ಮಂಗಳೂರು: ಕಲ್ಲಾಪು ಬುರ್ದುಗೋಳಿಯ ಶ್ರೀ ಕೊರಗಜ್ಜನ ಉದ್ಬವ ಶಿಲೆಯ ಆದಿಸ್ಥಳಕ್ಕೆ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕತಿ ಸಚಿವರಾದ ಶ್ರೀ ಸುನಿಲ್ ಕುಮಾರ್ ಭೇಟಿ ನೀಡಿ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸದರು.
ಮಂಗಳೂರು ಮಂಡಲ ಬಿ.ಜೆ.ಪಿ ಅಧ್ಯಕ್ಷರು, ಬುರ್ದುಗೋಳಿ ಕ್ಷೇತ್ರದ ಭಂಡಾರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಸೇವಾ ಸಮಿತಿ ಅಧ್ಯಕ್ಷ ವಿಶ್ವನಾಥ ನಾಯಕ್, ಮಧ್ಯಸ್ಥರಾದ ದೇವದಾಸ್ ಗಟ್ಟಿ ಕಾಯಂಗಳ, ಪ್ರಶಾಂತ್ ಗಟ್ಟಿ, ನವೀನ್ ಗಟ್ಟಿ ಕಾಯಂಗಳ, ಪುರುಷೋತ್ತಮ ಕಲ್ಲಾಪು, ಗಿರೀಶ್ ಇವರುಗಳು ಸಚಿವನ್ನು ಕ್ಷೇತ್ರದ ಪರವಾಗಿ ಅಭಿನಂದಿಸಿದರು.
ಬಿಜೆಪಿ ಮಂಗಳೂರು ಕ್ಷೇತ್ರದ ಹೇಮಂತ್ ಶೆಟ್ಟಿ, ಜಿತೇಂದ್ರ ಶೆಟ್ಟಿ, ದಯಾನಂದ ತೊಕ್ಕೊಟ್ಟು, ರಾಜೇಶ್ ಪ್ರಕಾಶ್ ನಗರ ಮತ್ತಿತರಿದ್ದರು.