News Kannada
Friday, March 24 2023

ಮಂಗಳೂರು

ಮಂಗಳೂರು: ಬಾವಿಗೆ ಬಿದ್ದಿದ್ದ ಹೆಬ್ಬಾವುಗಳ ರಕ್ಷಣೆ

Mangaluru: Pythons trapped in an abandoned well rescued
Photo Credit : News Kannada

ಮಂಗಳೂರು: ಮಂಗಳೂರು ನಗರದ ಕೊಟ್ಟಾರದ ಪೃಥ್ವಿ ಅಪಾರ್ಟ್‌ಮೆಂಟ್ ಬಳಿಯ ಪಾಳು ಬಾವಿಗೆ ಬಿದ್ದಿದ್ದ ನಾಲ್ಕು ಬೃಹತ್ ಗಾತ್ರದ ಹೆಬ್ಬಾವುಗಳನ್ನು ಪರಿಸರ ಪ್ರೇಮಿಗಳು ರಕ್ಷಿಸಿದ್ದಾರೆ.

ಪಾಳು ಬಾವಿಯಲ್ಲಿ ಹೆಬ್ಬಾವುಗಳು ಬಿದ್ದಿರುವ ವಿಚಾರ ಸ್ಥಳೀಯರೊಬ್ಬರ ಗಮನಕ್ಕೆ ಬಂದಿದೆ. ಅವರು ಈ ಬಗ್ಗೆ ಮಂಗಳೂರಿನ ಪರಿಸರ ಪ್ರೇಮಿ ಭುವನ್ ದೇವಾಡಿಗ ಗಮನಕ್ಕೆ ತಂದಿದ್ದಾರೆ.ತಕ್ಷಣ ಅವರು ಪರಿಸರ ಪ್ರೇಮಿ ಅಜಯ ಕುಲಾಲ್ ತಂಡದೊಂದಿಗೆ ರಾತ್ರೋರಾತ್ರಿ ಹೆಬ್ಬಾವುಗಳ ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದಾರೆ.

ಏಣಿಯ ಸಹಾಯದಿಂದ ಬಾವಿಗಿಳಿದು ಜನರೇಟರ್‌ನಿಂದ ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡಿ ಈ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಸುಮಾರು 8.50 ಅಡಿ ಉದ್ದವಿರುವ 25ಕೆಜಿಗಿಂತಲೂ ಹೆಚ್ಚು ಭಾರವಿರುವ ಈ ಹೆಬ್ಬಾವುಗಳನ್ನು ಭಾರೀ ಪ್ರಯಸಪಟ್ಟು ಪಾಳು ಬಾವಿಯಿಂದ ಭುವನ್ ದೇವಾಡಿಗ, ಅಜಯ್ ಕುಲಾಲ್ ಹಾಗೂ ತಂಡ ರಕ್ಷಿಸಿದೆ.

ಬಳಿಕ ಈ ಹೆಬ್ಬಾವುಗಳನ್ನು ನಗರದ ಹೊರವಲಯದಲ್ಲಿರುವ ಅರಣ್ಯಕ್ಕೆ ಕೊಂಡೊಯ್ದು ಬಿಡಲಾಗಿದೆ. ಉರಗ ಪ್ರೇಮಿಗಳ ಈ ಕಾರ್ಯ ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

See also  ಮಂಗಳೂರು ಜೋಯಾಲುಕ್ಕಾಸ್ ನವೀಕೃತ ಆಭರಣ ಮಳಿಗೆ ಉದ್ಘಾಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು