ಕೋಡಿಕಲ್: ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರದ ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್, ನಂಬರ್ 17ರಲ್ಲಿ 3.61 ಕೋಟಿ ರೂ.ವೆಚ್ಚದಲ್ಲಿ ಮೂರು ಬೃಹತ್ ಕಾಮಗಾರಿಗೆ ಶಾಸಕ ಡಾ||ಭರತ್ ಶೆಟ್ಟಿ ವೈ ಅವರು ಗುದ್ದಲ್ಲಿ, ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು ಲೋಕೋಪಯೋಗಿ ಇಲಾಖೆಯಿಂದ 1. 68 ಕೋಟಿ ರೂ., ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ 98 ಲಕ್ಷ ರೂ . ಸಣ್ಣ ನೀರಾವರಿ ಇಲಾಖೆಯಿಂದ 95 ಲಕ್ಷ ರೂ.ಅನುದಾನ ಬಿಡುಗಡೆಯಾಗಿದ್ದು, ಅಭಿವೃದ್ಧಿ ಕಾಮಗಾರಿಯಲ್ಲಿ ಯಾವುದೇ ರಾಜಿ ಇಲ್ಲದೆ ಎಲ್ಲರಿಗೂ ಮೂಲಸೌಕರ್ಯ ಸಿಗುವಂತೆ ಹೆಚ್ಚಿನ ಪ್ರಯತ್ನ ನಡೆಸಲಾಗಿದೆ ಎಂದು ನುಡಿದರು.
ನಗರಾಭಿವೃದ್ಧಿ ಇಲಾಖೆಯಿಂದ 23 ಕೋ.ರೂ.ಗಳನ್ನು ಸಚಿವ ಭೈರತಿ ಬಸವರಾಜ್ ಅವರು ಬಿಡುಗಡೆಯನ್ನು ಮಾಡಿದ್ದಾರೆ. ಮುಖ್ಯಮಂತ್ರಿಯವರಿಂದಲೂ, ವಿಶೇಷ ಅನುದಾನ ಕೇತಕ್ಕೆ ತರುವಲ್ಲಿಯಶಸ್ವಿಯಾಗಿದ್ದೇನೆ ಎಂದರು.
ಕಾರ್ಪೋರೆಟರ್ ಮನೋಜ್ ಕುಮಾರ್ ಮಾತನಾಡಿ, ನಾನು ಪ್ರತಿನಿಧಿಸುವ ವಾರ್ಡಿಗೆ ಅಂದಾಜು 6 ಕೋಟಿ ರೂ. ಶಾಸಕರು ಬಿಡುಗಡೆ ಮಾಡಿದ್ದಾರೆ. ನಗರ ವಿಕಾಸ ಯೋಜನೆಯಡಿ 98 ಲಕ್ಷ ರೂ ಸಣ್ಣ ನೀರಾವರಿ ಇಲಾಖೆಯಿಂದ 95 ಲಕ್ಷ ರೂ.ಹೆಚ್ಚು ಅನುದಾನ ಶಾಸಕರು ಬಿಡುಗಡೆ ಮಾಡಿದ್ದಾರೆ.
ನಗರ ವಿಕಾಸ ಯೋಜನೆಯಡಿ 4 ಲಕ್ಷ ರೂ., ಸಣ್ಣ ನೀರಾವರಿ ಇಲಾಖೆಯಿಂದ 95 ಲಕ್ಷ ರೂ.ಅನುದಾನ ಬಿಡುಗಡೆಯಾಗಿದ್ದು, ಅಭಿವೃದ್ಧಿ ಕಾಮಗಾರಿಯಲ್ಲಿ ಯಾವುದೇ ರಾಜಿ ಇಲ್ಲದೆ ಎಲ್ಲರಿಗೂ ಮೂಲಸೌಕರ್ಯ ಸಿಗುವಂತೆ ಹೆಚ್ಚಿನ ಪ್ರಯತ್ನ ನಡೆಸಲಾಗಿದೆ ಎಂದು ನುಡಿದರು.
ವಿಶೇಷವಾಗಿ ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರದ ಅತ್ಯಂತ ಮೂಲಸೌಕರ್ಯಕ್ಕೆ ಹೆಚ್ಚಿನ ಗಮನವನ್ನು ನೀಡಿ ಕೆಲಸವನ್ನು ಮಾಡಿದ್ದಾರೆ ಎಂದರು.
ಪ್ರಮುಖರಾದ ಲೋಕನಾಥ್ ಬಂಗೇರ ಶರತ್ ಪಾಲಾಡಿ ರಾಘವ ಶೆಟ್ಟಿ ಬಿಜೆಪಿ ಹಿರಿಯ ಮುಖಂಡರು, ಸ್ಥಳೀಯರು ಮತ್ತಿತರ ಹಿರಿಯ ನಾಯಕರು ಉಪಸ್ಥಿತರಿದ್ದರು.