ಬೆಳ್ತಂಗಡಿ: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಶಾಲಾ ಹಳೆವಿದ್ಯಾರ್ಥಿಗಳು,ಗ್ರಾಮಸ್ಥರು ಕೈಜೋಡಿಸಿದಾಗ ಮಕ್ಕಳಿಗೆ ಕಲಿಕೆಗೆ ಮೂಲ ಸೌಕರ್ಯ ಸಿಗುತ್ತದೆ. ಇಂದು ಬೆಳ್ತಂಗಡಿ ರೊಟರಿ ಕ್ಲಬ್ ವಿವಿಧ ಮೂಲ ಸೌಕರ್ಯಕ್ಕೆ 12 ಲಕ್ಷ ರೂಗಳನ್ನು ಬಳಂಜ ಶಾಲೆಗೆ ನೀಡಿದ್ದು ಅಭಿನಂದನೀಯ. ಬೆಳ್ತಂಗಡಿ ರೋಟರಿ ಕ್ಲಬ್ ನೆರೆ ಬಂದ ಸಮಯದಲ್ಲಿ, ಕರೋನಾ ಸಂದರ್ಭದಲ್ಲಿ ತಾಲೂಕಿಗೆ ನೀಡಿದ ಸೇವೆ ಮರೆಯಲಾರದು. ಬಳಂಜ ಶಾಲೆಗೆ ನೀಡಿದ ಕೊಡುಗೆಗೆ ಶಾಸಕನ ನೆಲೆಯಲ್ಲಿ ಅಭಿನಂದಿಸುತ್ತೆನೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.
ಅವರು ಬುಧವಾರ ಬಳಂಜ ಶಾಲಾ ವಠಾರದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ ಇವರ ಸಹಕಾರದಿಂದ , ಇದರ can Fin Homes Ltd ಇದರ ವಿದ್ಯಾನಿದಿ ಅನುದಾನದಲ್ಲಿ ಕಲಾ ಮಂದಿರಕ್ಕೆ ಶೀಟ್ ಅಳವಡಿಕೆ,ಸೋಲಾರ್ ಅಳವಡಿಕೆ,ಮತ್ತು ಶಾಲಾ ಕೊಠಡಿ ನವೀಕರಣ ಕಾಮಗಾರಿಗೆ 12 ಲಕ್ಷ ಮಂಜೂರಾಗಿದ್ದು ಇದರ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಶಾಲೆಯ ಪ್ರಮುಖ ಬೇಡಿಕೆಯಾದ ಕಲಾ ಮಂದಿರದ ಮುಂಬಾಗಕ್ಕೆ ಇಂಟರ್ ಲಾಕ್ ಅಳವಡಿಸುವುದಾಗಿ ಹೇಳಿದರು.
ಬೆಳ್ತಂಗಡಿ ರೊಟರಿ ಕ್ಲಬ್ ಅದ್ಯಕ್ಷೆ ಮನೋರಮಾ ಭಟ್ ಮಾತನಾಡಿ ಉಳ್ಳವರು ಮತ್ತು ಇಲ್ಲವ ಕೊಂಡಿಯಾಗಿ ರೊಟರಿ ಕ್ಲಬ್ ಕಾರ್ಯ ನಿರ್ವಹಿಸುತ್ತಿದ್ದು ಶಿಕ್ಷಣ, ಅರೋಗ್ಯ,ಪರಿಸರ ಸಂರಕ್ಷಣೆ ಇನ್ನಿತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಈ ಭಾರಿ ಶಿಕ್ಷಣಕ್ಕೆ ಬೆಳ್ತಂಗಡಿ ಪದವಿ ಪೂರ್ವ ಕಾಲೇಜಿಗೆ ಮತ್ತು ಬಳಂಜ ಶಾಲೆಗೆ ಕೊಡುಗೆ ನೀಡಿದ್ದು ಇದಕ್ಕೆ ಗ್ರಾಮಸ್ಥರ ,ಶಾಲಾ ಶಿಕ್ಷಕರ ಸ್ಪಂದನೆಯೂ ಕಾರಣ ಎಂದರು.
ಬಳಂಜ ಪ್ರೌಡಶಾಲಾ ಎಸ್ ಡಿ ಎಂ ಸಿ ಕಾರ್ಯಾದ್ಯಕ್ಷ ಕೆ ವಸಂತ ಸಾಲಿಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ರೋಟರಿ ಕ್ಲಬ್ ನವರು ಇಷ್ಟು ದೊಡ್ಡ ಮಟ್ಟದ ಅನುದಾನ ನೀಡುತ್ತಾರೆ ಎಂಬುದು ಇವತ್ತಿನ ಕಾರ್ಯಕ್ರಮವೇ ಸಾಕ್ಷಿ.ಹಳೆ ವಿದ್ಯಾರ್ಥಿ ಗಳಿಗೆ ತಾನು ಕಲಿತ ಶಾಲೆಯ ಮೇಲೆ ಪ್ರಿತಿ ಇದ್ದಾಗ ಇಂತಹ ಕೊಡುಗೆಗಳು ಒದಗಿಬರಲು ಸಾದ್ಯ ಎಂಬುದು ಇಂದು ಸಾಕಾರ ಗೊಂಡಿದೆ ಎಂದರು.
ಪತ್ರಕರ್ತ ಮನೋಹರ್ ಬಳಂಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿದ ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಸಾದನೆ ಗೈದ ವಿದ್ಯಾರ್ಥಿಗಳನ್ನು ಶಾಸಕ ಹರೀಶ್ ಪೂಂಜಾ ಗೌರವಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ರಕ್ಷಾ ರಾಗ್ನೇಸ್,ಗ್ರಾ ಪಂ ಸದಸ್ಯರಾದ ಯಶೋಧರ ಶೆಟ್ಟಿ ,ಯಕ್ಷತಾ,ಬಳಂಜ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅದ್ಯಕ್ಷ ಸತೀಸ್ ರೈ ಬಾದಡ್ಕ,ಬಳಂಜ ಶಿವಾಜಿ ಪ್ರೆಂಡ್ಸ್ ಕ್ಲಬ್ ನ ಅದ್ಯಕ್ಷ ಜಗದೀಶ್ ರೈ, ಪ್ರಗತಿ ಪರ ಕ್ರುಷಿಕ ಚಂದ್ರ ರಾಜ ಪುವಣಿ,ಶಾಲಾಬಿವ್ರುದ್ದಿ ಸಮಿತಿ ಮಾಜಿ ಅದ್ಯಕ್ಷ ಪ್ರಮೋದ್ ಜೈನ್,ಪ್ರೌಡಶಾಲಾ ಮುಖ್ಯೋಪಾಧ್ಯಾಯಿನಿ ಸುಲೋಚನಾ ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ವಿಲ್ಫ್ರೆಡ್ ಪಿಂಟೋ ಸ್ವಾಗತಿಸಿ ಶಿಕ್ಚಕ ಮಲ್ಲಿಕಾರ್ಜುನ ವಂದಿಸಿದರು.