ಕಕ್ಕಿಂಜೆ: ಚಾರ್ಮಾಡಿ ರಕ್ಷಿತಾರಣ್ಯ ವ್ಯಾಪ್ತಿಯ ಕಕ್ಕಿಂಜೆ ಸಮೀಪದ ಮನ್ನಡ್ಕಪಾದೆಯ ಪ್ರದೇಶದಲ್ಲಿ ಬೆಂಕಿ ಉಂಟಾಗಿ ಹತ್ತಾರು ಎಕರೆಗೆ ವ್ಯಾಪಿಸಿದ ಘಟನೆ ಸೋಮವಾರ ನಡೆದಿದೆ.
ಗುಡ್ಡ ಪ್ರದೇಶದ ಹುಲ್ಲುಗಾವಲಿನ ಒಣ ಹುಲ್ಲಿಗೆ ಬೆಂಕಿ ಹಿಡಿದಿದ್ದು ಅದು ಸುತ್ತಲ ಪರಿಸರವನ್ನು ವ್ಯಾಪಿಸಿತು. ಯಾವ ಕಾರಣದಿಂದ ಬೆಂಕಿ ಉತ್ಪತ್ತಿಯಾಗಿದೆ ಎಂದು ತಿಳಿದು ಬಂದಿಲ್ಲ.
ನರಿಯ ಎಚ್.ಪಿ.ಸಿ.ಎಲ್ ಕಂಪನಿಯ ಹಾಗೂ ಬೆಳ್ತಂಗಡಿ ಅಗ್ನಿಶಾಮಕ ದಳದ ಸಹಕಾರದೊಂದಿಗೆ ಡಿ ಆರ್ ಎಫ್ ಒ ಗಳಾದ ಯತೀಂದ್ರ, ರವೀಂದ್ರ ಅಂಕಲಗಿ, ಗಸ್ತು ಅರಣ್ಯ ಪಾಲಕ ಪಾಂಡುರಂಗ ಕಮತಿ ಮತ್ತು ಸ್ಥಳೀಯರು ಸೇರಿ ಬೆಂಕಿಯನ್ನು ಹತೋಟಿಗೆ ತಂದು ಇನ್ನಷ್ಟು ವ್ಯಾಪಿಸಿದಂತೆ ಕ್ರಮ ಕೈಗೊಂಡರು.