News Kannada
Wednesday, March 22 2023

ಮಂಗಳೂರು

ಪುತ್ತೂರು: ಕಾರ್ಯಾಚರಣೆ ಗುಂಡ್ಯಕ್ಕೆ ಶಿಫ್ಟ್, ನೆಟ್ಟಾರು ಕ್ಯಾಂಪ್ ನಲ್ಲಿ ಉಳಿದ ಸಾಕಾನೆಗಳು

Operation shifted to Gundya, remaining sakanes at Nettaru camp
Photo Credit : News Kannada

ಪುತ್ತೂರು: ರೆಂಜಿಲಾಡಿ ಗ್ರಾಮದಲ್ಲಿ ಇಬ್ಬರನ್ನು ಬಲಿ ಪಡೆದ ಹಂತಕ ಕಾಡಾನೆಯನ್ನು ಸೆರೆ ಹಿಡಿದ ಬಳಿಕ, ಉಪಟಳ ನೀಡುವ ಉಳಿದ ಆನೆಗಳ ಪತ್ತೆ ಕಾರ್ಯವನ್ನು ಅರಣ್ಯ ಇಲಾಖೆ ಮುಂದುವರಿಸಿದೆ. ಆದರೆ ಆನೆಗಳು ಸ್ಥಳ ಬದಲಾಯಿಸುತ್ತಿದ್ದು, ಕಾರ್ಯಾಚರಣೆಯನ್ನು ಆ ಭಾಗಕ್ಕೆ ಸ್ಥಳಾಂತರಿಸುವ ಅಗತ್ಯ ಎದುರಾಗಿದೆ.

ಗುಂಡ್ಯ ಭಾಗದಲ್ಲಿ ಅರಣ್ಯ ಇಲಾಖೆ ನರ್ಸರಿಗಳನ್ನು ಕಾಡಾನೆಗಳು ಹಾಳು ಗೆಡವಿದೆ ಎನ್ನುವ ಮಾಹಿತಿ ಲಭಿಸಿದ್ದು, ಕಾರ್ಯಾಚರಣೆಯನ್ನು ಆ ಭಾಗಕ್ಕೆ ಕೇಂದ್ರಿಕರಿಸಲಾಗಿದೆ. ಮೊದಲಿಗೆ ಆನೆಗಳ ಪತ್ತೆ ಕಾರ್ಯ ನಡೆದ ಬಳಿಕವಷ್ಟೇ ಅವುಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯಲಿದೆ.

ಒಟ್ಟು 5 ಆನೆಗಳ ಪೈಕಿ ಅಭಿಮನ್ಯು ಹಾಗೂ ಇನ್ನೊಂದು ಆನೆಯನ್ನು ಸೆರೆ ಹಿಡಿದ ಕಾಡಾನೆಯ ಜೊತೆ ಕಳುಹಿಸಲಾಗಿದೆ. ಉಳಿದಂತೆ 3 ಆನೆಗಳನ್ನು ನೆಟ್ಟಾರು ಬಳಿಯ ಕ್ಯಾಂಪ್ ನಲ್ಲಿ ಉಳಿಸಲಾಗಿದೆ. ಗುಂಡ್ಯ ಅಥವಾ ಇನ್ನಾವುದೇ ಭಾಗದಲ್ಲಿ ಕಾಡಾನೆಗಳು ಪತ್ತೆಯಾದರೆ, ಅವಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಿ, ಬಳಿಕ ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಯಲಿದೆ ಎಂದು ಹೇಳಲಾಗಿದೆ.

7 ಮಂದಿ ಸೆರೆ: ಗುರುವಾರ ರಾತ್ರಿ ಕಾಡಾನೆಯನ್ನು ಸೆರೆ ಹಿಡಿದು, ಲಾರಿಗೆ ಹತ್ತಿಸುವ ವೇಳೆಯಲ್ಲಿ ನಡೆದ ಘರ್ಷಣೆಗೆ ಸಂಬಂಧಪಟ್ಟಂತೆ 7 ಮಂದಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಕಾಡಾನೆಯನ್ನು ಕೊಂಡೊಯ್ಯುವ ವೇಳೆಯಲ್ಲಿ, ಉಪಟಳ ನೀಡುವ ಎಲ್ಲಾ ಆನೆಗಳನ್ನು ಸೆರೆ ಹಿಡಿದ ಬಳಿಕವೇ ಸ್ಥಳದಿಂದ ತೆರಳುವಂತೆ ಸ್ಥಳೀಯರು ಪಟ್ಟು ಹಿಡಿದರು. ಈ ಸಂದರ್ಭ ವಾಗ್ವಾದ ನಡೆದು, ಸಿಬ್ಬಂದಿಗಳ ವಿರುದ್ಧವೇ ಸ್ಥಳೀಯರು ತಿರುಗಿ ಬೀಳುವಂತಾಯಿತು. ಆಗ ನಡೆದ ಘರ್ಷಣೆಗೆ ಸಂಬಂಧಪಟ್ಟಂತೆ 7 ಮಂದಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಉಮೇಶ್, ರಾಜೇಶ್ ಕನ್ನಡ್ಕ, ಜನಾರ್ಧನ್ ರೈ, ಕೋಕಿಲ ನಂದ, ತೀರ್ಥಕುಮಾರ, ಗಂಗಾಧರ ಗೌಡ, ಅಜಿತ್ ಕುಮಾರ್ ಬಂಧಿತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

See also  ಕೋವಿಡ್ -19 ಸಾಂಕ್ರಾಮಿಕ ಸೋಂಕಿನಿಂದ ಮೃತರಾದ ರೋಗಿಯ ಕುಟುಂಬಕ್ಕೆ ಧನಸಹಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು