ಮಂಗಳೂರು: ಹವಾಮಾನ ಇಲಾಖೆ ಕಳೆದ ಕೆಲ ದಿನಗಳ ಹಿಂದೆ ಕರಾವಳಿ ಭಾಗಕ್ಕೆ ಬಿಸಿಗಾಳಿ ಪ್ರಭಾವ ಹೆಚ್ಚುವ ಎಚ್ಚರಿಕೆ ನೀಡಿತ್ತು. ಇದೀಗ ಮಾ.8ರಂದು ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚುವ ಸಾಧ್ಯತೆ ಇದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ಬಿಸಿಗಾಳಿಯ ಕಾರಣ ಮಾ.8ರಂದು ರಾತ್ರಿಯವರೆಗೆ 2 ಮೀಟರ್ ವರೆಗೆ ಅಲೆಗಳ ಅಬ್ಬರ ಇರುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.