News Kannada
Saturday, April 01 2023

ಮಂಗಳೂರು

 ಬಜ್ಪೆ: ಸನ್‌ಶೈನ್‌ ಸ್ಯಾಪ್ಲಿಂಗ್‌ ವಸತಿ ಮತ್ತು ವಾಣಿಜ್ಯ ಸಮುಚ್ಚಯ ಭೂಮಿಪೂಜೆ 

ಸ್ಯಾಪ್ಲಿಂಗ್‌ ಪ್ರಾಪರ್ಟಿಸ್‌ ಮತ್ತು ಫೆಸಿಲಿಟೀಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ
Photo Credit : News Kannada

ಮಂಗಳೂರು:  ಪ್ರಖ್ಯಾತ ನಿರ್ಮಾಣ ಸಂಸ್ಥೆ ಸ್ಯಾಪ್ಲಿಂಗ್‌ ಪ್ರಾಪರ್ಟಿಸ್‌ ಮತ್ತು ಫೆಸಿಲಿಟೀಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಮಂಗಳೂರಿನ ಮೊದಲ ಯೋಜನೆ ಸನ್‌ಶೈನ್‌ ಸ್ಯಾಪ್ಲಿಂಗ್‌ ವಸತಿ ಮತ್ತು ವಾಣಿಜ್ಯ ಸಮುಚ್ಚಯ ಯೋಜನೆಗೆ ಶಂಕುಸ್ಥಾಪನೆ ಫೆ.೧೯ರಂದು ಬಜ್ಪೆಯಲ್ಲಿ ನಡೆಯಿತು.

ಮುಖ್ಯ ಅತಿಥಿ ಕ್ರೆಡೈ ಮಂಗಳೂರು ಅಧ್ಯಕ್ಷ ಪುಷ್ಪರಾಜ್‌ ಜೈನ್‌, ಶುಭಘಳಿಗೆಯಲ್ಲಿ ಸನ್‌ಶೈನ್‌ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನಡೆದಿದೆ. ಕಟ್ಟಡ ನಿರ್ಮಾಣಗೊಂಡು ಸಮಾಜಕ್ಕೆ ಒಂದು ಕೊಡುಗೆಯಾಗಲಿ. ಉತ್ತಮ ಮನೆ ನಿರ್ಮಾಣದ ಆಶಯ ಹೊತ್ತ ಎಲ್ಲರಿಗೂ ಇದು ಒಂದು ಕೊಡುಗೆಯಾಗಲಿ. ಈ ನಿಟ್ಟಿನಲ್ಲಿಆಡಳಿತ ನಿರ್ದೇಶಕರು, ಮತ್ತು ಸದಸ್ಯರ ಶ್ರಮಕ್ಕೆ ಕೃತಜ್ಞತೆ ಸಲ್ಲಿಸಬೇಕಿದೆ. ಉತ್ತಮ ಪ್ರದೇಶವನ್ನುಕಟ್ಟಡ ನಿರ್ಮಾಣಕ್ಕೆ ಆಯ್ಕೆ ಮಾಡಿದ್ದಾರೆ. ಕಂಪನಿಯ ಧ್ಯೇಯ ವಾಕ್ಯ ಬ್ಯುಸಿನೆಸ್‌ ಫಾರ್‌ ಪರ್ಪಸ್‌ ಚಿಂತನೆಯಂತೆ ಸತ್‌ ಚಿಂತನೆಯೊಂದಿಗೆ ವ್ಯವಹಾರ ನಡೆಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ. ಮಂಗಳೂರಿನಿಂದ ಈ ಪ್ರದೇಶಕ್ಕೆ ಸಾಗುತ್ತಿರುವಾಗ ಈ ಪ್ರದೇಶವನ್ನು ಕಾಣುವಾಗ ಮನಸ್ಸು ಮುದಗೊಳ್ಳುತ್ತದೆ. ಒಂದು ಭಾಗದಲ್ಲಿ 6 ಲೇನ್‌ನ ಹೆದ್ದಾರಿ ಇನ್ನೊಂದು ಭಾಗದಲ್ಲಿ ಏರ್‌ಪೋರ್ಟ್‌ ರಸ್ತೆ ಹೊಂದಿರುವ ಪ್ರದೇಶದಲ್ಲಿ ಜಾಗ ಖರೀದಿಸಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮಂಗಳೂರಿನ ಪ್ರಸಿದ್ಧ ಆರ್ಕಿಟೆಕ್ಟ್‌ ಸಾಲ್ಡಾನಾ ಅವರ ಕಟ್ಟಡ ವಿನ್ಯಾಸ ಅಂತಾರಾಷ್ಟ್ರೀಯ ಮಟ್ಟದಲ್ಲಿದ್ದು, ನನಗೂ ಮನೆ ಖರೀದೀಸುವ ಇಚ್ಛೆಯಾಗುತ್ತಿದೆ. ಅತ್ಯುತ್ತಮ ವಾಸ್ತುಶಿಲ್ಪಕ್ಕೆ ಕೈಗನ್ನಡಿಯಾಗಿದೆ. ವಸತಿ ಭಾಗಗಳನ್ನು ಹಿಂದೆ, ವಾಣಿಜ್ಯ ಸಂಕೀರ್ಣಗಳನ್ನು ಮುಂಭಾಗದಲ್ಲಿ ಇರಿಸಿರುವುದು ಕಟ್ಟಡ ವಿನ್ಯಾಸದ ಅನುಭವಕ್ಕೆ ಸಾಕ್ಷಿ ಒದಗಿಸುವಂತಿದೆ. ಈ ಕಟ್ಟಡ ಮೂಲಕ ನಿಮ್ಮ ಕಂಪನಿ ಉನ್ನತ ಎತ್ತರಕ್ಕೆ ಏರಲಿ ಎಂದರು. ಧರ್ಮಗುರುಗಳನ್ನು ಕರೆಸಿ ಶಿಲಾನ್ಯಾಸ ಮಾಡಿಸಿರುವುದು ಶ್ರೇಷ್ಠ ಕಾರ್ಯ. ಯಾವುದೇ ಕಾರ್ಯ ಮಾಡಿದಲ್ಲಿ ಮನಸ್ಸು, ಹೃದಯ ಒಂದಾಗಬೇಕು. ಧರ್ಮಗುರುಗಳ ಆಶೀರ್ವಚನದಿಂದ ಜನರ ಹೃದಯವನ್ನುತಲುಪುವ ಕಾರ್ಯವಾಗಿದೆ. ನಿಮ್ಮ ತಂಡದ ಸದಸ್ಯರಾದ ಸಿಎ ವಲೇರಿಯನ್‌ ಅವರ ಮಾರ್ಗದರ್ಶನದಲ್ಲಿ ಸಂಸ್ಥೆ, ಉದ್ಯಮ ಸೋಲುವ ಮಾತೇ ಇಲ್ಲ. ಕಾರ್ಯಕ್ರಮದಲ್ಲಿ ಬೆಳಗಿದ ದೀಪ ಜೋರಾದ ಗಾಳಿ ಬಂದರೂ ಬೆಳಗುತ್ತಿರುವುದು ಶುಭ ಸೂಚಕವಾಗಿದೆ. ದೇಶ ವಿದೇಶಗಳಲ್ಲಿ ಕಂಪನಿ ಹೆಸರು ಬೆಳಗಲಿದೆ ಎಂಬ ಸೂಚನೆ ಸಿಕ್ಕಿದೆ. ದೇಶ, ರಾಜ್ಯದ ಬಜೆಟ್‌ ಅಭಿವೃದ್ಧಿ, ಮೂಲಸೌಕರ್ಯಕ್ಕೆ ಪೂರಕವಾಗಿದೆ. ಜಿಎಸ್‌ಟಿ ಸಂಗ್ರಹದಿಂದ ಮೂಲಸೌಕರ್ಯ ಕ್ಷೇತ್ರಕ್ಕೆ ಕೊಡುಗೆಯಾಗಿದೆ. ದೇಶದ ರಸ್ತೆಗಳು ಅತಿದೊಡ್ಡ ರಸ್ತೆಯಾಗಿ ಮಾರ್ಪಟ್ಟಿದೆ. ಮಂಗಳೂರು- ಮೂಡುಬಿದಿರೆ, ಏರ್‌ಪೋರ್ಟ್‌ ರಸ್ತೆ ಅಭಿವೃದ್ಧಿಯಾಗುತ್ತಿದೆ. ನಗರ ಕೇಂದ್ರೀಕೃತ ಅಭಿವೃದ್ಧಿಗಿಂತ ಹೊರವರ್ತುಲ ಪ್ರದೇಶಗಳು ಅಭಿವೃದ್ಧಿಯಾಗಬೇಕಿದೆ. ಈ ನಿಟ್ಟಿನಲ್ಲಿ ಸನ್‌ಶೈನ್‌ ಸ್ಯಾಪ್ಲಿಂಗ್‌ ಕೊಡುಗೆಯಾಗಿದೆ. ಬಜ್ಪೆ, ತೊಕ್ಕೊಟ್ಟು, ವಾಮಂಜೂರು ಕೂಡ ಅಭಿವೃದ್ಧಿಯ ಹಾದಿಯಲ್ಲಿದೆ. ನಗರದಿಂದ ಹೊರಬಂದು ಹೊರವಲಯದಲ್ಲಿ ಕಟ್ಟಡ ನಿರ್ಮಿಸುತ್ತಿರುವುದು ಇತರ ನಿರ್ಮಾಣ ಸಂಸ್ಥೆಗಳಿಗೂ ಕಟ್ಟಡ ರಚನೆಗೆ ಪ್ರೇರಕ ಶಕ್ತಿಯಾಗಲಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಧರ್ಮಗುರು ರೊನಾಲ್ಡ್‌ ಕುಟಿನ್ಹೋ ಆಶೀರ್ವಚನ ನೀಡಿ, ಬೈಬಲ್‌ನ ಆಶಯದಂತೆ ಸರ್ವಶಕ್ತನಾದ ದೇವರು ಆಶೀರ್ವಾದವಿದ್ದಾಗ ಮಾತ್ರ ಉತ್ತಮ ಕಟ್ಟಡ ನಿರ್ಮಾಣ ಸಾಧ್ಯ. ಪ್ರತಿಯೊಬ್ಬರಿಗೂ ಈ ಕಟ್ಟಡ ನಿರ್ಮಾಣದ ಬಗ್ಗೆ ಕುತೂಹಲ ಇದೆ. ಸನ್‌ಶೈನ್‌ ಸ್ಯಾಪ್ಲಿಂಗ್‌ ಹೆಸರೇ ಹೇಳುವಂತೆ ಸ್ಯಾಪ್ಲಿಂಗ್‌ ಸೂರ್ಯರಶ್ಮಿ ಇಲ್ಲಿದೆ. ಅದೇ ರೀತಿ ನಾವು ನಾವು ಬಿತ್ತಿದ ಕಟ್ಟಡವೆಂಬ ಬೀಜ ಹೆಮ್ಮರವಾಗಿ ಅರ್ಥಾತ್‌ ಮಹಾನ್‌ ಸಂಸ್ಥೆಯಾಗಿ ಬೆಳೆಯಲಿದೆ ಎಂಬ ಆಶಯ ನಮ್ಮದು. ಕಟ್ಟಡದ ಮೂಲಕ ಈ ಪ್ರದೇಶಕ್ಕೆ ಮೌಲ್ಯ ದೊರೆಯುತ್ತದೆ ಎಂದರು.

See also  ಇಸ್ಲಾಮಾಬಾದ್: ಐಷಾರಾಮಿ ಉತ್ಪನ್ನಗಳ ಆಮದಿನ ಮೇಲಿನ ನಿಷೇಧವನ್ನು ತೆಗೆದುಹಾಕಿದ ಪಾಕ್

ಉತ್ತಮ ಕಟ್ಟಡ ನಿರ್ಮಾಣ ಮಾಡುವ ಉದ್ದೇಶ ಹೊಂದಿರುವವರು ಗುಣಮಟ್ಟದ ವಸ್ತುಗಳನ್ನು ಬಳಸಿ ನಿರ್ಮಿಸುತ್ತಾರೆ. ಅಂತಹ ಕಟ್ಟಡಗಳ ಜೀವತಾವಧಿಯು ಉತ್ತಮವಾಗಿರುತ್ತದೆ. ಆದರೆ ಕನಿಷ್ಠ ಗುಣಮಟ್ಟದ ವಸ್ತುಗಳನ್ನು ಬಳಸಿ ಮಾಡಿದ ಕಟ್ಟಡಗಳು ಬಾಳಿಕೆ ಅವಧಿ ಸೀಮಿತವಾಗಿದ್ದು, ಕಳಪೆ ಕಾಮಗಾರಿಯಿಂದ ಎಲ್ಲರೂ ಅಪಾಯವನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ಪ್ರದೇಶದಲ್ಲಿ ಸನ್‌ಶೈನ್‌ ಸ್ಯಾಪ್ಲಿಂಗ್‌ ಸಂಸ್ಥೆ ಗುಣಮಟ್ಟದ, ಶ್ರೇಷ್ಠ ವಿನ್ಯಾಸದ ಸರ್ವಶ್ರೇಷ್ಠ ಕಟ್ಟಡವೊಂದರ ನಿರ್ಮಾಣಕ್ಕೆ ಮುಂದಡಿಯಿಟ್ಟಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಕಟ್ಟಡ ನಿರ್ಮಾಣ ಸಂಸ್ಥೆಯ ಆಶಯಗಳನ್ನು ಶ್ಲಾಘಿಸಿದರು.

ಸಮಾಜಕ್ಕೆ ಕೊಡುಗೆ ನೀಡುವ ಆಶಯ ಕ್ರಾಸ್ತಾ:  ಸನ್‌ಶೈನ್‌ ಸ್ಯಾಪ್ಲಿಂಗ್‌ ಸಂಸ್ಥೆ ನಿರ್ದೇಶಕ ಅಲ್ವಿನ್‌ ಕ್ರಾಸ್ತಾ ಮಾತನಾಡಿ, ನಾನು ಹುಟ್ಟಿಬೆಳೆದಿದ್ದು ಬಜ್ಪೆಯಲ್ಲಿ, ನನ್ನ ವಿದ್ಯಾಭ್ಯಾಸವೂ ಇಲ್ಲಿಯೇ ನಡೆದಿದೆ. 16ನೇ ವರ್ಷಕ್ಕೆ ನಾನು ಮುಂಬೈಗೆ ತೆರಳಿದೆ. 8 ವರ್ಷಗಳ ಬಳಿಕ ಮುಂಬೈನಿಂದ ಗಲ್ಫ್‌ ದೇಶಕ್ಕೆ ಉತ್ತಮ ಅವಕಾಶಕ್ಕಾಗಿ ತೆರಳಿದೆ. ಕಳೆದ 25 ವರ್ಷಗಳಿಂದ ಅಲ್ಲಿಯೇ ನೆಲೆಸಿದ್ದೇನೆ. ಆದರೆ ನಾನು ಬಹುಕಾಲದಿಂದ ಮಂಗಳೂರಿನ ಅಭಿವೃದ್ಧಿಗೆ ನಾನೇನು ಕೊಡುಗೆ ನೀಡಬಹುದೆಂದು ಚಿಂತನೆಯಲ್ಲಿದ್ದೆ. ಹಣಕಾಸು ವಲಯದ ಪ್ರಪಂಚದ ಶ್ರೇಷ್ಠ ಕಂಪನಿಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ಈ ನಿಟ್ಟಿನಲ್ಲಿ ಸಮಾಜದಿಂದ ಪಡೆದ ಕೆಲ ಅಂಶವನ್ನು ಸಮಾಜಕ್ಕೆ ಮರು ಅರ್ಪಿಸಬೇಕೆಂಬ ನಿಟ್ಟಿನಲ್ಲಿ ಪತ್ನಿಯೊಂದಿಗೆ ಸಮಾಲೋಚಿಸಿದಾಗ ಅಕೆ ಸಂತೋಷದಿಂದ ಒಪ್ಪಿ ಈ ನಿರ್ಮಾಣ ಕಂಪನಿಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಸ್ಯಾಪ್ಲಿಂಗ್‌ ಸಂಸ್ಥೆ ಸಾಮಾಜಿಕ ಬದ್ಧತೆ ಇರುವ ಸಂಸ್ಥೆ. ಮಂಗಳೂರಿನಲ್ಲಿ ಯುವಕರಿಗೆ ಅವಕಾಶಗಳು ಕಡಿಮೆ ಇದೆ. ಪದವಿ ಪಡೆದ ಬಳಿಕ ಉದ್ಯೋಗ ಅರಸಿ ಬೆಂಗಳೂರು, ಮುಂಬೈ, ಅಥವಾ ವಿದೇಶಕ್ಕೆ ಹೋಗಬೇಕಾದ ಸ್ಥಿತಿಯಿದೆ. ಈ ರೀತಿ ಪ್ರತಿಭೆಗಳು ದೂರದೂರಿಗೆ ಹೋದಲ್ಲಿ ಮಂಗಳೂರಿನ ಅಭಿವೃದ್ಧಿಗೆ ತೊಂದರೆಯಾಗುತ್ತದೆ. ಮಂಗಳೂರು, ರಸ್ತೆ, ಜಲ, ವಾಯು, ರೈಲು ಮಾರ್ಗ ಹೊಂದಿದ ವ್ಯಾಪಾರ, ವ್ಯವಹಾರ ಪೂರಕ ನಗರ. ಆದರೆ ಇಲ್ಲಿ ಬಂಡವಾಳ ಹೂಡಿಕೆ ಕೊರತೆಯಿದೆ. ಈ ನಿಟ್ಟಿನಲ್ಲಿ ಸ್ಯಾಪ್ಲಿಂಗ್‌ ಮಲ್ಟಿ ವೆಂಚರ್ಸ್‌ ಸಂಸ್ಥೆ ಉದ್ಯೋಗ ಸೃಷ್ಟಿ ಕಾರ್ಯವನ್ನು ಮಾಡಲಿದೆ. ಹೂಡಿಕೆ ಪೂರಕ ವಾತಾವರಣ ಸೃಷ್ಟಿಸಲಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಶ್ರಮವಹಿಸಲಿದೆ ಎಂದರು. ನಗರದಿಂದ 30 ನಿಮಿಷಗಳ ಪ್ರಯಾಣ ಅಂತರದಲ್ಲಿರುವ ಪ್ರಶಾಂತ ವಾತಾವರಣವಿರುವ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣದ ಚಿಂತನೆಯಲ್ಲಿದ್ದೇವೆ ಎಂದರು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ. ಇಂತಹ ಅಭಿವೃದ್ಧಿ ಚಟುವಟಿಕೆ ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರಲಿದೆ. ಅಲ್ಲದೆ ಹೊಸ ಉದ್ಯಮಿಗಳ ಸೃಷ್ಟಿಗೆ ಅವಕಾಶವಾಗಲಿದೆ ಎಂದರು.

ನಿರ್ಮಾಣ ಸಂಸ್ಥೆಯ ಉದ್ಯಮ ಸಲಹೆಗಾರ ಸಿ.ಎ ವಲೇರಿಯನ್‌ ಡಾಲ್ಮೆಡಾ ಮಾತನಾಡಿ ನಾವು ವರ್ಟಿಕಲ್‌ ಅಭಿವೃದ್ಧಿ ಗಿಂತ ಹಾರಿಜಾಂಟಲ್‌ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಮೊದಲ ನಿರ್ಮಾಣ ಯೋಜನೆ ವಿಶಿಷ್ಟ ಪರಿಕಲ್ಪನೆ ಹೊಂದಿದೆ. ನಮ್ಮ ಸಂಸ್ಥೆ ನಿರ್ದೇಶಕ ಆಲ್ವಿನ್‌ ಕ್ರಾಸ್ತಾ ಆಡಿ ಬೆಳೆದ ಸ್ಥಳವನ್ನೇ ಆಯ್ಕೆ ಮಾಡಿಕೊಂಡಿದ್ದೇವೆ. ಆಲ್ವಿನ್‌ ಅವರಿಗೆ ಮೊದಲಿನಿಂದಲೂ ಹುಟ್ಟೂರಿನಲ್ಲಿ ಕಟ್ಟಡ ನಿರ್ಮಿಸುವ ಕನಸಿತ್ತು. ಈ ಮೂಲಕ ತನಗೆ ಜನ್ಮನೀಡಿದ ಸ್ಥಳಕ್ಕೆ ಕೊಡುಗೆ ನೀಡುವ ಹಂಬಲವಿತ್ತು. 90 ರ ದಶಕದಲ್ಲಿ ವಿದ್ಯಾಭ್ಯಾಸ ಬಳಿಕ ಉತ್ತಮ ಉದ್ಯೋಗಕ್ಕಾಗಿ ಯುಎಇಗೆ ನಾವಿಬ್ಬರೂ ತೆರಳಿದ್ದವು. ಆದರೆ ಹುಟ್ಟೂರನ್ನು ಮರೆಯಲಿಲ್ಲ. ಮಂಗಳೂರು ಆಸುಪಾಸಿನ ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಕೈಗೆಟುಕುವ ದರದಲ್ಲಿ ವಸತಿ ಸಮುಚ್ಚಯ ನಿರ್ಮಿಸಬೇಕೆಂಬ ಕನಸಿತ್ತು. ಗುಣಮಟ್ಟವೂ ಶ್ರೇಷ್ಠವಾಗಿರಬೇಕೆಂಬ ಕಲ್ಪನೆಯಿತ್ತು. ಆಲ್ವಿನ್‌ ಅವರು ಯಾರೊಂದಿಗೂ ನಿರ್ಮಾಣ ಕ್ಷೇತ್ರದಲ್ಲಿ ಜಂಟಿ ಹೂಡಿಕೆ ಮಾಡುವುದಿಲ್ಲ. ಅವರೊಬ್ಬರೇ ನಿರ್ಮಿಸುತ್ತಾರೆ. ಈ ಕಾರ್ಯಕ್ಕೆ ಎಂದಿಗೂ ಸಾಲ ಪಡೆಯುವುದಿಲ್ಲ. ಸಾಲ ಪಡೆದರೆ ಬಡ್ಡಿ ದರವೂ ಹೆಚ್ಚುತ್ತದೆ ಎಂಬ ನಿಯಮ ಅವರದ್ದು. ಇಂತಹ ಕಟ್ಟುಪಾಡು ನಿರ್ಮಾಣ ಕ್ಷೇತ್ರದ ಯಶಸ್ಸಿಗೆ ಅಗತ್ಯವೂ ಹೌದು ಎಂದರು. ಬಜ್ಪೆ, ಕುಳಾಯಿ, ಸುರತ್ಕಲ್‌ ಇಂತಹ ಪ್ರದೇಶಗಳು ಅಭಿವೃದ್ಧಿಯಾಗಬೇಕು. ಆಗ ಮಂಗಳೂರು ನಗರದ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದರು. ನಾನು 43 ವರ್ಷಗಳಲ್ಲಿ ಇಂಟರ್‌ ನ್ಯಾಷನಲ್‌ ಬ್ಯುಸೆನೆಸ್‌, ಡಿಜಿಟಲ್‌ ಮಧ್ಯಮ, ಲೆಕ್ಕಪತ್ರ, ಹಣಕಾಸು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಪಡೆದ ಜ್ಞಾನವನ್ನು ಸಮಾಜ, ಸಂಸ್ಥೆಯ ಅಭಿವೃದ್ಧಿಗೆ ಧಾರೆಯೆರಲು ಸಿದ್ಧ ಎಂದರು.

See also  ರಾಜ್ಯಮಟ್ಟದ ಕೃಷಿ ಮೇಳಕ್ಕೆ ಕೊಲ್ನಾಡು ಸಜ್ಜು!

ಸಂಸ್ಥೆ ಸ್ಥಾಪನೆಯಲ್ಲಿ ಹಲವಾರು ಶ್ರಮವಹಿಸಿದ್ದಾರೆ. ಹೆಸರಾಂತ ಅರ್ಕಿಟೆಕ್ಟ್‌ ಸಲ್ಡಾನ್ಹ ಅಸೋಸಿಯೇಟ್ಸ್‌ನ ಪ್ರವೀಣ್‌ ಮತ್ತು ಮಂಜರಿ ನಮ್ಮ ಜೊತೆಗಿದ್ದಾರೆ. ಸ್ಟ್ರಕ್ಚರಲ್‌ನಲ್ಲಿ ಅನಿಲ್‌, ಎಂಇಟಿಗೆ ಮಹೇಶ್‌, ಕಾನೂನು ವಿಭಾಗದಲ್ಲಿ ವಿವೇಕಾನಂದ ಫಣಿಯಾಲ ನೆರವು ಒದಗಿಸುತ್ತಿದ್ದಾರೆ. ಅಭಿಲಾಷ್‌ ಸಿವಿಲ್‌ ಇಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಟರ್‌ ಜೋಸೆಫ್‌ ಅವರು ಸಿವಿಲ್‌ ಇಂಜಿನಿಯರಿಂಗ್‌ ಸೇರಿದಂತೆ ಕಟ್ಟಡ ವಿನ್ಯಾಸ, ನಿರ್ಮಾಣದಲ್ಲಿ ಬಹು ಹಂತದ ಅನುಭವ ಹೊಂದಿದ್ದು ಕಾಲ ಕಾಲಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅಲ್ಲದೇ ನಮ್ಮ ಕ್ವಿಕ್‌ ಅಡ್ವೆಸರಿ ಸಂಸ್ಥೆಯನ್ನು ಉದ್ಯಮ ಸಲಹಾ ಸಂಸ್ಥೆಯಾಗಿ ನೇಮಿಸಿಕೊಂಡಿದ್ದಾರೆ. ಕ್ವಿಕ್‌ ಅಡ್ವೆಸರಿ ಸಂಸ್ಥೆಯಲ್ಲಿ ಹಣಕಾಸು, ಲೆಕ್ಕಪತ್ರ, ತೆರಿಗೆ, ಕಂಪನಿ ಕಾನೂನು ಸೇವೆ ಒದಗಿಸುತ್ತಿದ್ದು, ಸಂಸ್ಥೆಯನ್ನು ದೇಶದಲ್ಲಿ ಐಸಿಸಿಯಲ್ಲಿ ಪ್ರಥಮ ರ್ಯಾಂಕ್‌ ಪಡೆದ ಸಿಎ ನಮ್ರತಾ ಮುನ್ನಡೆಸುತ್ತಿದ್ದಾರೆ ಎಂದರು. ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡ ಕೆನ್ಯೂಟ್‌ ಜೀವನ್‌ ಪಿಂಟೊ ಕ್ವಿಕ್‌ ಅಡ್ವೆಸರಿ ಸಂಸ್ಥೆಜನರಲ್‌ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸ್ಥೆ ಮಾರ್ಕೆಟಿಂಗ್‌ ಹೆಡ್‌ ಆಗಿ ಆಲ್ಡ್ರಿನ್‌  ವಾಝ್‌ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸ್ಥೆಯ ಡಿಜಿಟಲ್‌ ಮಾಧ್ಯಮವನ್ನು ಪ್ರಿಯಾ ಯಾದವ್‌ ಮುನ್ನಡೆಸುತ್ತಿದ್ದಾರೆ. ಅಶ್ವಿನಿ ರಾವ್‌ ಸೇರಿದಂತೆ ಹಲವರು ಸೇವೆ ಸಲ್ಲಿಸುತ್ತಿದ್ದಾರೆ. ತಾಂತ್ರಿಕ ತಂಡದಲ್ಲಿ ಬ್ರಿಜೇಶ್‌ ಗೋಖಲೆ, ಮಾನವ ಸಂಪನ್ಮೂಲ ವಿಭಾಗದಲ್ಲಿ ನವ್ಯಾ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿವರಸಿದರು.

ಕಂದಾವರ ಗ್ರಾಮ ಪಂಚಾಯತ್‌ ಅಧ್ಯಕ್ಷ ಉಮೇಶ್‌ ಮೂಲ್ಯ, ಅಧ್ಯಕ್ಷ ಸನ್‌ಶೈನ್‌ ಸ್ಯಾಪ್ಲಿಂಗ್‌ ನಿರ್ಮಾಣ ಸಂಸ್ಥೆ ಈ ಪ್ರದೇಶದಲ್ಲಿ ನಿರ್ಮಾಣ ಕಾರ್ಯ ಆರಂಭಿಸಿರುವುದು ಗ್ರಾಮ ಅಭಿವೃದ್ಧಿಯ ಧ್ಯೋತಕವಾಗಿದೆ ಎಂದರು. ಸಂಸ್ಥೆಗೆ ಅಗತ್ಯ ಸಹಕಾರ ಒದಗಿಸಲಾಗುವುದು ಎಂದರು.

ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರಮೀಳಾ ಕ್ರಾಸ್ತಾ, ನಿರ್ದೇಶಕ ಅಲ್ವಿನ್‌ ಕ್ರಾಸ್ತಾ, ಉದ್ಯಮ ಸಲಹೆಗಾರ ಸಿ.ಎ ವಲೇರಿಯನ್‌ ಡಾಲ್ಮೆಡಾ  ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು