ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ಸ್ವಸ್ತಿಕ್ ಕಲಾ ಕೇಂದ್ರದ ವತಿಯಿಂದ ” ಸ್ವಸ್ತಿಕ್ ಸಂಭ್ರಮ- 2023″ ಫೆ. 4 ನೇ ಶನಿವಾರದಂದು ಕರ್ಮಾರ್ ನ ಆದರ್ಶ ವಿದ್ಯಾನಿಲಯ ಶಾಲಾ ಆವರಣದಲ್ಲಿ ನಡೆಯಿತು.
ಅಂದು ಶಾಲಾ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ನಡೆದು ಪಡ್ಪು, ನಂತೂರು ಹಾಗೂ ಆದರ್ಶ ಶಾಲೆ, ಕರ್ಮಾರ್ ಇಲ್ಲಿನ ಪ್ರಾಥಮಿಕ ಶಾಲೆಗಳಿಗೆ ಕ್ರೀಡೋಪಕರಣ ಹಸ್ತಾಂತರಿಸಿ,ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯು 22-23 ರ ಸಾಲಿಗಾಗಿ ಅತ್ಯುತ್ತಮ ಶಿಕ್ಷಣ ಕೇಂದ್ರ ರೋಲಿಂಗ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಇಪ್ಪತ್ತು ಮಂದಿ ಅಶಕ್ತರಿಗೆ ವಿಮಾ ಪಾಲಿಸಿ ವಿತರಿಸಲಾಯಿತು.
ಶೇಕಡಾ 90 ಅಂಕಗಳಿಸಿದ ಸಾನ್ವಿ ಎಲ್. ಸುವರ್ಣ, ಕೆ.ಎಸ್. ಧನ್ವಿ, ಆಕಾಂಕ್ಷ ಎಸ್. ರಾವ್ ಹಾಗೂ ಏಸ್ಟೆಲ್ ಕ್ರಿಸ್ ಮೊಂತೇರೋ ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಚಿತ್ರನಟ ರಮೇಶ್ ಭಟ್ ಹಾಗೂ ಸಂಗೀತ ಕಲಾವಿದ ಸಂದೇಶ್ ನೀರ್ ಮಾರ್ಗ ಇವರುಗಳಿಗೆ 2023 ರ ಸ್ವಸ್ತಿಕ್ ಕಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಟ ರಮೇಶ್ ಭಟ್ “ಶಿಕ್ಷಣಕ್ಕೆ ನೀಡುವ ಪ್ರೋತ್ಸಾಹ ಸ್ವಸ್ತಿಕ್ ನಿಂದ ನಿರಂತರ ನಡೆಯುತ್ತಿರಲಿ. ಈ ನಿಟ್ಟಿನಲ್ಲಿ ಸಂಸ್ಥೆ ಗ್ರಾಮಕ್ಕೇ ಮಾದರಿಯಾಗಲಿ” ಎಂದರು.
ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ” ನಾಯಿದ ಬೀಲ” ಎಂಬ ತುಳು ನಾಟಕ ಪ್ರಸ್ತುತ ಪಡಿಸಲಾಯಿತು. ಈ ಸಂದರ್ಭದಲ್ಲಿ ದಕ್ಶಿಣ ವಿದಾನಸಭಾ ಕ್ಷೇತ್ರದ ಶಾಸಕ ಶ್ರೀ ವೇದವ್ಯಾಸ ಕಾಮತ್, ಮಾಜಿ ಶಾಸಕರಾದ ಜೆ.ಆರ್. ಲೋಬೋ, ಪಾಲಿಕೆ ಸದಸ್ಯರಾದ ಆಶ್ರಫ್, ಹಾಗೂ ಶೋಭಾ ಪೂಜಪ್ರಶಸ್ತಿಬರಾಜ್ ಅರಸು ಪ್ರಶಸ್ತಿ ಪುರಸ್ಕೃತ. ಡಾ.ಅಣ್ಣಯ್ಯ ಕುಲಾಲ್, ನಮ್ಮ ಕುಡ್ಲ ನಿರೂಪಕಿ ಡಾ. ಪ್ರಿಯಾ ಹರೀಶ್, ಶ್ರೀಗಳಾದ ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿ ಲಯನ್ ಬಿ.ಪ್ರಕಾಶ್ ಪೈ., ರವಿ ಭಟ್ ಮುಡಂಗಲ್ಲು, ಲಯನ್ಸ್ ಕ್ಲಬ್ ಮಾಜಿ ಉಪಾಧ್ಲಯಕ್ಯಷನ್ಸ್ಹಎಸ್.ಎಸ್. ಯಪೂಜಾರಿ,ವಿಜಯಾ ಬ್ಯಾಂಕ್ ನ ಯಾದವ ಕೆ., ಶಿಕ್ಷಕ ಹೇಮಂತ್ ಅಮೀನ್, ರಾಜಲಕ್ಷ್ಮಿ ಜ್ಯುವೆಲ್ಲರ್ಸ್ ಮಾಲಕ ಅಶೋಕ್ ಪೂಜಾರಿ,ಹಾಗೂ ಕಂಟ್ರಾಕ್ಟರ್ ಕೆ. ನಾಗರಾಜ್ ಕೆ. ಹಾಗೂ ಮೋಹನ್ ಕೊಟ್ಟಾರೊ ಕೆ. ಉಪಸ್ಥಿತರಿದ್ದರು.
ಸಂಸ್ಥೆಯ ವಿದ್ಯಾ ಕೆ. ಕ್ರೀಡಾ ವಾಚನ, ಪ್ರ. ಕಾರ್ಯದರ್ಶಿ ಶೋಭಾ ಹರೀಶ್ ವರದಿ ಮಂಡಿಸಿ, ಜತೆ ಕಾರ್ಯದರ್ಶಿ ಅಶೋಕ್ ಜಾದವ್,ಕ್ರೀಡೋಪಕರಣದ ಹಾಗೂ ಮಲ್ಲಿಕಾ ರಾವ್ ವಿಮಾಪಾಲಿಸಿ ಮತ್ತು ಶೈಕ್ಷಣಿಕ ಸಂಚಾಲಕಿ ಸುಮಲತಾ ಹರೀಶ್ ಪ್ರತಿಭಾ ಪುರಸ್ಕಾರದ ವಿವರ ಮಂಡಿಸಿದರು. ಸಂಸ್ಥೆಯ ಗೌರವಾಧ್ಯಕ್ಷ ಗಂಗಾಧರ್, ನಾಗೇಶ್ ಎಂ., ಮಾಲತಿ ನಾಯರ್, ಉಷಾ ಟೀಚರ್, ಗಣೇಶ್ ಕೊಟ್ಟಾರಿ ,ವಿಜಯ ಕುಮಾರ್,ಪ್ರೇಮಾ ಭವಾನಿ ಉಪಸ್ಥಿತರಿದ್ದರು. ಆನಂದ್ ರಾವ್ ಸ್ವಾಗತಿಸಿ, ಅಧ್ಯಕ್ಷ ಕೆ.ಸಿ.ಹರಿಶ್ಚಂದ್ರ ರಾವ್ ಹಾಗೂ ಸಂತೋಷ್ ಕೆ. ಧನ್ಯವಾದವಿತ್ತು ಕಾರ್ಯಕ್ರಮ ನಿರೂಪಿಸಿದರು.