ಸುಳ್ಯ: ಜಟ್ಟಿಪಳ್ಳ ಭಾಗದಲ್ಲಿ ಕಳೆದ 6 ತಿಂಗಳಿನಿಂದ ನೀರಿನ ಸಮಸ್ಯೆ ಉಂಟಾಗಿದ್ದು, ನೀರಿನ ಸಮಸ್ಯೆ ಸರಿಪಡಿಸುವಂತೆ ಜಟ್ಟಿಪಳ್ಳ ನಿವಾಸಿಗಳು ಸುಳ್ಯ ನಗರ ಪಂಚಾಯತ್ ಎದುರು ಫೆ. 14 ರಂದು ಪ್ರತಿಭಟನೆ ನಡೆಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ನೀರು ಬರುತ್ತಿಲ್ಲ, ಕೇಳಿದಾಗ ಅಧಿಕಾರಿಗಳು ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿ ನ.ಪಂ.ಎಸುರು ಖಾಲಿ ಕೊಡ ಇರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಪ್ರಮುಖರಾದ ರಶೀದ್ ಜಟ್ಟಿಪಳ್ಳ ಕಲ್ಲುಮುಟ್ಲುವಿನಲ್ಲಿ ಪಂಪ್ ಸರಿ ಇಲ್ಲ ಎಂದು ಹಲವು ತಿಂಗಳಿನಿಂದ ಈ ಭಾಗಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಆಗಿದೆ ಎಂದು ಹಲವು ಸಮಯದಿಂದ ಹೇಳುತ್ತಿದ್ದಾರೆ ಈಗ ಮೂರು ನಾಲ್ಕು ದಿನದಿಂದ ನೀರೆ ಬರಲಿಲ್ಲ ,ಅಧಿಕಾರಿಗಳು ಸಮರ್ಪಕ ಉತ್ತರ ನೀಡುತ್ತಿಲ್ಲ. ನಗರ ಪಂಚಾಯತ್‌ಗೆ ಹಲವು ಬಾರಿ ಮನವಿ ನೀಡಿದರೂ ಸಮಸ್ಯೆ ಬಗೆ ಹರಿದಿಲ್ಲ , ಹೀಗಾದಲ್ಲಿ ಜಟ್ಟಿಪಳ್ಳದ ಸುಮಾರು 500 ಕ್ಕೂ ಮಿಕ್ಕಿ ಮನೆಯವರನ್ನು ಸೇರಿಸಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ, ಖಲಂದರ್ ಎಲಿಮಲೆ, ಮೊಯ್ದೀನ್, ರಝಾಕ್ ಜಟ್ಟಿಪಳ್ಳ, ಶಿಯಾಬ್, ಅಲ್ತಾಫ್, ಸುಲೈಮನ್, ಬದ್ರುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂಧರ್ಭ ಸ್ಥಳಕ್ಕೆ ಬಂದ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ನೀರು ಸರಭರಾಜು ಸಮಸ್ಯೆಯ ಪರಿಹರಿಸುವ ಭರವಸೆ ನೀಡಿದಲ್ಲದೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತೇವೆ ಎಂದು ಭರವಸೆ ನೀಡಿದರು ಈ ಬೆನ್ನಲ್ಲೆ ಪ್ರತಿಭಟನಾ ಕಾರರು ತಾತ್ಕಾಲಿಕವಾಗಿ ಪ್ರತಿಭಟನೆ ಕೈ ಬಿಟ್ಟರು.