News Kannada
Friday, March 31 2023

ಮಂಗಳೂರು

ರಾಜಕೀಯಕ್ಕೆ ಇಳಿಯುವ ನಿರ್ಧಾರ ಸಮಾಜಕ್ಕೆ ಬಿಟ್ಟಿದ್ದೇವೆ ಪದ್ಮರಾಜ್ -ಸತ್ಯಜಿತ್ ಸುರತ್ಕಲ್..!

Padmaraj- Satyajit Surathkal: We have left it to the society to decide to enter politics.
Photo Credit : News Kannada

ಮಂಗಳೂರು: ಬಿಲ್ಲವ ಮುಖಂಡರಾದ ಪದ್ಮರಾಜ್ ಆರ್. ಮತ್ತು ಸತ್ಯಜಿತ್ ಸುರತ್ಕಲ್ ಅವರು ಚುನಾವಣಾ ರಾಜಕೀಯಕ್ಕೆ ಇಳಿಯುವ ನಿರ್ಧಾರವನ್ನು ಸಮಾಜಕ್ಕೆ ಬಿಟ್ಟಿದ್ದಾರೆ. ಸಮಾಜದ ಏಳಿಗೆಗೆ ಸಂಬಧಿಸಿದ ಕೆಲಸಗಳಿಗೆ ತಮ್ಮ ಆದ್ಯತೆ. ಆದರೆ ಅವಕಾಶ ಲಭಿಸಿದರೆ ಮತ್ತು ಸ್ಪರ್ಧಿಸಲು ಸೀಟು ಕೊಟ್ಟರೆ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವ ಇಚ್ಛೆಯನ್ನು ವ್ಯಕ್ತ
ಪಡಿಸಿದ್ದಾರೆ. ಇಬ್ಬರೂ ಮುಖಂಡರು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು.

‘ನಾನು ಈ ತನಕ ಯಾವುದೇ ರಾಜಕೀಯ ಪಕ್ಷದ ಜತೆ ಗುರುತಿಸಿ ಕೊಂಡಿಲ್ಲ. ಅರ್ಜಿ ಸಲ್ಲಿಸಿಲ್ಲ. ಯಾವುದೇ ರಾಜಕೀಯ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿಲ್ಲ. ಬಡವರ ಸೇವೆ ನನ್ನ ಪ್ರಥಮ ಆದ್ಯತೆ. ಅದರೆ ಅನೇಕ ಮಂದಿ, ಆದರಲ್ಲೂ ವಿಶೇಷವಾಗಿ ಆರ್ಥಿಕ ಹಿಂದುಳಿದವರಿಂದ ನಾನು ರಾಜಕೀಯಕ್ಕೆ ಇಳಿಯ ಬೇಕೆಂಬ ಒತ್ತಡ ಬರುತ್ತಿದೆ. ನನಗೆ ರಾಜಕೀಯ ಆಸಕ್ತಿ ಇಲ್ಲ. ಅದರೂ ಸೂಕ್ತ ಸಮಯದಲ್ಲಿ ಅವಕಾಶ ಲಭಿಸಿದರೆ ಸಮಾಜದವರ ಮತ್ತು ಹಿತೈಷಿಗಳ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಗುರು ಬೆಳದಿಂಗಳು ಸಂಘಟನೆಯ ಅಧ್ಯಕ್ಷ ಪದ್ಮರಾಜ್ ಆರ್. ತಿಳಿಸಿದರು.

ನಾರಾಯಣಗುರು ವಿಚಾರ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ‘ನಾನು ಸಮಾಜದ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದೇನೆ. ವೈಯಕ್ತಿಕವಾಗಿ ನನಗೆ ಚುನಾವಣಾ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಇದುವರೆಗೆ ಪಕ್ಷ ಮತ್ತು ನನ್ನ ಮಧ್ಯೆ ಯಾವುದೇ ಮಾತುಕತೆ ನಡೆದಿಲ್ಲ. ಆದರೆ ಒಂದೊಮ್ಮೆ ಸೀಟು ಕೊಟ್ಟರೆ ಸಮಾಜದ ಅಭಿಪ್ರಾಯ ಪಡೆದು ತೀರ್ಮಾನ ತೆಗೆದು ಕೊಳ್ಳುತೇನೆ ಎಂದರು.

See also  ದುಬೈ: ಯುಎಇ ಕನ್ನಡ ಮಕ್ಕಳ ಪ್ರತಿಭಾ ಸ್ಪರ್ಧೆ ಮತ್ತು ವಿದ್ಯಾರ್ಥಿ ಪುರಸ್ಕಾರ ಸಮಾರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು