ಬೆಳ್ತಂಗಡಿ: ಕಳೆದ ಇಪ್ಪತ್ತುವರ್ಷಗಳಿಂದ ಅರೋಗ್ಯ ಇಲಾಖೆಯಲ್ಲಿ ರಾಷ್ಟ್ರೀಯ ಅರೋಗ್ಯ ಅಬಿಯಾನದ ( ಎನ್ ಹೆಚ್ ಎಂ) ಅಡಿಯಲ್ಲಿ ಮೂವತ್ತು ಸಾವಿರಕ್ಕು ಹೆಚ್ಚು ಒಳಗುತ್ತಿಗೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು ಇವರು ಅಲ್ಪ ವೇತನ ಪಡೆಯುತ್ತಿದ್ದು ಅಲ್ಲದೆ ಖಾಯಮಾತಿಗಾಗಿ ಅನೇಕ ವರ್ಷಗಳಿಂದ ಮನವಿ ಮಾಡುತ್ತಿದ್ದು ಇದಕ್ಕೆ ಸರಕಾರಕ್ಕೆ ಮನವಿ ಮಾಡಿದರು ಯಾವುದೇ ಕ್ರಮಕೈಕೊಳ್ಳುತ್ರಿಲ್ಲ.
ಇದೀಗ ಬೆಂಗಳೂರಿನ ಪ್ರಿಢಂ ಪಾರ್ಕ್ ನಲ್ಲಿ ಇಪ್ಪತ್ತು ದಿನ ಗಳಿಂದ ಖಾಯಮಾತಿಗಾಗಿ ಪ್ರತಿಭಟನೆ ನಡೆಸುತ್ತಿದ್ದು ನಮ್ಮ ಬೇಡಿಕೆ ಈಡೇರಿಸಲು ಮುಖ್ಯ ಮಂತ್ರಿಗಳಿಗೆ,ಅರೋಗ್ಯ ಸಚಿವರಿಗೆ ನೀವು ನಮ್ಮ ಪರವಾಗಿ ಮನವಿ ಮಾಡಬೇಕು ಆ ಮೂಲಕ ನಮ್ಮ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಭಾನುವಾರ ಧರ್ಮಸ್ಥಳದಲ್ಲಿ ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರಿಗೆ ಮನವಿ ಸಲ್ಲಿಸಿದರು. ನಾವು ಕರೋನಾ ಸಮಯದಲ್ಲಿ ಜೀವದ ಹಂಗುತೊರೆದು ಕರ್ತವ್ಯ ನಿರ್ವಹಿಸಿದ್ದು ನಮ್ಮ ವೇತನ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ.ಖಾಯಂ ಸಿಬ್ಬಂದಿಗಳಷ್ಟೆ ನಾವು ಕೂಡ ಕೆಲಸ ಮಾಡುತ್ತಿದ್ದೇವೆ. ನಮ್ಮ ಕುಟುಂಬದ ಭವಿಷ್ಯಕ್ಕಾಗಿ ತಕ್ಷಣ ನಮ್ಮ ಸೇವೆಯನ್ನು ಖಾಯಮಾತಿಗೊಳಿಸಲು ಮನವಿ ಮಾಡಬೇಕೆಂದು ವಿನಂತಿಸಿದರು.
ಇದಕ್ಜೆ ಸ್ಪಂದಿಸಿದ ಹೆಗ್ಗಡೆಯವರು ಮುಖ್ಯ ಮಂತ್ರಿಗಳಿಗೆ,ಅರೋಗ್ಯ ಸಚಿವರಿಗೆ ಪತ್ರಬರೆಯುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಒಳಗುತ್ತಿಗೆ ಸಂಘದ ಸದಸ್ಯರುಗಳಾದ ರಮೇಶ್, ಮಾಹಾಂತೇಶ್, ಅಜಯ್, ಲೋಕೇಶ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.