ಮಂಗಳೂರು: ಪ್ರಖ್ಯಾತ ನಿರ್ಮಾಣ ಸಂಸ್ಥೆ ಸ್ಯಾಪ್ಲಿಂಗ್ ಪ್ರಾಪರ್ಟೀಸ್ ಮತ್ತು ಫೆಸಿಲಿಟೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮಂಗಳೂರಿನ ಮೊದಲ ಯೋಜನೆ ಸನ್‌ಶೈನ್ ಸ್ಯಾಪ್ಲಿಂಗ್ ಶಂಕು ಸ್ಥಾಪನೆ ಫೆ.19ರಂದು ಬಜ್ಪೆಯಲ್ಲಿ ನಡೆಯಲಿದೆ ಎಂದು ಸ್ಯಾಪ್ಲಿಂಗ್ ಮಲ್ಟಿ ವೆಂಚರ್ಸ್ ಸಂಸ್ಥೆಯ ಉದ್ಯಮ ಸಲಹೆಗಾರ ವಲೇರಿಯನ್ ಡಾಲ್ಮೈಡಾ ಹೇಳಿದರು. ಬಿಜೈ ಕಾಪಿಕಾಡಿನಲ್ಲಿರುವ ಓಶಿಯನ್ ಪರ್ಲ್ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಯೋಜನೆ ಕುರಿತು ವಿವರಿಸಿದರು.
ಸಂಸ್ಥೆಯು ಮುಂಬೈ ಸ್ಯಾಪ್ಲಿಂಗ್ ಮಲ್ಟಿ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ.
ಸಂಸ್ಥೆ ಮೊದಲ ಯೋಜನೆ ಕುರಿತು: ಸಂಸ್ಥೆ ಮೊದಲ ಯೋಜನೆ ಸನ್‌ಶೈನ್ ಸ್ಯಾಪ್ಲಿಂಗ್ 42,000 ಚದರ ಅಡಿಗಳ ವಾಣಿಜ್ಯ ಮತ್ತು ವಸತಿ ಬಳಕೆಯ ಕಟ್ಟಡವಾಗಿದ್ದು, ಬಜ್ಪೆ ಪೇಟೆಯಲ್ಲಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 5 ಕಿಲೋಮೀಟರ್ ದೂರದಲ್ಲಿದೆ. ರಸ್ತೆ ಮಾರ್ಗದ ಮೂಲಕ ಮಂಗಳೂರು ನಗರದಿಂದ ಕೇವಲ 30 ನಿಮಿಷಗಳಲ್ಲಿ ತಲುಪಬಹುದು.
ಕಟ್ಟಡದ ವಿಶೇಷತೆ: ಸಂಕೀರ್ಣವು ನೆಲಮಾಳಿಗೆ, ನೆಲ ಮತ್ತು 4 ವಸತಿ ಮೇಲಿನ ಮಹಡಿಗಳನ್ನು ಹೊಂದಿದೆ, ಎಲ್ಲಾ ಬಜೆಟ್‌ಗಳಿಗೆ ಸರಿಹೊಂದುವಂತೆ 1BHK, 2BHK ಮತ್ತು 3BHK ನ 5 ಅಪಾರ್ಟ್ಮೆಂಟ್ಗಳನ್ನು ಹೊಂದಿದೆ. ಬೇಸ್‌ಮೆಂಟ್‌ನ್ನುಅಪಾರ್ಟ್‌ಮೆಂಟ್ ನಿವಾಸಿಗಳ ವಾಹನ ಪಾರ್ಕಿಂಗ್‌ಗೆ ಮೀಸಲಿಡಲಾಗಿದೆ.
ಕಟ್ಟಡ ರಾಜ್ಯ ಹೆದ್ದಾರಿ ಪಕ್ಕದಲ್ಲಿದೆ. ನೆಲ ಮತ್ತು ಮೊದಲ ಮಹಡಿಯಲ್ಲಿ 1,185 ಚದರ ಅಡಿ ವಿಸ್ತೀರ್ಣದ 2
ವಾಣಿಜ್ಯ ಬಳಕೆಯ ಕೊಠಡಿಗಳು ನಿರ್ಮಾಣಗೊಳ್ಳಲಿವೆ. ಎರಡನೇ, ಮೂರನೇ ಮತ್ತು ನಾಲ್ಕನೇ ಮಹಡಿಗಳಲ್ಲಿ 1,585 ಚದರ ಅಡಿಗಳ 2 ವಿಶಾಲವಾದ ವಿಭಾಗಗಳಿದ್ದು, ಸೂಪರ್‌ಮಾರ್ಕೆಟ್‌ಗಳು, ಜಿಮ್‌ಗಳು, ನೃತ್ಯ, ಸಂಗೀತ ಮತ್ತು ಕಲೆಗಾಗಿ ತರಬೇತಿ ಸಂಸ್ಥೆಗಳು, ಹೈ-ಎಂಡ್ ಸ್ಪಾ ಮತ್ತು ಸಲೂನ್‌ಗಳು, ಫುಡ್ ಜಾಯಿಂಟ್‌ಗಳು, ಬೇಕರಿಗಳು, ತಿನಿಸುಗಳು ಮತ್ತು ಉಡುಪು ಮಳಿಗೆಗಳಿಗೆ ಸೂಕ್ತವಾಗಿದೆ.
ಈ ಪ್ರದೇಶ ವಾಣಿಜ್ಯ ವಹಿವಾಟು ಹೆಚ್ಚುತ್ತಿರುವ ಆಯಕ್ಕಟ್ಟಿನ ಪ್ರಮುಖ ಸ್ಥಳವಾಗಿದ್ದು, ವಾಸ ಮತ್ತು ವಾಣಿಜ್ಯ ಚಟುವಟಿಕೆ ಎರಡಕ್ಕೂ ಪ್ರಶಸ್ತವಾಗಿದೆ.
ಫೆ.19 ರಂದು ಶಿಲಾನ್ಯಾಸ: ಈ ವಿಶಿಷ್ಟ ಯೋಜನೆಗೆ ಶಿಲಾನ್ಯಾಸ ಕಾರ್ಯಕ್ರಮ ಫೆಬ್ರವರಿ 19ರಂದು ನಡೆಯಲಿದ್ದು.
2023 ರಂದು ಬೆಳಗ್ಗೆ 10.30 ಕ್ಕೆ ಬಜ್ಪೆ ಚರ್ಚ್‌ನ ವಂದನೀಯ ಧರ್ಮಗುರು ರೊನಾಲ್ಡ್ ಕುಟಿನ್ಹಾ, ಕ್ರೆಡಾಯ್ ಮಂಗಳೂರು ಅಧ್ಯಕ್ಷ ಪುಷ್ಪರಾಜ್ ಜೈನ್, ಕಂದಾವರ ಗ್ರಾಪಂ ಅಧ್ಯಕ್ಷ ಉಮೇಶ್ ಮೂಲ್ಯ, ಕಂದಾವರ ಪಿಡಿಒ ಸೌಮ್ಯ ಡಿ, ಬಜ್ಪೆ ಠಾಣಾಧಿಕಾರಿ ಪ್ರಕಾಶ್, ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರಮೀಳಾ ಕ್ರಾಸ್ತಾ, ನಿರ್ದೇಶಕ ಅಲ್ವಿನ್ ಕ್ರಾಸ್ತಾ ಸಹ ಉಪಸ್ಥಿತರಿರುವರು.
ನಿವಾಸಗಳು ಮತ್ತು ವಾಣಿಜ್ಯ ಸ್ಥಳಗಳ ಬುಕಿಂಗ್ ಗಾಗಿ ಸಂಪರ್ಕಿಸಿ – +91 74830 37734; + 91 83101 79557; + 91 81971 43675. ಇಮೇಲ್ – [email protected]
ಕಂಪನಿಯ ಸೇವೆಗಳು: ಕಂಪನಿಯು ಇಂಟಿಗ್ರೇಟೆಡ್ ಫೆಸಿಲಿಟೀಸ್ ಮ್ಯಾನೇಜ್ಮೆಂಟ್ ಸೇವೆಗಳನ್ನು ಒದಗಿಸುತ್ತದೆ. ಈ ಸೇವೆಗಳಲ್ಲಿ ಶುಚಿಗೊಳಿಸುವಿಕೆ, ಕಾರಂಜಿ ಮತ್ತು ನೀರಿನ ವ್ಯವಸ್ಥೆಗಳು, ಭೂದೃಶ್ಯ, ಎಂಇಪಿ, ಎಸ್‌ಎಸ್‌ಎಂ ಕ್ರಿಟಿಕಲ್ ಮತ್ತು ನಾನ್-ಕ್ರಿಟಿಕಲ್, ಕೀಟ ನಿಯಂತ್ರಣ ಮತ್ತು ನಾಗರಿಕ ಒಂದೇ ಸೂರಿನಡಿ ಸೇರಿವೆ. ಈ ರೀತಿಯ ಸಮಗ್ರ ಸೇವೆ ಮಂಗಳೂರಿನಲ್ಲಿ ಇದೇ ಮೊದಲನೇ ಬಾರಿಗೆ ದೊರೆಯುತ್ತಿದೆ.
ವಿವಿಧ ಕ್ಷೇತ್ರದವರಿಗೆ ಅನುಕೂಲ: ವೈಯಕ್ತಿಕ ಅಪಾರ್ಟ್ಮೆಂಟ್ ಮಾಲೀಕರು, ಅಪಾರ್ಟ್‌ಮೆಂಟ್ ಕಟ್ಟಡಗಳು, ಬಿಲ್ಡರ್‌ಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಹೋಟೆಲ್‌ಗಳು ಮತ್ತು ಸಾರ್ವಜನಿಕ ಮತ್ತು ಖಾಸಗಿ ಕಚೇರಿಗಳಿಗೆ ವರದಾನವಾಗಿದೆ.
ಕಚೇರಿ ಉದ್ಘಾಟನೆ: ಮಂಗಳೂರು ಸ್ಯಾಪ್ಲಿಂಗ್ ಪ್ರಾಪರ್ಟೀಸ್ ಮತ್ತು ಫೆಸಿಲಿಟೀಸ್ ಪ್ರೈವೇಟ್ ಲಿಮಿಟೆಡ್ ಕಚೇರಿ ಬಿಜೈ-ಕಾಪಿಕಾಡ್ ರಸ್ತೆ ಲೋಟಸ್ ಆದಿತ್ಯ ಸಂಕೀರ್ಣದ 2ನೇ ಮಹಡಿಯಲ್ಲಿದ್ದು ಅದೇ ದಿನ ಸಂಜೆ ಫೆ.19ರಂದು ಸಂಜೆ 4.30ಕ್ಕೆ ಉದ್ಘಾಟನೆಗೊಳ್ಳಲಿದೆ.
ಬಿಜೈ ಚರ್ಚ್ ಧರ್ಮಗುರು ಜೆ.ಬಿ.ಸಲ್ಡಾನ್ಹಾ, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ಅರುಣ್ ಪ್ರಭಾ, ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ (ಬಿಸಿಐಸಿ) ಅಧ್ಯಕ್ಷ ಡಾ. ಎಲ್. ರವೀಂದ್ರನ್ ಮತ್ತು ಲೋಟಸ್ ಪ್ರಾಪರ್ಟೀಸ್ ಪಾಲುದಾರ ಜಿತೇಂದ್ರ ಕೊಟ್ಟಾರಿ ಪಾಲ್ಗೊಳ್ಳುವರು.
ಸ್ಯಾಪ್ಲಿಂಗ್ ಮಲ್ಟಿ ವೆಂಚರ್ಸ್ ಕುರಿತು: ಸಂಸ್ಥೆಯ ಪೋಷಕ ಕಂಪನಿ, ಸ್ಯಾಪ್ಲಿಂಗ್ ಮಲ್ಟಿ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್, (www.saplingmvpl.com) ಅನ್ನು 2022 ರಲ್ಲಿ ಮುಂಬೈನಲ್ಲಿ ಇಬ್ಬರು ಎನ್‌ಆರ್‌ಐಗಳಾದ ಪ್ರಮೀಳಾ ಕ್ರಾಸ್ತಾ ಮತ್ತು ಅಲ್ವಿನ್ ಕ್ರಾಸ್ತಾ ಸ್ಥಾಪಿಸಿದ್ದರು. ಇದು ಹೋಲ್ಡಿಂಗ್ ಕಂಪನಿಯಾಗಿದೆ.
ಸಂಸ್ಥೆಯ ಸ್ಥಾಪಕರು ಮಂಗಳೂರಿನ ಅಭಿವೃದ್ಧಿಯ ಬಗ್ಗೆ ಉತ್ಸುಕರಾಗಿದ್ದಾರೆ ಮತ್ತು ಪರಿಸರ ಸಹ್ಯ ಅಭಿವೃದ್ಧಿಗೆ ಕೊಡುಗೆ ನೀಡಲು ಬಯಸುತ್ತಾರೆ. ಈ ಕಾರಣದಿಂದಲೇ ಸ್ಯಾಪ್ಲಿಂಗ್ ಪ್ರಾಪರ್ಟೀಸ್ ಮತ್ತು ಫೆಸಿಲಿಟೀಸ್ ಪ್ರೈ. ಲಿಮಿಟೆಡ್ ಸ್ಯಾಪ್ಲಿಂಗ್ ನ ಘೋಷವಾಕ್ಯದಲ್ಲಿ ಬ್ಯುಸಿನೆಸ್ ಫಾರ್ ಪರ್ಪಸ್ ಎಂದು ಬರೆಯಲಾಗಿದೆ. ಅಲ್ಲದೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಮತ್ತು ಅದರ ಸುತ್ತಲಿನ ಸಮುದಾಯಗಳ ಸಮೃದ್ಧಿಗೆ ಕೊಡುಗೆ ನೀಡುವ ಉದ್ದೇಶ ಹೊಂದಿದೆ ಎಂದು ಸ್ಥಾಪಕರು ವಿವರಿಸಿದ್ದಾರೆ.
200 ಕೋಟಿ ರೂ. ವ್ಯವಹಾರ ಗುರಿ: ಭೂವ್ಯವಹಾರ, ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳ ಸಮಗ್ರ ನಿರ್ವಹಣೆ ಸೇವೆ, ಬಂಡವಾಳ ಹೂಡಿಕೆ ಈ ನಾಲ್ಕೂ ವಿಭಾಗಗಳ ಮೂಲಕ ಮುಂದಿನ 5 ವರ್ಷಗಳಲ್ಲಿ 200 ಕೋಟಿ ರೂ. ವ್ಯವಹಾರ ನೆಡೆಸುವ ಗುರಿಹೊಂದಿದೆ ಎಂದು ವಿವರಿಸಿದರು.
ಕ್ವಿಕ್ ಅಡ್ವೈಸರಿ ಮತ್ತು ಡಿಜಿಟಲ್, ಮಂಗಳೂರು (www.qdigital.co.in) ಸಂಸ್ಥೆಯ ವ್ಯವಹಾರ ಸಲಹೆಗಾರರಾಗಿದ್ದಾರೆ.
ಸ್ಯಾಪ್ಲಿಂಗ್ ಮಲ್ಟಿ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯಾಪಾರ ಸಲಹೆಗಾರ ವಲೇರಿಯನ್ ಡಾಲ್ಮೈಡಾ, ಪ್ರಾಜೆಕ್ಟ್ ಮ್ಯಾನೇಜರ್ ಧೀರಜ್ ಮಿತ್ರ ಎಂ, ಮತ್ತು ಫೆಸಿಲಿಟಿ ಮ್ಯಾನೇಜರ್ ಗುರುರಾಜ್ ಎಸ್ ರಾವ್ ಸುದ್ದಿಗೋಷ್ಠಿಯಲ್ಲಿದ್ದರು.