ಮಂಗಳೂರು: ವಿಧಾನ ಸಭಾ ಕ್ಷೇತ್ರದ (ಉಳ್ಳಾಲ) ರಾಷ್ಟ್ರೀಯ ಚುನಾವಣಾ ವೀಕ್ಷಕರಾದ ಆದ ಎನ್ ಯು. ಸಲಾಂ ಇಂದು ಉಳ್ಳಾಲ ನಗರಸಭಾ ಕಚೇರಿಯಲ್ಲಿ ನಡೆದ ಎಸ್ ಡಿಪಿಐ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ವಿಧಾನಸಭಾ ಕ್ಷೇತ್ರ ಚುನಾವಣಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಹೋರಾಟ ರಂಗದಲ್ಲಿ ರಾಜಕೀಯ ಪ್ರಾರಂಭಿಸಿದ ಎಸ್ ಡಿಪಿಐ ಪಕ್ಷವು ಇಂದು ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ 2 ಗ್ರಾಮಪಂಚಾಯತ್ ನಲ್ಲಿ ಆಡಳಿತ ನಡೆಸುವುದರೊಂದಿಗೆ 53 ಗ್ರಾಮ ಪಂಚಾಯತ್ ಸದಸ್ಯರು, 6 ನಗರ ಸಭಾ ಕೌನ್ಸಿಲರ್ ಹಾಗೂ ಒಬ್ಬ ಪಟ್ಟಣ ಪಂಚಾಯತ್ ಕೌನ್ಸಿಲರ್ ಅನ್ನು ಒಳಗೊಂಡಿದ್ದು, ರಾಜಕೀಯ ದುರುದ್ದೇಶಕ್ಕಾಗಿ ಧರ್ಮಗಳ ಮದ್ಯೆ ಕೋಮು ವಿಷಬೀಜ ತುಂಬಿ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ದ ದ್ವೇಷ ಸಾಧಿಸುತ್ತಾ ಇರುವ ಪ್ಯಾಸಿಸಂ ಮನಸ್ಥಿತಿಯ ಬಿಜೆಪಿಯ ಸರಕಾರದ ಆಡಳಿತ ಮತ್ತು ಬಿಜೆಪಿಯ ಪ್ಯಾಸಿಸಂ ಮನಸ್ಥಿತಿಯನ್ನು ಸೋಲಿಸಲು ಸಾಧ್ಯವಿಲ್ಲದೆ ಬಿಜೆಪಿಯ ಆಟಕ್ಕೆ ತಕ್ಕಂತೆ ಕುಣಿಯುವ ವಿರೋದ ಪಕ್ಷ ಕಾಂಗ್ರೆಸ್ ವೈಫಲ್ಯತೆ ನಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಿದರು.
ಕರ್ನಾಟಕ ರಾಜ್ಯ ಚುನಾವಣಾ ಉಸ್ತುವಾರಿ ಹಾಗೂ ಎಸ್ ಡಿಪಿಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಆಫ್ಸರ್ ಕೊಡ್ಲಿಪೇಟೆ ಇವರ ನೇತೃತ್ವದಲ್ಲಿ ಈ ಸಭೆಯು ನಡೆಯಿತು.
2023 ವಿಧಾನಸಭಾ ಚುನಾವಣೆಯ ಕಾರ್ಯ ತಂತ್ರಗಳನ್ನು ಈ ಸಮಯದಲ್ಲಿ ನಡೆಸಲಾಯಿತು. ಸಭೆಯಲ್ಲಿ ಎಸ್ ಡಿಪಿಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯರೂ, ಮಂಗಳೂರು (ಉಳ್ಳಾಲ) ಕ್ಷೇತ್ರ ಚುನಾವಣಾ ಉಸ್ತುವಾರಿಯೂ ಆಗಿರುವ ಅಥಾವುಲ್ಲಾ ಜೋಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ರಾಜ್ಯ ಚುನಾವಣಾ ಜಂಟಿ ಉಸ್ತುವಾರಿ ನವಾಝ್ ಉಳ್ಳಾಲ, ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಎಸ್ ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷೆ ಮಿಶ್ರಿಯ ಕಣ್ಣೂರ್,ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಎಸ್ ಡಿಪಿಐ ಮಂಗಳೂರು (ಉಳ್ಳಾಲ) ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇರ್ಶಾದ್ ಅಜ್ಜಿನಡ್ಕ ಕಾರ್ಯದರ್ಶಿ ಉಬೈದ್ ಹಾಗೂ ಕ್ಷೇತ್ರ ಚುನಾವಣಾ ಉಸ್ತುವಾರಿಗಳು ಭಾಗವಹಿಸಿದರು.