ಬಂಟ್ವಾಳ: ಉತ್ತಮ ನಾಯಕತ್ವದಲ್ಲಿ ದೇಶ ಅಭಿವೃದ್ಧಿಯಾಗುತ್ತದೆ ಎಂಬುದಕ್ಕೆ ಪ್ರಧಾನಿ ನರೇಂದ್ರಮೋದಿಯವರ ಆಡಳಿತ ಸಾಕ್ಷಿಯಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಕರ್ಪೆ ಗ್ರಾಮದಲ್ಲಿ 8.34 ಕೋಟಿ ರೂ ಅನುದಾನದಲ್ಲಿ ಕಾಂಕ್ರೀಟ್ ಕರಣಗೊಂಡ ಸುಮಾರು 12 ರಸ್ತೆಗಳನ್ನು ಉದ್ಘಾಟನೆ ನಡೆಸಿ ಮಾತನಾಡಿದರು. ಸಂಸ್ಕೃತಿ ಜೊತೆ ದೇಶದ ಅರ್ಥಿಕ ವ್ಯವಸ್ಥೆಯನ್ನು ಜಗತ್ತಿನಲ್ಲಿ ಎತ್ತರಕ್ಕೆ ಬೆಳೆಸಿದ್ದು ಮೋದಿ ಎಂಬುದು ಹೆಗ್ಗಳಿಕೆ ಎಂದು ಅವರು ತಿಳಿಸಿದರು.
ಕರ್ಪೆ ಗ್ರಾಮದಲ್ಲಿ ಒಟ್ಟು 35 ಕೋಟಿ ರೂ ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸಲಾಗಿದೆ. ಸುಮಾರು 2,000 ಕೋಟಿ ರೂ ಅನುದಾನದ ಮೂಲಕ ಬಂಟ್ವಾಳ ಕ್ಷೇತ್ರದಲ್ಲಿ ದಾಖಲೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ.
ಆಸ್ಪತ್ರೆಯಲ್ಲಿ ತರಲಾದ ಬದಲಾವಣೆ, ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿ, ಧಾರ್ಮಿಕ ಕೇಂದ್ರಗಳಿಗೆ ನೀಡಿದ ಅನುದಾನ, ಕುಡಿಯುವ ನೀರಿನ ಯೋಜನೆ, ಸ್ವಚ್ಛತೆಗೆ ನೀಡಿದವಲ ಆದ್ಯತೆ , ಚರಂಡಿ ವ್ಯವಸ್ಥೆ, ಕೃಷಿಕರಿಗೆ ನೀಡಿದ ಸವಲತ್ತುಗಳು ಹೀಗೆ ಅನೇಕ ವಿವಿಧ ಯೋಜನೆಗಳನ್ನು ಜಾರಿ ಮಾಡಿ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ ಎಂಬ ಸಂತೋಷ ನನಗಿದೆ ಎಂದು ಅವರು ತಿಳಿಸಿದರು.
ಇತ್ತೀಚಿಗೆ ನಡೆಸಿದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಕ್ಷೇತ್ರದ ಜನತೆ ನೀಡಿದ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ. ಪ್ರಥಮ ಶಾಸಕತ್ವದ ಅವಧಿಯಲ್ಲಿ ನಾನು ನನ್ನ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ.
ಅದಕ್ಕಿಂತಲೂ ಹೆಚ್ಚು ಕ್ಷೇತ್ರದ ಜನರು ನೀಡಿದ ಪ್ರೀತಿ ಮರೆಯಲು ಅಸಾಧ್ಯ ಎಂದು ಅವರು ಹೇಳಿದರು. ನನ್ನ ಶಾಸಕತ್ವದ ಅವಧಿಯಲ್ಲಿ ನಡೆಸಿದ ಕಾಮಗಾರಿಗಳ ಹಾಗೂ ಪ್ರತಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯ ದಾಖಲೆಗಳು ಪಾರದರ್ಶಕವಾಗಿದೆ.
ಮಾ.12 ರಂದು ವಿಜಯ ಸಂಕಲ್ಪ ರಥಯಾತ್ರೆ ಬಂಟ್ವಾಳಕ್ಕೆ ಆಗಮಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ರೋಡ್ ಶೋ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ವಿನಂತಿ ಮಾಡಿದರು.
ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ ಅಳಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ವಿಮಲಾ ಮೋಹನ್, ತಾ.ಪಂ. ಮಾಜಿ ಸದಸ್ಯ ರತ್ನಕುಮಾರ್ ಚೌಟ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ,ಗ್ರಾಮದ ಪ್ರಮುಖರಾದ ನಾರಾಯಣ ನಾಯಕ್ , ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿ ಮಂದಾರತಿ ಶೆಟ್ಟಿ, ಕರ್ಪೆ ಗ್ರಾಮ ಪಂಚಾಯತ್ ಸದಸ್ಯ ರಾದ ಸುನಿಲ್ ಶೆಟ್ಟಿಗಾರ್ , ಉದಯ ಪೂಜಾರಿ, ಸಂದೇಶ್ ಶೆಟ್ಟಿ,ದಾಮೋದರ ಪೂಜಾರಿ,ಸುರೇಶ್ ಕುಲಾಲ್, ಹೇಮಲತಾ, ವಿದ್ಯಾಪ್ರಭು, ಇರ್ವತ್ತೂರು ಗ್ರಾ.ಪಂ.ಸದಸ್ಯ ದಯಾನಂದ, ಪ್ರಮುಖರಾದ ದೀಪಕ್ ಶೆಟ್ಟಿ, ವಿನಯಕುಮಾರ್ ಜೈನ್ ನೆಕ್ಕಿಲಾಜೆ ಗುತ್ತು, ಲೋಕಯ ಪೂಜಾರಿ, ಉಮೇಶ್ ಗೌಡ, ತೇಜಸ್ಸ್, ಮತ್ತಿತರರು ಉಪಸ್ಥಿತರಿದ್ದರು. ತಾ.ಪಂ.ಮಾಜಿ ಸದಸ್ಯ ಪ್ರಭಾಕರ ಪ್ರಭು ಸ್ವಾಗತಿಸಿ, ಪ್ರಸ್ತಾವನೆಗೈದರು.