ಬಂಟ್ವಾಳ: ತಾನು ಶಾಸಕನಾಗಿ ಇರಲಿ ಅಥವಾ ಇಲ್ಲದಿರಲಿ, ಒಳ್ಳೆಯ ಕೆಲಸಗಳ ಜೊತೆ ಯಾವಾಗಲೂ ನಾನಿದ್ದೇನೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.
ಬಂಟ್ವಾಳ ತಾಲೂಕು ನೆಟ್ಲಮುಡ್ನೂರು ಗ್ರಾಮದ ಏಮಾಜೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತನ್ನ ಅನುದಾನದಲ್ಲಿ ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಲಿಕಾ ಕೊಠಡಿಯ ಶಿಲನ್ಯಾಸ ನೆರವೇರಿಸಿ, ಮುತ್ತೂಟ್ಫೈ ನಾನ್ಸ್ ವತಿಯಿಂದ ನಿರ್ಮಿಸಲ್ಪಟ್ಟ ಬಾಲವನ, ಹಾಗೂ ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ ವತಿಯಿಂದ ನರೇಗಾ ಯೋಜನೆಯ ಅಡಿಯಲ್ಲಿ ನಿರ್ಮಿಸಲ್ಪಟ್ಟ ಶಾಲಾ ಆವರಣ ಗೋಡೆ ಹಾಗೂ ಆಟದ ಮೈದಾನ ವಿಸ್ತರಣೆ ಕಾಮಗಾರಿಗಳಿಗೆ ಚಾಲನೆ ಹಾಗೂ ಹರೀಶ್ ಮುಜಾಲ ಒದಗಿಸಿಕೊಟ್ಟ ಬಾಸ್ಕೆಟ್ ಬಾಲ್ ಕ್ರೀಡಾ ಸಲಕರಣೆಗಳನ್ನು ಶಾಲೆಗೆ ಹಸ್ತಾಂತರಿಸಿ ಮಾತಾಡಿದರು.
ತನ್ನ ಕ್ಷೇತ್ರದ ಹಳ್ಳಿ ಪ್ರದೇಶದ ಏಮಾಜೆ ಶಾಲೆಯನ್ನು ಬಾಲವನ ನಿರ್ಮಿಸಲು ಆಯ್ಕೆ ಮಾಡಿ ಬಹಳ ಸುಂದರವಾಗಿ ಬಾಲವನ ನಿರ್ಮಿಸಿಕೊಟ್ಟ ಮುತ್ತೂಟ್ ಫೈನಾನ್ಸ್ ಸಂಸ್ಥೆಯನ್ನು ಶಾಸಕರು ಅಭಿನಂದಿಸಿದರು. ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಅಧ್ಯಕ್ಷತೆ ವಹಿಸಿದ್ದರು.
ಶಾಲೆಗೆ ಅಭಿವೃದ್ಧಿಗೆ ಸಹಕರಿಸಿದ ವಿವಿಧ ಗಣ್ಯರನ್ನು ಅಭಿನಂದಿಸಲಾಯಿತು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಕೀಲಾ ಕೃಷ್ಣ ಮಿತ್ತಕೋಡಿ, ಪಂಚಾಯತ್ ಸದಸ್ಯರಾದ ಸವಿತಾ ಡಿ ಪೂಜಾರಿ, ಧನಂಜಯ ಗೌಡ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾ ಗಣೇಶ್ ಆಚಾರ್ಯ, ಉಪಾಧ್ಯಕ್ಷರಾದ ಪ್ರಸಾದ್ ಆಚಾರ್ಯ ಮೈಕೆ, ಮುತ್ತೂಟ್ ಫೈನಾನ್ಸಿನ ಪುತ್ತೂರು ಕ್ಲಸ್ಟರ್ ಮೆನೇಜರ್ ಸಂದೇಶ್ ಶೆಣೈ, ಪುತ್ತೂರು ಬ್ರಾಂಚ್ ಮ್ಯಾನೇಜರ್ ನವೀನ್ ಎ, ಸಿಎಸ್ ಆರ್ ಮ್ಯಾನೇಜರ್ ಪ್ರಸಾದ್ ಕುಮಾರ್ ಮಂಗಳೂರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನುಷಾ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ರಮೇಶ್ ಸ್ವಾಗತಿಸಿ, ಗೌರವ ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಶಿಕ್ಷಕಿಯರು ಸಹಕರಿಸಿದರು.