ಮಂಗಳೂರು: “ನರೇಂದ್ರ ಮೋದಿ ಅನ್ನೋ ವಿಶ್ವಗುರುವಿಗೆ ಹೆಂಡ್ರಿಲ್ಲ, ಮಕ್ಳಿಲ್ಲ, ಹೀಗಾಗಿ ಜನಸಾಮಾನ್ಯರ ಕಷ್ಟ ಏನೇನ್ನುವುದು ಅವರಿಗೆ ಗೊತ್ತಿಲ್ಲ. ನಾವು ಜನರ ಕಷ್ಟ ಅರಿತು ಮೂರು ಮುಖ್ಯ ಘೋಷಣೆಗಳನ್ನು ಮಾಡಿದ್ದೇವೆ” ಎಂದು ಬಿ.ಕೆ. ಹರಿಪ್ರಸಾದ್ ಆರೋಪಿಸಿದರು. “ಲಾಭದಲ್ಲಿದ್ದ ವಿಮಾನ ನಿಲ್ದಾಣಗಳನ್ನು ಮಾರಾಟ ಮಾಡಿದ್ದು, ಬ್ಯಾಂಕ್ ಗಳನ್ನು ಗುಜರಾತ್ ನ ನಷ್ಟದಲ್ಲಿದ್ದ ಬ್ಯಾಂಕ್ ಜೊತೆ ವಿಲೀನ ಮಾಡಿದ್ದೇ ಅವರ ಸಾಧನೆ” ಎಂದರು.
“ನರೇಂದ್ರ ಮೋದಿಯವರಿಗೆ ಹಿಂದೆ ಕರ್ನಾಟಕ ಎಲ್ಲಿದೆ ಅಂತ ಗೊತ್ತಿರಲಿಲ್ಲ. ಇಲ್ಲಿ ನೆರೆ ಬಂದಾಗ, ಬರ ಬಂದಾಗ ರೈತರ ಸಮಸ್ಯೆ ಆಲಿಸಲಿಲ್ಲ. ಆದರೆ ಈಗ ಪ್ರತಿದಿನ ರಾಜ್ಯಕ್ಕೆ ಬರುತ್ತಿದ್ದಾರೆ. ಇಲ್ಲಿ ಬಂದು ಭಾಷಣ ಮಾಡುತ್ತಿದ್ದಾರೆ. ಚುನಾವಣೆ ಬಂದಾಗ ಮಾತ್ರ ಜನರ ಬಳಿ ಓಡೋಡಿ ಬರುವ ಇವರ ನಾಟಕ ಅರಿಯದಿದ್ದರೆ ಉಳಿಗಾಲವಿಲ್ಲ” ಎಂದು ಹೇಳಿದರು.
ಅವರು ಕೃಷ್ಣಾಪುರದಲ್ಲಿ ಜರುಗಿದ ಕಾಂಗ್ರೆಸ್ ಕರಾವಳಿ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತಾಡುತ್ತಿದ್ದರು.