ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ಗ್ರಾಮದ ಆಶ್ರಯ ಕಾಲನಿ ನಿವಾಸಿ ಸೋಮವ್ವ ಕುಟುಂಬದ ಮನೆಯು ಕಳೆದ ಮಳೆಗಾಲದಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಮನೆ ಕಳೆದುಕೊಂಡ ಸೋಮವ್ವ, ತನ್ನ ಮನೆ ಪುನರ್ ನಿರ್ಮಿಸಿಕೊಡಲು ಮಾಡಿದ ಮನವಿಗೆ ಸ್ಪಂದಿಸಿದ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ದಾನಿಗಳ ಸಹಕಾರದಿಂದ ಮನೆ ಪುನರ್ ನಿರ್ಮಾಣ ಮಾಡಿಕೊಡಲಾಯಿತು.
ಸೋಮವ್ವ ಅನೇಕ ವಷಗಳಿಂದ ಮಂಗಳೂರಿನ ಪಚ್ಚನಾಡಿ ಗ್ರಾಮದ ಆಶ್ರಯ ಕಾಲನಿ ಯಲ್ಲಿ ೩ ಹೆಣ್ಣು ಮಕ್ಕಳ ಜೊತೆ ವಾಸವಿದ್ದು ಪತಿ ಇದ್ದರು ಸಂಸಾರದ ಕಡೆ ಗಮನಕೊಡದೆ ಬಿಟ್ಟು ಹೋಗಿದ್ದು ಸೋಮವ್ವ ಮನೆಕೆಲಸ ಮಾಡಿ ೩ ಹೆಣ್ಣು ಮಕ್ಕಳನ್ನ ಒಳ್ಳೆಯ ವಿದ್ಯಾಭ್ಯಾಸ ನೀಡಿ ಸಾಕುತ್ತಿದ್ದಾರೆ. ಕಳೆದ ಮಳೆಗಾಲದಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಮನೆ ಕಳೆದುಕೊಂಡ ಸೋಮವ್ವ, ತನ್ನ ೩ ಹೆಣ್ಣು ಮಕ್ಕಳ ಜೊತೆ ದಿಕ್ಕು ತೋಚದಂತ್ತೆ ಇದ್ದ ಸಂದರ್ಭ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಮತ್ತು ಇತರ ದಾನಿಗಳ ಸಹಾಯದಿಂದ ನೂತನ ಮನೆ ನಿರ್ಮಾಣ ವಾಗಿ ಹಸ್ತಾಂತರ ಮಾಡಲಾಯಿತು.
ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೇದಮೂರ್ತಿ ಲಕ್ಷ್ಮಿ ನಾರಾಯಣ ಅಸ್ರಣ್ಣ, ಅರ್ಜುನ್ ಭಂಡಾರ್ಕರ್ , ಲೋಲ ಸಾಲಿಯಾನ್ , ಶೇಖರ್ ಪದವಿನಂಗಡಿ, ಆಶಾ ಹೆಗ್ಡೆ , ಮೋಹನ್ ಪಚ್ಚನಾಡಿ ,ರಾಜೇಶ್ ಕುಲಾಲ್ , ನಟರಾಜ್ ಪಚ್ಚನಾಡಿ , ವಿನಾಯಕ ಭಟ್ ಉಪಸ್ಥಿತರಿದ್ದು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು . ಬಳಿಕ ನೆರೆದ ಅತಿಥಿಗಳು ಶುಭ ಕೋರಿದರು