ಬಂಟ್ವಾಳ: ಎ.ಟಿ.ಎಮ್.ನಲ್ಲಿ ಬಾಕಿಯಾಗಿದ್ದ ಹಣವನ್ನು ಪೊಲೀಸ್ ಇಲಾಖೆಯ ಸಹಕಾರದಿಂದ ಪತ್ತೆ ಹಚ್ಚಿ ವಾರಸುದಾರರಿಗೆ ನೀಡಿ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿ ಅವರು ಮಾನವೀಯತೆ ಮೆರೆದಿದ್ದಾರೆ.
ಬಂಟ್ವಾಳ ತಾಲೂಕು ಕಚೇರಿಯ ನಿವೃತ್ತ ಸಿಬ್ಬಂದಿ ಮುಕ್ತಬಾಯಿ ಎಂಬವರು ಹಣ ಕಳೆದುಕೊಂಡಿದ್ದರು. ಕಂದಾಯ ಇಲಾಖೆಯ ಅಧಿಕಾರಿ ಸೀತಾರಾಮ ಅವರು ಮಾನವೀಯತೆ ಮೆರೆದ ಅಧಿಕಾರಿಯಾಗಿದ್ದಾರೆ.
ಫೆ. 27 ರಂದು ಬಿಸಿರೋಡಿನ ಕೆನರಾ ಬ್ಯಾಂಕ್ ಎ.ಟಿ.ಎಮ್ ನಲ್ಲಿ ದೊರೆತ ರೂ.9000 ನಗದನ್ನು ಇಂದು ವಾರಸುದಾರರಿಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪೋಲೀಸರ ಸಮಕ್ಷಮ ನೀಡಲಾಯಿತು.
ಏನಾಗಿತ್ತು?
ಫೆ. 27 ರಂದು ಬಿಸಿರೋಡಿನ ಕೆನರಾ ಬ್ಯಾಂಕ್ ಎ.ಟಿ.ಎಮ್ ನಲ್ಲಿ ಹಣ ಡ್ರಾ ಮಾಡಲೆಂದು ತೆರಳಿದ್ದ ತಾಲೂಕು ಕಚೇರಿ ಸಿಬ್ಬಂದಿ ಸೀತಾರಾಮ ಅವರು ಎಟಿಎಮ್ ನಲ್ಲೇ ಬಾಕಿಯಾಗಿದ್ದ 9000 ನಗದು ಹಣವನ್ನು ಬಂಟ್ವಾಳ ನಗರ ಪೋಲಿಸ್ ಠಾಣೆಗೆ ತಂದು ಒಪ್ಪಿಸಿದ್ದು, ಬಂಟ್ವಾಳ ಪೋಲೀಸರು ಕೆನರಾ ಬ್ಯಾಂಕ್ ಸಹಾಯ ಪಡೆದು ವಾರೀಸುದಾರನ್ನು ಪತ್ತೆ ಮಾಡಿದಾಗ ಮುಕ್ತಬಾಯಿ ಎಂದು ತಿಳಿದು ಅವರನ್ನು ಠಾಣೆಗೆ ಕರೆದು ಇಂದು ಫೆ. 2 ರಂದು ಹಸ್ತಾಂತರ ಮಾಡಲಾಯಿತು.