ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 21ನೇ ಪದವು ಪಶ್ಚಿಮ ವಾರ್ಡಿನ ನಾಲ್ಯಪದವು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 8 ಕೊಠಡಿಗಳು ಮತ್ತು ಸರಕಾರಿ ಪ್ರೌಢ ಶಾಲೆಯಲ್ಲಿ 2 ಕೊಠಡಿಗಳು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ಕೊಠಡಿಗಳು ಸೇರಿದಂತೆ ಒಟ್ಟು 12 ಕೊಠಡಿಗಳ ನಿರ್ಮಾಣಕ್ಕೆ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್, ಒಟ್ಟಾರೆ 2.60 ಕೋಟಿ ರೂ ವೆಚ್ಚದಲ್ಲಿ ನಾನಾ ಕಾಮಗಾರಿಗಳು ನಡೆಯಲಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ಶಕ್ತಿನಗರದ ಸುತ್ತ ಮುತ್ತಲಿನ ಮಕ್ಕಳು ವಿಧ್ಯಾಭ್ಯಾಸವನ್ನು ಮುಂದುವರಿಸಲು ಪಿ.ಯು ಕಾಲೇಜು ಕೂಡ ಸ್ಥಾಪನೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಉಪಮೇಯರ್ ಪೂರ್ಣಿಮಾ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಕಿಶೋರ್ ಕೊಟ್ಟಾರಿ, ಸ್ಥಳೀಯ ಕಾರ್ಪೋರೇಟರ್ ವನಿತಾ ಪ್ರಸಾದ್, ಮುಖಂಡರಾದ ರವಿಚಂದ್ರ, ಪ್ರಸಾದ್, ವಿಜಯ್ ಶೆಣೈ, ಸ್ಥಳೀಯ ಕಾರ್ಪೊರೇಟರ್ ವನಿತಾ ಪ್ರಸಾದ್, ಪುರುಷೋತ್ತಮ್ ಭಟ್, ರಾಜೇಂದ್ರ ಕುಲರವಾಡ, ರವಿಚಂದ್ರ, ವಿಜಯ ಶೆಣೈ, ಪುರುಷೋತ್ತಮ ಜೋಗಿ, ಪದ್ಮನಾಭ, ವಿಜಯ ಶೆಟ್ಟಿ, ಅಶೋಕ, ರಘು ಆಚಾರ್ಯ, ಕುಶಲ್ ಕುಮಾರ್, ಪ್ರಶಾಂತ, ಬಾಲಕೃಷ್ಣ ಜಿ, ಶೋಭಾ ಶೇಖರ, ನಾಗೇಶ, ಮಾಲತಿ, ಲತಾ, ಪುಷ್ಪ, ವಿನಯ, ಅಮೃತ, ರಮೇಶ್ ಬಿಜೂರು, ಚಂದ್ರಹಾಸ, ಗಾಯತ್ರಿ, ಸುಶೀಲಾ, ನಾರಾಯಣ ಡಿ, ಸುಂದರ ಡಿ, ಗಣೇಶ್ ಪ್ರಭು, ರಾಜೇಶ್ ಕೆ., ಪಿ.ಯು ಕಾಲೇಜು ಪ್ರಾಂಶುಪಾಲರಾದ ಜಯಾನಂದ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ, ಜಿ.ಪಂ. ಕೊಠಡಿಗಳ ಅನುಷ್ಠಾನ ಅಧಿಕಾರಿಗಳು, ಸ್ಥಳೀಯ ನಿವಾಸಿಗಳು, ಸೇರಿದಂತೆ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.