ಮಂಗಳೂರು: ಮಂಗಳೂರಿನ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಫಿಸಿಯೋಥೆರಸಿ ವಿಭಾಗದ ವತಿಯಿಂದ ’ನ್ಯೂರೋ ಡೆವಲಪ್ಮೆಂಟಲ್ ಚಿಕಿತ್ಸೆಯ ಮೂಲಭೂತ ಅಂಶಗಳು ಕುರಿತು 2 ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಫಿಸಿಯೋಥೆರಸಿ ವಿಭಾಗದ ವತಿಯಿಂದ ಕಾರ್ಯಾಗಾರವನ್ನು ನಡೆಸಲಾಗಿತ್ತು. ಕಾರ್ಯಕ್ರಮವನ್ನು ಎಸ್‌ಡಿಎಂ ಕಾಲೇಜಿನ ಆಫ್ ಫಿಸಿಯೋಥೆರಸಿ ವಿಭಾಗದ ಉಪ ಪ್ರಾಂಶುಪಾಲರು ಮತ್ತು ಪ್ರೋ. ಡಾ| ಸಂಜಯ್ ಪರ್ಮಾರ್ ಪಿಡಿಎಫ್ ಅವರು ಉದ್ಘಾಟಿಸಿದ್ರು. ತದ ಬಳಿಕ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದು ನಮ್ಮಗೆ ಹೆಮ್ಮೆ ವಿಚಾರವಾಗಿದೆ ಎಂದು ಅವರು ಹೇಳಿದರು.
ಸಂಸ್ಥೆ ನಿರ್ದೇಶಕರಾದ ರೇ.ಫಾದರ್ ರಿಚಾರ್ಡ್ ಅಲೋಶಿಯಸ್ ಕೊಯೊಲೋ ಅವರು ಅಧ್ಯಕ್ಷತೆಯನ್ನು ವಹಿಸಿ, ಮಾತನಾಡಿದರು. ೨ ದಿನಗಳ ಕಾಲ ಕಾರ್ಯಾಗಾರದ ಮೂಲಕ ಹಲವಾರು ವಿಚಾರಗಳು, ತಿಳಿದುಕೊಳ್ಳಲು ಸಾಧ್ಯ., ಇದು ಉತ್ತಮ ಕಾರ್ಯಕ್ರಮವಾಗಿ ಮೂಡಿ ಬಂದಿದೆ ಎಂದು ಅವರು ಹೇಳಿದರು.
ಈ ವೇಳೆ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ರೇ.ಫಾದರ್ ಅಜಿತ್ ಬಿ.ಮೆನೇನಸ್, ಕಾರ್ಯಕ್ರಮದ ಸಂಯೋಜಕಿ ಪ್ರೋ. ಚರಿಸ್ಮಾ ಡಿಸೋಜಾ ಉಪಸ್ಥಿತರಿದ್ದರು.