ಬೆಳ್ತಂಗಡಿ: ಕೇಂದ್ರ ,ಹಾಗೂ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಇದನ್ನು ದೇಶದ ಜನ ಅರ್ಥ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ 40% ಕಮಿಷನ್ ಇದೆ ಎಂದು ಕಾಂಗ್ರೆಸ್ ಹೇಳುತ್ತಿಲ್ಲ. ಸರಕಾರದ ಗುತ್ತಿಗೆ ಕಾಮಗಾರಿ ಮಾಡುವ ಗುತ್ತಿಗೆದಾರರ ಸಂಘದ ರಾಜ್ಯಾದ್ಯಕ್ಷರೇ ಹೇಳಿದ್ದಾರೆ.
ಇಂದು ಕರಾವಳಿಯಲ್ಲಿ ಬಿಜೆಪಿಯ ಧರ್ಮ ವಿರೋಧಿ ಚಟುವಟಿಕೆಯಿಂದ ದೂರದ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿ ವಿದ್ಯಾರ್ಥಿಗಳು ಭಯದಿಂದ ಶಿಕ್ಷಣ ಪಡೆಯುವ ಕಾಲ ಬಂದಿದೆ. ಇದರಿಂದಾಗಿ ಶಿಕ್ಷಣದಲ್ಲಿ ಪ್ರತಿವರ್ಷ ನಂ.1 ಇದ್ದ ದ.ಕ ಉಡುಪಿ 18 ನೇ ಸ್ಥಾನಕ್ಕೆ ಇಳಿದಿದೆ. ಅದ್ದರಿಂದ ಮಕ್ಕಳ ಶಿಕ್ಷಣ ಭವಿಷ್ಯ ರೂಪಿಸಲು, ಕುಟುಂಬದಲ್ಲಿ ಸಾಮರಸ್ಯ ಮೂಡಲು, ತಾಲೂಕಿನ ಅಭಿವೃದ್ಧಿಗೆ ಕಾಂಗ್ರೆಸ್ ಗೆ ಮತನೀಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ರಾಷ್ಟ್ರೀಯ ಕಾಂಗ್ರೆಸ್ ಮುಂಖಂಡ, ವಿದಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದರು.
ಅವರು ಶುಕ್ರವಾರ ಅಳದಂಗಡಿ ಬಸ್ ನಿಲ್ದಾಣ ಬಳಿ ನಡೆದ ಕಾಂಗ್ರೆಸ್ ಪಕ್ಷದ ಕರಾವಳಿ ಪ್ರಾಜಾದ್ವನಿ ಯಾತ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಿ ಜೆ ಪಿ ಅಧಿಕಾರಕ್ಕೆ ಬರುವ ಮುಂಚೆ ಕಾಂಗ್ರೆಸ್ ಮುಖಂಡರ ವಿದೇಶಿ ಕಪ್ಪುಹಣ ತರಿಸಿ ಭಾರತದ ಪ್ರತಿಯೊಬ್ಬರಿಗೂ 15 ಲಕ್ಷ ಹಣ ಖಾತೆಗೆ ಜಮಾ ಗೊಳಿಸುತ್ತೇವೆ ಎಂದವರು ಎಲ್ಲಿದ್ದಾರೆ. ಇವರಿಗೆ ತಾಕತ್ತಿದ್ದರೆ ಕಾಂಗ್ರೆಸ್ ಪಕ್ಷದ ನಾಯಕರ ಭ್ರಷ್ಟಾಚಾರ ಬಯಲಿಗೆ ತನ್ನಿ.ಕಾಂಗ್ರೆಸ್ ಯಾವತ್ತು ಪಕ್ಷದಲ್ಲಿ ಬ್ರಷ್ಟಾಚಾರಿಗಳಿಗೆ ಅವಕಾಶ ನೀಡೋದಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ, 60 ವರ್ಷಗಳ ಆಡಳಿತದ ಜನಪರ ಕಾರ್ಯಕ್ರಮ, ಮತ್ತು ರಾಜ್ಯದ ಹಿತದ್ರುಷ್ಟಿ,ರಾಜ್ಯದ ಜನರ ಅಗತ್ಯತೆಗಳನ್ನು ಪಕ್ಷ ನೀಡಿರುವ ಪ್ರಣಾಳಿಕೆಯನ್ನು ಕಾರ್ಯಕರ್ತರು ಜನರಿಗೆ ತಿಳಿಸುವ ಕಾರ್ಯ ಮಾಡಬೇಕು. ಪ್ರತಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2000.00 ರೂ ಖಾತೆಗೆ, ಕರಾವಳಿ ಅಭಿವೃದ್ಧಿ ಪ್ರಾದಿಕಾರ ಮೇಲ್ದರ್ಜೆಗೆ ಏರಿಸಿ 2500.00 ಕೋಟಿ ಮೀಸಲು,197 ಅತಿ ಸೂಕ್ಷ್ಮ ಹಿಂದುಳಿದ ಸಮುದಾಯದದ ಅಬಿವ್ರುದ್ದಿಗೆ ವಿಷೇಷ ಅನುದಾನ ನೀಡುವ ಚಿಂತನೆ ಕಾಂಗ್ರೆಸ್ ಮಾಡಿದ್ದು ಜನರಿಗೆ ತಿಳಿಸಬೇಕು. ಮುಂದೆ ಕಾಂಗ್ರೆಸ್ ಅಧಿಕಾರ ಬರವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದರು.
ಮಾಜಿ ಶಾಸಕ ವಸಂತ ಬಂಗೇರ ಮಾತನಾಡಿ ತಾಲೂಕಿನಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ.ಶಾಸಕರು ಸರ್ವವಾದಿಕಾರ ದೋರಣೆ ಆಡಳಿತ ನಡೆಸುತ್ತಿದ್ದಾರೆ. ಇದರಿಂದ ಜನ ಬೇಸತ್ತಿದ್ದು ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಬೇಕು ಎಂದರು. ಕಾರ್ಯಕ್ರಮದಲ್ಲಿ ವಿದಾನ ಪರಿಷತ್ ಸದಸ್ಯ, ಕಾಂಗ್ರೆಸ್ ಜಿಲ್ಲಾದ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಗಂಗಾದರ ಗೌಡ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ರಂಜನ್ ಗೌಡ,ಶೈಲೇಶ್ ಕುಮಾರ್, ಕೆ ಪಿ ಸಿ ಸಿ ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್,ಪಕ್ಷದ ಮುಖಂಡರುಗಳಾದ ಅಬಿನಂದನ್ ಹರೀಶ್ ಕುಮಾರ್, ಕೃಷ್ಣ ಮೂರ್ತಿ ಕಾರ್ಕಳ,ಪ್ರಸಾಂತ್ ವೇಗಸ್, ಶೇಖರ್ ಕುಕ್ಕೇಡಿ, ಬಿ ಕೆ ವಸಂತ್,ಪ್ರವೀಣ್ ಉಜಿರೆ,ರಾಜಶೇಖರ ಅಜ್ರಿ,ಶಶಿದರ ಹೆಗ್ಡೆ ಮಂಗಳೂರು, ಮನೋಹರ್ ಕಾರ್ ಎ,ಅನಿಲ್ ಪೈ,ಅಬ್ದುಲ್ ರಹಿಮಾನ್ ಪಡ್ಪು, ಕೇಶವ ಗೌಡ, ಸತೀಶ್ ಅಳದಂಗಡಿ, ಜಾಯ್ ನೆರಿಯ, ನಮಿತಾ, ಸಲಿಂ ಗುರುವಾಯನಕೆರೆ, ಶಾಹುಲ್ ಹಮೀದ್, ಮುಂತಾದವರು ಉಪಸ್ಥಿತರಿದ್ದರು. ಕೆ ಹರೀಶ್ ಕುಮಾರ್ ಸ್ವಾಗತಿಸಿ, ಪ್ರಶಾಂತ್ ವೇಗಸ್ ವಂದಿಸಿದರು. ಸಂದೀಪ್ ನೀರಲ್ಕೆ, ಸಲಿಂ ಗುರುವಾಯನಕೆರೆ ಕಾರ್ಯಕ್ರಮ ನಿರೂಪಿಸಿದರು.