ಬಂಟ್ವಾಳ: ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಅವಧಿ ಮುಗಿದ ಒಂದು ಗ್ರಾಮ ಪಂಚಾಯತ್ ಗೆ ಚುನಾವಣೆ ಹಾಗೂ ವಿವಿಧ ಕಾರಣಗಳಿಗಾಗಿ ತೆರವಾದ ಎರಡು ಗ್ರಾಮಪಂಚಾಯತ್ ಗಳ ತಲಾ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, ಪೆ.25 ರಂದು ಚುನಾವಣೆ ನಡೆಯಲಿದೆ.
ರಾಜ್ಯ ಚುನಾವಣಾ ಆಯೋಗವು 2023ರ ಜನವರಿಯಿಂದ ಎಪ್ರಿಲ್ ತಿಂಗಳವರೆಗೆ ಅವಧಿ ಮುಕ್ತಾಯವಾಗುವ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಉಳ್ಳಾಲ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪುದು ಗ್ರಾಮ ಪಂಚಾಯತ್ ನ 10 ವಾರ್ಡ್ ಗಳ 34 ಸದಸ್ಯ ಸ್ಥಾನಗಳಿಗೆ ಹಾಗೂ ವಿವಿಧ ಕಾರಣದಿಂದ ತೆರವಾದ 2 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.
ಚುನಾವಣಾ ವೇಳಾಪಟ್ಟಿ
ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ಫೆ.8 ಬುಧವಾರ.
ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ ಮತ್ತು ದಿನ ಫೆ.14 ಮಂಗಳವಾರ.
ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ ಫೆ.15 ಬುಧವಾರ.
ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳುವ ಕೊನೆ ದಿನಾಂಕ ಮತ್ತು ದಿನ ಫೆ.17 ಶುಕ್ರವಾರ.
ಮತದಾನದ ದಿನ ಫೆ.25 ರಂದು ಶನಿವಾರ.
ಮರು ಮತದಾನ ಅವಶ್ಯವಿದ್ದರೆ ಫೆ. 27 ಸೋಮವಾರ.
ಮತ ಎಣಿಕೆ ದಿನ ಫೆ.28 ಮಂಗಳವಾರ.
ಚುನಾವಣೆ ಫೆ.25 ರಂದು ಶನಿವಾರ ಬೆಳಿಗ್ಗೆ 7. ಗಂಟೆಯಿಂದ ಸಂಜೆ 5. ಗಂಟೆಯವರೆಗೆ ನಡೆಯಲಿದೆ.
ಮತದಾನ ಯಾವ ರೀತಿ
ಕಳೆದ ಬಾರಿ ನಡೆದ ಪುದು ಗ್ರಾಮಪಂಚಾಯತ್ ಚುನಾವಣೆಯಲ್ಲಿ ಇಲೆಕ್ಟ್ರಾನಿಕ್ ಮೆಷಿನ್ ಮೂಲಕ ಮತದಾನ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ ಈ ಬಾರಿ ಅದೇ ಮಾದರಿಯಲ್ಲಿ ಮತದಾನ ನಡೆಯುತ್ತಾ? ಅಥವಾ ಹಳೆಯ ಮಾದರಿಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ನಡೆಯುತ್ತಾ ಎಂಬ ಸೂಚನೆ ಇನ್ನೂ ಕೂಡ ಬಂದಿಲ್ಲ ಎಂಬ ಮಾಹಿತಿಯನ್ನು ಬಂಟ್ವಾಳ ಚುನಾವಣಾ ಶಾಖೆಯ ಅಧಿಕಾರಿ ನವೀನ್ ಬೆಂಜನಪದವು ತಿಳಿಸಿದ್ದಾರೆ.
ಮೀಸಲಾತಿ
ಪುದು ಗ್ರಾಮಪಂಚಾಯತ್ ನಲ್ಲಿ 10 ವಾರ್ಡ್ ಗಳಿದ್ದು, 34 ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಪುದು ವಾರ್ಡ್ 1 ಹಿಂದುಳಿದ ವರ್ಗ ಬಿ1 ,ಸಾಮಾನ್ಯ1 , ಸಾಮಾನ್ಯ ಮಹಿಳೆ 2 ಒಟ್ಟು 4 ಸದಸ್ಯರ ಸ್ಥಾನಗಳು.
ಪುದು ವಾರ್ಡ್ 2 ರಲ್ಲಿನ ಹಿಂದುಳಿದ ವರ್ಗ ಬಿ. ಮಹಿಳೆ 1, ಸಾಮಾನ್ಯ 1, ಸಾಮಾನ್ಯ ಮಹಿಳೆ 1 ಒಟ್ಟು 3 ಸದಸ್ಯರ ಸ್ಥಾನಗಳು.
ಪುದು ವಾರ್ಡ್ 3. ರಲ್ಲಿ ಹಿಂದುಳಿದ ವರ್ಗ ಎ ಮಹಿಳೆ 1, ಸಾಮಾನ್ಯ 2, ಸಾಮಾನ್ಯ ಮಹಿಳೆ 1 ಒಟ್ಟು 4 ಸದಸ್ಯರ ಸ್ಥಾನಗಳು.
ಪುದು ವಾರ್ಡ್ 4 ರಲ್ಲಿ ಹಿಂದುಳಿದ ವರ್ಗ ಎ. 1, ಸಾಮಾನ್ಯ 1, ಸಾಮಾನ್ಯ ಮಹಿಳೆ 1 ಒಟ್ಟು 3 ಸದಸ್ಯರ ಸ್ಥಾನಗಳು.
ಪುದು ವಾರ್ಡ್ 5 ರಲ್ಲಿ ಹಿಂದುಳಿದ ವರ್ಗ ಎ, ಹಿಂದುಳಿದ ವರ್ಗ ಎ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆ ತಲಾ ಒಂದು ಒಟ್ಟು 4 ಸದಸ್ಯರ ಸ್ಥಾನಗಳು.
ಪುದು ವಾರ್ಡ್ 6 ರಲ್ಲಿ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗ ಎ.ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆ ತಲಾ ಒಂದು, ಒಟ್ಟು 4 ಸದಸ್ಯ ಸ್ಥಾನಗಳು.
ವಾರ್ಡ್ 7 ರಲ್ಲಿ ಹಿಂದುಳಿದ ವರ್ಗ ಎ.ಮಹಿಳೆ, ಹಿಂದುಳಿದ ವರ್ಗ ಬಿ.ಮಹಿಳೆ, ಸಾಮಾನ್ಯ ತಲಾ ಒಂದು ಒಟ್ಟು 3 ಸದಸ್ಯ ಸ್ಥಾನಗಳು.
ವಾರ್ಡ್ 8 ರಲ್ಲಿ ಅನುಸೂಚಿತ ಮಹಿಳೆ 1 ಸಾಮಾನ್ಯ 2 ಒಟ್ಟು 3 ಸದಸ್ಯರ ಸ್ಥಾನಗಳು.
ವಾರ್ಡ್ 9 ರಲ್ಲಿ ಹಿಂದುಳಿದ ವರ್ಗ ಎ, ಸಾಮಾನ್ಯ , ಸಾಮಾನ್ಯ ಮಹಿಳೆ ತಲಾಒಂದು ಒಟ್ಟು ಸದಸ್ಯರು 3 .
ವಾರ್ಡ್ 10 ರಲ್ಲಿ ಹಿಂದುಳಿದ ವರ್ಗ ಎ, ಸಾಮಾನ್ಯ , ಸಾಮಾನ್ಯ ಮಹಿಳೆ ತಲಾ ಒಂದು ಒಟ್ಟು ಸದಸ್ಯರ ಸಂಖ್ಯೆ 3 .ಹೀಗೆ ಪುದು ಗ್ರಾಮ ಪಂಚಾಯತ್ ನಲ್ಲಿ 10 ವಾರ್ಡ್ ಗಳಲ್ಲಿ 34 ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಮತದಾರರು
ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2011 ರ ಜನಗಣತಿಯ ಪ್ರಕಾರ ಒಟ್ಟು 13533 ಜನಸಂಖ್ಯೆ ಯಿದ್ದು, 6726 ಮಂದಿ ಗಂಡಸರು, 6807 ಮಂದಿ ಹೆಂಗಸರು ವಾಸ್ತವ್ಯ ಇದ್ದಾರೆ. ಈ ಬಾರಿ ಸುಮಾರು 10,000 ಕ್ಕೂ ಅಧಿಕ ಮತದಾರರಿದ್ದಾರೆ.
ಉಪಚುನಾವಣೆ
ಬಂಟ್ವಾಳ ತಾಲೂಕಿನ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಅನಂತಾಡಿ ಹಾಗೂ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಗಳಲ್ಲಿ ತೆರವಾದ ತಲಾ ಒಂದೊಂದು ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅನಂತಾಡಿ ಗ್ರಾಮ ಪಂಚಾಯತ್ ಸದಸ್ಯೆ ಮಮಿತಾ ಅವರು ಸರಕಾರಿ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ತೆರಳಿದ ಕಾರಣಕ್ಕಾಗಿ ಇವರ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ನೆಟ್ಲಮುಡ್ನೂರು ಗ್ರಾಮಪಂಚಾಯತ್ ನಲ್ಲಿ ಸದಸ್ಯರಾಗಿದ್ದ ರೇಖಾ ಅವರು ಅಕಾಲಿಕವಾಗಿ ಮರಣ ಹೊಂದಿದ ಕಾರಣಕ್ಕಾಗಿ ಇಲ್ಲಿ ಉಪಚುನಾವಣೆ ನಡೆಯಲಿದೆ. ಈ ಎರಡು ಗ್ರಾಮ ಪಂಚಾಯತ್ ಗಳ ತೆರವಾದ ಸ್ಥಾನಗಳಿಗೆ ಹಿಂದುಳಿದ ವರ್ಗ ಎ.ಮಹಿಳೆ ಮೀಸಲಾತಿಯಿದ್ದು ಒಟ್ಟು ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಎರಡು ಗ್ರಾಮಪಂಚಾಯತ್ ಗಳ ತೆರವಾದ ವಾರ್ಡ್ ಗಳಲ್ಲಿ ಸುಮಾರು 700 ರಷ್ಟು ಮತಗಳಿವೆ, ಸರಿಯಾದ ಲೆಕ್ಕ ಇನ್ನಷ್ಟೇ ತಿಳಿಯಬೇಕಾಗಿದೆ.