ಮಂಗಳೂರು: ಅಡಕೆ ಬೆಳೆಗಾರರ ಸಮಾವೇಶ, ಕ್ಯಾಂಪ್ಕೊ ಸಂಸ್ಥೆ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತೂರಿಗೆ ಹೆಲಿಕಾಪ್ಟರ್‌ನಲ್ಲಿ ಗಜಾನನ ಶಾಲೆಯ ಹೆಲಿಪ್ಯಾಡ್‌ಗೆ ಆಗಮಿಸಿದರು. ಅವರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಜೊತೆಗಿದ್ದರು. ನಂತರ ಈಶ್ವರಮಂಗಲ ಹನುಮಗಿರಿ ಹನುಮಂತ, ಕೋದಂಡರಾಮ ದೇವರ ದರ್ಶನ ಪಡೆದರು. ಅಲ್ಲಿಂದ ಪಕ್ಕದಲ್ಲಿರುವ ಭಾರತ್ ಮಾತಮಂದಿರ ಉದ್ಘಾ ಟಿಸಿದರು.
ಭಾರತ ಮಾತ ಮಂದಿರವನ್ನು 2.5 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, ಭಾರತ ಮಾತ ವಿಗ್ರಹ 6 ಅಡಿ ಎತ್ತರವಿದ್ದು ಅಮರ ಯೋಧರ ನೆನಪಿಗಾಗಿ ನಿರ್ಮಿಸಲಾಗಿದೆ. ದೇವಾಲಯ ಭೇಟಿ ಬಳಿಕ ಶಾ ಪುತ್ತೂರಿನ ಕ್ಯಾಂಪ್ಕೊ ಸಂಸ್ಥೆ ಸುವರ್ಣ ಮಹೋತ್ಸವ ಮತ್ತು ಅಡಿಕೆ ಬೆಳಗಾರರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.