ಮಂಗಳೂರು, ಜ.31: ಶಕ್ತಿನಗರದಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿಕನ್ನಡದವರ ಕವಿ ಎಂದೇ ಹೆಸರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ 125ನೇ ಜನ್ಮದಿನಾಚರಣೆಯನ್ನುಆಚರಣೆ ಮಾಡಲಾಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಕನ್ನಡ ಅಧ್ಯಾಪಕರಾದ ಶರಣಪ್ಪರವರು ಮಾತನಾಡಿ “ದ.ರಾ.ಬೇಂದ್ರೆಯವರು ಬರೆದ ಪ್ರತಿಯೊಂದು ಕವನಗಳ ಸಾಲು ಅವರು ಜೀವನದಲ್ಲಿ ಕಂಡ ನೋವು, ಕಷ್ಟಗಳ ಕನ್ನಡಿಯಂತಿವೆ. ಮೂಲ ಭಾಷೆ ಮರಾಠಿ ಆದರೂ ಕನ್ನಡದಲ್ಲಿ ಸಾಹಿತ್ಯ ರಚಿಸಿ ಎರಡನೆಯ ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟ ಧೀಮಂತ ವ್ಯಕ್ತಿ ದ.ರಾ.ಬೇಂದ್ರೆ. ಜೀವನದಲ್ಲಿ ಕಷ್ಟಗಳನ್ನು ಎದುರಿಸಿ ನಿಲ್ಲುವುದು ಹೇಗೆ ಎಂಬುದನ್ನು ದ.ರಾ.ಬೇಂದ್ರೆ ಅವರಿಂದ ಕಲಿಯಬೇಕಿದೆ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬೇಂದ್ರೆ ಅವರು ಬರೆದ ಶ್ರಾವಣ ಬಂತುಕಾಡಿಗೆ ಎಂಬ ಹಾಡನ್ನು ಹಾಡಿದರು. ಸುಹಾನಿ ದಿನದ ಪ್ರಾಮುಖ್ಯತೆಯ ಕುರಿತಂತೆ ಮಾತನಾಡಿದರು. ಈ ಸಂದರ್ಭದಲ್ಲಿ ದ.ರಾ.ಬೇಂದ್ರೆ ಕುರಿತಾದ ಒಂದು ಸಾಕ್ಷ್ಯ ಚಿತ್ರವನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಲಾಯಿತು.
ಗೇಷ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.