ಬೆಳ್ತಂಗಡಿ: ಚುನಾವಣೆಯ ಕೊನೆಯ ಹಂತದಲ್ಲಿ ಹಣ ಪಡೆದು ಸೆಟ್ ಆಗುತ್ತಾರೆ ಎಂಬ ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿ ಆರೋಪ ಹಿನ್ನೆಲೆಯಲ್ಲಿ ಗೋಕಾಕ್ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿ ಅಶೋಕ್ ಪೂಜಾರಿಯಿಂದ ಧರ್ಮಸ್ಥಳ ಕ್ಷೇತ್ರದಲ್ಲಿ ಆಣೆ ಪ್ರಮಾಣ ಕೈಗೊಂಡರು.
ನಾನು ನೈತಿಕತೆಯ ರಾಜಕಾರಣ ಮಾಡಿದವನು, ಅದನ್ನು ನನ್ನ ಕ್ಷೇತ್ರದ ಮತದಾರರಿಗೆ ತಿಳಿಸಬೇಕು ಎಂಬ ಕಾರಣದಿಂದ ದೈವೀಶಕ್ತಿ ಮಂಜುನಾಥನ ಮುಂದೆ ತನ್ನ ಕ್ಷೇತ್ರದ ಸಾವಿರಾರು ಮತದಾರರ ಎದುರಿನಲ್ಲಿ ನಾನು ನನ್ನ ರಾಜಕೀಯ ಜೀವನದಲ್ಲಿ ಎಂದೂ ಎದುರಾಳಿಯಿಂದ ದುಡ್ಡು ತೆಗೆದುಕೊಂಡು ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಎಂಬುದಾಗಿ ಮಂಜುನಾಥ ದೇವರ ಮುಂದೆ ಆಣೆ ಪ್ರಮಾಣ ಮಾಡಿದ್ದೇನೆ ಎಂದ ಅವರು, ನಾವು ಒಟ್ಟು ಐದು ಮಂದಿ ಕಾಂಗ್ರೇಸ್ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದೇವೆ. ನನ್ನ ಹೋರಾಟ ಹಾಗೂ ಅನುಭವದ ರಾಜಕೀಯದ ಹಿನ್ನೆಲೆಯಲ್ಲಿ ನನಗೆ ಟಿಕೆಟ್ ಸಿಗುವ ಭರವಸೆ ಇದೆ ಎಂದು ಅಶೋಕ್ ಪೂಜಾರಿ ಹೇಳಿದರು.