಸಿಗರು ಎಷ್ಟು ದಿನ ಗುಲಾಮನ ಕಾಲ ಕೆಳಗೆ ಇರ್ತೀರಿ.
ನೀವು ತಾಕತ್ತಿದರೆ ಒಬ್ಬ ಹಿಂದೂವನ್ನ ಶಾಸಕನಾಗಿ ಗೆಲ್ಲಿಸಿ ಎಂದು ಪರೋಕ್ಷವಾಗಿ ಯುಟಿ ಖಾದರ್ ಬೆಂಬಲಿಸುವ ಕಾಂಗ್ರೆಸ್ ಪಕ್ಷದ ಹಿಂದು
ಕಾರ್ಯಕರ್ತರಿಗೆ ಹೇಳಿದರು.

ಸಿದ್ದರಾಮಯ್ಯ ಜೀವನದ ಮೊದಲ ಸತ್ಯವನ್ನು ಮೊನ್ನೆ ಹೇಳಿದ್ರು. ದ.ಕ ಜಿಲ್ಲೆ ಹಿಂದುತ್ವದ ಫ್ಯಾಕ್ಟರಿ ಆಗ್ತಿದೆ ಅಂತ ಸತ್ಯ ಹೇಳಿದ್ದಾರೆ. ದ.ಕ ಜಿಲ್ಲೆ ಹಿಂದುತ್ವದ ನೆಲ, ಈ ಮಣ್ಣಲ್ಲಿ ಹಿಂದುತ್ವ ಇದೆ. ನಮಗೆ ಹೆಮ್ಮೆ ಇದೆ, ಈ ಹಿಂದುತ್ವದ ಫ್ಯಾಕ್ಟರಿಯಲ್ಲಿ ನಾವು ದೇಶಕ್ಕೋಸ್ಕರ ಕೆಲಸ ಮಾಡ್ತಾ
ಇದೀವಿ. ಸಿದ್ದರಾಮಯ್ಯನವರೇ, ಕೇವಲ ದ.ಕ ಜಿಲ್ಲೆ ಅಲ್ಲ ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳು ಹಿಂದುತ್ವದ ಫ್ಯಾಕ್ಟರಿ ಆಗಲಿದೆ. ಗುಜರಾತ್ ನಲ್ಲಿ
ನಡೆದಿದ್ದು ನರಮೇಧ ಅಲ್ಲ ಅದು ಹಿಂದೂಗಳ ಪರಾಕ್ರಮ. ಅಲ್ಲಿ ನಡೆದಿದ್ದು ಹಿಂದುಗಳ ಶೌರ್ಯ, ಅದು ನಮ್ಮ ಪರಾಕ್ರಮ. ಅಗತ್ಯ ಬಿದ್ದರೆ
ಭಜರಂಗದಳ ಹೋರಾಟ ಮಾಡುತ್ತೆ ಕೆಲವೊಮ್ಮೆ ನಾವು ನುಗ್ಗಿ ಹೊಡಿಯೋದಕ್ಕೂ ಶಕ್ತರಿದ್ದೇವೆ.

See also  ದೆಹಲಿ: ಸಿಎಂ ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು ನಡೆಸುತ್ತಿದೆ ಎಂದ ಮನೀಶ್ ಸಿಸೋಡಿಯಾ

ಪ್ರಶಾಂತ್ ನೆಟ್ಟಾರು ಹತ್ಯೆಯಾದಾಗ ಹಿಂದೂ ಸಮಾಜ ಕಣ್ಣೀರಲ್ಲಿ ಮುಳುಗಿತ್ತು. ಇಡೀ ಜಿಲ್ಲೆ ಒಬ್ಬ ಉತ್ತಮ ಕಾರ್ಯಕರ್ತನ ಬಲಿದಾನಕ್ಕೆ
ಬೇಸರ ಪಟ್ಟಿತ್ತು. ಆಗ ನಮ್ಮ ಕಾರ್ಯಕರ್ತರು ಅವನ ಬಲಿದಾನ ನೋಡಿ ಸುಮ್ಮನೆ ಕೂರಲಿಲ್ಲ ಸುರತ್ಕಲ್ ಗೆ ಹೋಗಿ ನುಗ್ಗಿ ನುಗ್ಗಿ ಹೊಡೆದ್ರು,
ಅದು ನಮ್ಮ ಶೌರ್ಯ ಪರಾಕ್ರಮ, ಸುರತ್ಕಲ್ ನಲ್ಲಿ ಹೊಡೆದ ವಿಡಿಯೋವನ್ನ ಎಲ್ಲರೂ ವಿಡಿಯೋದಲ್ಲಿ ನೋಡಿದ್ದೀರಾ ಪರೋಕ್ಷವಾಗಿ
ಸುರತ್ಕಲ್ ನಲ್ಲಿ ನಡೆದ ಫಾಜಿಲ್ ಹತ್ಯೆಯನ್ನು ತಮ್ಮದೇ ಕಾರ್ಯಕರ್ತರು ಮಾಡಿದ್ದಾಗಿ ಸಮರ್ಥಿಸಿದ್ದಾರೆ.

ಉಳ್ಳಾಲದಲ್ಲಿ ನಿರಂತರ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿವೆ. ಮಾಜಿ ಶಾಸಕ ಇದಿನಬ್ಬರ ಮೊಮ್ಮಗನ ಪತ್ನಿ ದೀಪ್ತಿ ಅಲಿಯಾಸ್
ಮರಿಯಮ್ ಸಿರಿಯಾ ಭಯೋತ್ಪಾದಕರ ನಂಟಿನಲ್ಲಿ ಎನ್ ಐಎ ವಶದಲ್ಲಿದ್ದಾಳೆ. ಮೊನ್ನೆ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲೂ
ಉಳ್ಳಾಲದ ನಡುಪದವಿನ ಪಿಎ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಲ್ಲದೆ ಬಬ್ಬುಕಟ್ಟೆಯ ವ್ಯಕ್ತಿಯನ್ನು ಎನ್ ಐಎ ಬಂಧಿಸಿತ್ತು. 2047
ರಲ್ಲಿ ಭಾರತವನ್ನ ಇಸ್ಲಾಮಿಕ್ ರಾಷ್ಟ್ರವನ್ನಾಗಿಸಲು ಷಡ್ಯಂತರ ಮಾಡಿದವರಿಗೆ ಕರ್ನಾಟಕದಲ್ಲಿ ಉಳ್ಳಾಲವೇ ಮೊದಲ ಟಾರ್ಗೆಟ್ ಆಗಿದೆ.
ಹಾಗಾಗಿ ನಾವು ಮಂಗಳೂರಲ್ಲಿ ಎನ್ ಐಎ ಘಟಕ ತೆರೆಯಲು ಒತ್ತಾಯಿಸಿದ್ದೇವೆ. ಮಂಗಳೂರಲ್ಲಿ ಎನ್ ಐಎ ಘಟಕ ಆರಂಭವಾದರೆ
ಉಳ್ಳಾಲದಲ್ಲಿ ಅಡಗಿರುವ ಇನ್ನಷ್ಟು ಭಯೋತ್ಪಾದಕರ ಬಂಧನ ಆಗಲಿದೆ ಎಂದರು. ಉಳ್ಳಾಲದ ಕಾಂಗ್ರೆಸಿನ ಹಿಂದೂಗಳು ಕಾಂಗ್ರೆಸ್
ಸಮಾನತೆಯ ಪಕ್ಷ ಎಂದು ಹೇಳುತ್ತಾರೆ. ಹಾಗಾದರೆ ಉಳ್ಳಾಲದಲ್ಲಿ ಕಾಂಗ್ರೆಸಲ್ಲಿ ಓರ್ವ ಹಿಂದೂವನ್ನ ಶಾಸಕ ಅಭ್ಯರ್ಥಿಯನ್ನಾಗಿಸಿ ಗೆಲ್ಲಿಸಿ
ನೋಡೋಣ ಎಂದು ಸವಾಲು ಹಾಕಿದರು.

ಬಜರಂಗದಳ ರಾಷ್ಟ್ರೀಯ ಸಂಯೋಜಕ ನೀರಜ್ ದೊನೇರಿಯ ಮಾತನಾಡಿ ದೇಶದಲ್ಲಿ ಮುಸ್ಲಿಮರು ತಮ್ಮ ಜನಸಂಖ್ಯೆಯನ್ನ ಜಾಸ್ತಿ ಮಾಡುತ್ತಿದ್ದಾರೆ. ಭಾರತದ ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ತೋರ್ಪಡಿಕೆಗೆ ಓರ್ವ ಪತ್ನಿಯನ್ನ ಮದುವೆಯಾದರೆ ಒಳಗಿಂದೊಳಗೆ
ಶರೀಯತ್ ಪ್ರಕಾರ ಬಹುಪತ್ನಿತ್ವ ಹೊಂದಿ ಹತ್ತು ಹದಿನೈದು ಮಕ್ಕಳನ್ನ ಹೆರುತ್ತಿದ್ದಾರೆ. ಸಾಲದಕ್ಕೆ ಲವ್ ಜಿಹಾದ್‌ ನಡೆಸಿ ಹಿಂದೂ ಹೆಣ್ಮಕ್ಕಳ
ಹೊಟ್ಟೆಯಲ್ಲೂ ಮುಸ್ಲಿಮ್ ಮಕ್ಕಳನ್ನ ಹುಟ್ಟಿಸುವುದು ಭಾರತವನ್ನ ಇಸ್ಲಾಮಿಕರಣಗೊಳಿಸುವ ಹುನ್ನಾರಕ್ಕಾಗಿ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ವಿಶ್ವ ಹಿಂದು ಪರಿಷತ್, ಬಜರಂಗದಳದ ಕಾರ್ಯಕರ್ತರು ಉಳ್ಳಾಲಬೈಲಿಂದ ತೊಕ್ಕೊಟ್ಟು ಕಾಪಿಕಾಡು ಮಾರ್ಗದಲ್ಲಿ
ಪಥ ಸಂಚಲನ ನಡೆಸಿದರು.

ನಿಡೋಡಿ ಜ್ಞಾನರತ್ನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಭಾಸ್ಕರ ದೇವಸ್ಯ ಅಧ್ಯಕ್ಷತೆ ವಹಿಸಿದ್ದರು. ವಿ.ಹಿಂ.ಪ, ಬಜರಂಗದಳ ಪ್ರಮುಖರಾದ ಎಂ.ಬಿ ಪುರಾಣಿಕ್, ಗೋಪಾಲ ಕುತ್ತಾರು, ಸುನಿಲ್ ಕೆ.ಆರ್, ಭುಜಂಗ ಕುಲಾಲ್, ನವೀನ್ ಮೂಡುಶೆಡ್ಡೆ, ಪುನೀತ್ ಅತ್ತಾವರ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು