News Kannada
Friday, September 22 2023
ಮಂಗಳೂರು

ಘನತ್ಯಾಜ್ಯ ನಿರ್ವಹಣೆ ಸಂಸ್ಥೆ ಆ್ಯಂಟನಿ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಗುತ್ತಿಗೆ ಜುಲೈಗೆ ವಿಸ್ತರಣೆ

Mangaluru: Antony's contract extended till July, direct recruitment of pourakarmikas and direct payment
Photo Credit : News Kannada

ಮಂಗಳೂರು: ಘನತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದ ಆ್ಯಂಟನಿ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಸೆಲ್‌ ಪ್ರೈ. ಲಿ.ನ ಗುತ್ತಿಗೆ ಅವಧಿಯನ್ನು ಮತ್ತೆ 6 ತಿಂಗಳಿಗೆ ವಿಸ್ತರಿಸಲಾಗಿದೆ. 8 ವರ್ಷಗಳಿಂದ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇದೇ ಕಂಪೆನಿ ಘನತ್ಯಾಜ್ಯ ನಿರ್ವಹಣೆ ಮಾಡುತ್ತಿತ್ತು. 2023ರ ಜನವರಿ ತನಕ ಆ್ಯಂಟನಿ ಸಂಸ್ಥೆಯ ಗುತ್ತಿಗೆ ಅವಧಿ ವಿಸ್ತರಣೆ ಮಾಡಲಾಗಿತ್ತು. ಇದೀಗ ಮತ್ತೆ ಆರು ತಿಂಗಳು ವಿಸ್ತರಣೆ ಮಾಡಲಾಗಿದೆ. ಮಂಗಳೂರಿನಲ್ಲಿ ಮೊದಲ ಬಾರಿಗೆ ಬ್ಯಾಟರಿ ಚಾಲಿತ ಇ- ವಾಹನಗಳು ತ್ಯಾಜ್ಯ ಸಾಗಾಟ ಮಾಡಲಿವೆ.

2015ರ ಫೆಬ್ರವರಿಯಿಂದ ಆ್ಯಂಟನಿ ವೇಸ್ಟ್‌ ಸಂಸ್ಥೆಯಿಂದ ತ್ಯಾಜ್ಯ ನಿರ್ವಹಣೆ ಆರಂಭಿಸಲಾಗಿತ್ತು. ಈ ಗುತ್ತಿಗೆ ಅವಧಿ 2022ರ ಜನವರಿಗೆ ಮುಕ್ತಾಯಗೊಂಡಿತ್ತು. ಈ ಮಧ್ಯೆ ಹೊಸ ಏಜೆನ್ಸಿ ನಿಯೋಜನೆ ಬಗ್ಗೆ ಚರ್ಚೆ ನಡೆದರೂ ವಿಳಂಬವಾಗುವ ಹಿನ್ನೆಲೆಯಲ್ಲಿ 2023ರ ಜನವರಿ ತನಕ ಆ್ಯಂಟನಿ ಸಂಸ್ಥೆಯ ಗುತ್ತಿಗೆ ಅವಧಿ ವಿಸ್ತರಣೆ ಮಾಡಲಾಗಿತ್ತು. ಇದೀಗ ಮತ್ತೆ ಆರು ತಿಂಗಳು ವಿಸ್ತರಣೆ ಮಾಡಲಾಗಿದೆ.

ಆಗಸ್ಟ್‌ನಿಂದ ಪಾಲಿಕೆಯ 60 ವಾರ್ಡ್‌ಗಳಲ್ಲಿ ಪ್ರಾಥಮಿಕ ಕಸ ಸಂಗ್ರಹ ಹಾಗೂ ಸಾಗಾಟಕ್ಕೆ ಹೊಸ ಯೋಜನೆಗೆ ಅಗತ್ಯ ವಾಹನ ಖರೀದಿ ಮತ್ತು ತ್ಯಾಜ್ಯ ಸಂಗ್ರಹ, ಸಾಗಾಟ, ನಿರ್ವಹಣೆಯನ್ನು ಒಂದು ವರ್ಷ ಅವಧಿಗೆ ಹೊರಗುತ್ತಿಗೆ ನೀಡಲು ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ವಾಹನ ಖರೀದಿಗೆ ಟೆಂಡರ್‌ಗೆ ಮಾ.3 ಕೊನೆಯ ದಿನ.

ಕಾರ್ಮಿಕರ ಸರಬರಾಜು, ವಾಹನಗಳ ವಾರ್ಷಿಕ ನಿರ್ವಹಣೆ ಮತ್ತು ಕಾರ್ಯಾಚರಣೆಯ ಅಂದಾಜು ಪಟ್ಟಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸಿದ್ದು, ಇನ್ನಷ್ಟೇ ಅನುಮೋದನೆಗೊಂಡು ಬರಬೇಕಿದೆ.

ಈಗ 13 ವಾರ್ಡ್‌ಗಳಲ್ಲಿ ಪೌರ ಕಾರ್ಮಿಕರು ಕಸ ಗುಡಿಸುತ್ತಿದ್ದರೆ,  47 ವಾರ್ಡ್‌ಗಳಲ್ಲಿ ಆ್ಯಂಟನಿ ವೇಸ್ಟ್‌ ಕಂಪನಿ ಕಸ ಗುಡಿಸುತ್ತಿದೆ. ಎಲ್ಲಒಟ್ಟು 60 ವಾರ್ಡ್‌ಗಳ ಕಸವನ್ನು ಗುತ್ತಿಗೆ ಒಪ್ಪಂದದಂತೆ ಆ್ಯಂಟನಿ ವೇಸ್ಟ್‌ ಕಂಪನಿಯೇ ಸಾಗಾಟ ಮಾಡುತ್ತಿದೆ. ಸರಕಾರದ ಹೊಸ ನಿಯಮ ಪ್ರಕಾರ ತ್ಯಾಜ್ಯ ನಿರ್ವಹಣೆಗೆ ಪೌರಕಾರ್ಮಿಕರ ನೇರ ನೇಮಕಾತಿ ಮತ್ತು ನೇರ ಪಾವತಿ ವ್ಯವಸ್ಥೆ ಮಾಡಬೇಕಿದೆ.

ನಗರದ ಜನಂಖ್ಯೆ ಆಧಾರದಲ್ಲಿ 700ಕ್ಕೂ ಹೆಚ್ಚು ಕಾರ್ಮಿಕರ ನೇಮಕ ಮಾಡಬೇಕಿದೆ. ಹಿಂದಿನ 290 ಮಂದಿ ಕಾಯಂ ಪೌರಕಾರ್ಮಿಕರಿದ್ದಾರೆ. ಇತ್ತೀಚೆಗೆ 111 ಮಂದಿ ನೇಮಕ ಆಗಿದೆ. ಉಳಿದ ಶೇ.50 ಮಂದಿಗೆ ಕನಿಷ್ಠ ವೇತನ ನಿಯಮ ಪ್ರಕಾರ ನೇರ ಪಾವತಿ ನಡೆಯಲಿದೆ ಎನ್ನುತ್ತಾರೆ ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ.

ತ್ಯಾಜ್ಯ ನಿರ್ವಹಣೆಗಾಗಿ 60 ವಾರ್ಡ್‌ಗಳನ್ನು ನಾಲ್ಕು ವಲಯಗಳಲ್ಲಿ ವಿಂಗಡಿಸಲಾಗಿದೆ. ಪಾಲಿಕೆ ವತಿಯಿಂದ ಖರೀದಿಸುವ ವಾಹನಗಳನ್ನು ಪ್ರತ್ಯೇಕ ನಾಲ್ಕು ಪ್ಯಾಕೇಜ್‌ಗಳಾಗಿ ಮನೆ ಮನೆ ಕಸ ಸಂಗ್ರಹ ಮತ್ತು ಸಾಗಾಟ ನಡೆಸಲಾಗುತ್ತದೆ. ಮೊದಲ ಒಂದು ವರ್ಷದ ಅವಧಿಗೆ ಹೊರಗುತ್ತಿಗೆ ನೀಡಿ, ತೃಪ್ತಿಕರವಾಗಿದ್ದಲ್ಲಿ ಮುಂದೆ ಒಂದು ವರ್ಷಕ್ಕೆ ಷರತ್ತಿನೊಂದಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ.

See also  ಮಂಗಳೂರು: ಅಕ್ಟೋಬರ್‌ನಲ್ಲಿ ಯಶಸ್ವಿನಿ ಯೋಜನೆ ಮರುಜಾರಿ ಎಂದ ಸಚಿವ ಸೋಮಶೇಖರ್

ವಲಯ 1(ಸುರತ್ಕಲ್‌)ರಲ್ಲಿ 12 ವಾರ್ಡ್‌ಗಳಿದ್ದು, 1,22,056 ಜನಸಂಖ್ಯೆ- 23,852 ಮನೆ, ವಲಯ 2 (ಸೆಂಟ್ರಲ್‌ ಎ) ರಲ್ಲಿ 15 ವಾರ್ಡ್‌ಗಳಿದ್ದು, 143132 ಜನಸಂಖ್ಯೆ ಹಾಗೂ 42174 ಮನೆಗಳಿವೆ. ವಲಯ 3 (ಸೆಂಟ್ರಲ್‌ ಬಿ) ರಲ್ಲಿ 14 ವಾರ್ಡ್‌ಗಳಿದ್ದು 114776 ಜನಸಂಖ್ಯೆ, 45158 ಮನೆಗಳಿವೆ. ವಲಯ 4 (ಕದ್ರಿ)ರಲ್ಲಿ 19 ವಾರ್ಡ್‌ಗಳಿದ್ದು 172398 ಜನಸಂಖ್ಯೆ, 52618 ಮನೆಗಳಿವೆ.

ಪ್ರಸ್ತಾವಿತ ಹೊಸ ಯೋಜನೆಯಡಿ ತಳ್ಳು ಗಾಡಿ- 244, ಬ್ಯಾಟರಿ ಚಾಲಿತ ತ್ರಿಚಕ್ರ ವಾಹನ- 24, ಜೀಪ್‌ ಟಿಪ್ಪರ್‌ಗಳು-107, ಟಿಪ್ಪರ್‌- 30, ಕಂಪ್ಯಾಕ್ಟರ್‌- 16, ಧ್ವನಿ ವ್ಯವಸ್ಥೆ- 161, ಜಿಪಿಎಸ್‌: 177, ವೇಗ ನಿಯಂತ್ರಕ- 153 ಖರೀದಿಸಲಿದ್ದು, ಇದಕ್ಕೆ 27.15 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.

ಒಂದು ವರ್ಷ ಅವಧಿಗೆ 27.15 ಕೋಟಿ ರೂ. ವೆಚ್ಚದಲ್ಲಿ ವಾಹನ ಮತ್ತಿತರ ವ್ಯವಸ್ಥೆ ಖರೀದಿಸುವ ಯೋಜನೆಯಲ್ಲಿ ಬ್ಯಾಟರಿ ಚಾಲಿತ 24 ತ್ರಿಚಕ್ರ ವಾಹನ ಖರೀದಿ ಮಾಡಲಾಗುತ್ತಿದೆ. ಮಂಗಳೂರಿನಲ್ಲಿ ಮೊದಲ ಬಾರಿಗೆ ಬ್ಯಾಟರಿ ಚಾಲಿತ ಇ- ವಾಹನಗಳು ತ್ಯಾಜ್ಯ ಸಾಗಾಟ ಮಾಡಲಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು