ಉಜಿರೆ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಳದಂಗಡಿ ಉರ್ಜಾಲುಬೆಟ್ಟ, ದಿಡುಪೆ ಸಮೀಪದ ಕೊಲ್ಲಿ ಮೊದಲಾದ ಕಡೆ ಅರಣ್ಯ ಪ್ರದೇಶದಲ್ಲಿ ಬೆಂಕಿ ಉಂಟಾಗಿ ಹತ್ತಾರು ಎಕರೆ ಅರಣ್ಯ ನಾಶವಾದ ಘಟನೆ ಸೋಮವಾರ ಹಾಗೂ ಮಂಗಳವಾರ ನಡೆದಿದೆ ಎಂದು ತಿಳಿದುಬಂದಿದೆ.
ಚಾರ್ಮಾಡಿ ಪರ್ಲಾಣಿ ಪ್ರದೇಶದ ಅರಣ್ಯದ ಸಮೀಪದ ಬಫರ್ ಲ್ಯಾಂಡ್, ಚಾರ್ಮಾಡಿ ಘಾಟಿಯ ಅಣ್ಣಪ್ಪ ಬೆಟ್ಟ ಪ್ರದೇಶದಲ್ಲೂ ಬೆಂಕಿ ಕಾಣಿಸಿಕೊಂಡು ತಕ್ಷಣ ಹತೋಟಿಗೆ ತಂದ ಕಾರಣ ಹೆಚ್ಚಿನ ಅನಾಹುತ ಉಂಟಾಗಿಲ್ಲ ಎಂದು ವರದಿಯಾಗಿದೆ.
ಅಳದಂಗಡಿ ಪ್ರದೇಶದಲ್ಲಿ ಬೆಳ್ತಂಗಡಿ ವನ್ಯಜೀವಿ ವಿಭಾಗ ಸೇರಿದಂತೆ ಅರಣ್ಯ ಇಲಾಖೆಯ ತಂಡ ಬೆಂಕಿ ನಂದಿಸುವ ಕಾರ್ಯ ಮಂಗಳವಾರ ತಡರಾತ್ರಿವರೆಗೂ ಮುಂದುವರಿಸಿದೆ.